ಕನ್ನಡ ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಧಾರಾವಾಹಿ ಎಂದರೆ ಅದು ಜೊತೆ ಜೊತೆಯಲಿ ಧಾರಾವಾಹಿ. ವಯ್ಯಸಾದವರಿಂದ ಹಿಡಿದು ಹರಿ ಹರಿಯದ ಹುಡುಗ,ಹುಡುಗಿಯರ ತನಕ ಈ ಧಾರಾವಾಹಿಯನ್ನು ತಪ್ಪದೆ ವೀಕ್ಷಿಸುತ್ತಾರೆ.
ಅಲ್ಲದೇ ಈ ಧಾರಾವಾಹಿ ತೆರೆಕಂಡ ಕೇವಲ ಮೂರ್ನಾಲ್ಕು ತಿಂಗಳಲ್ಲೇ ನಾಯಕಿ ಮೇಘಾನಾ ಶೆಟ್ಟಿ ಇಂದ ಹಿಡಿದು ಅನೇಕ ಕಲಾವಿದರಿಗೆ ದೊಡ್ಡ ಮಟ್ಟದ ಹೆಸರು ಮತ್ತು ಖ್ಯಾತಿ ತಂದು ಕೊಟ್ಟಿದೆ. ಇನ್ನು ಈ ಧಾರಾವಾಹಿಯಲ್ಲಿ ಪ್ರತಿಯೊಂದು ಪಾತ್ರಕ್ಕೂ ಕೂಡ ಮಹತ್ವವಿದೆ.
ಕನ್ನಡ ಕಿರುತೆರೆಯ ನಂಬರ್ ಒನ್ ವಾಹಿನಿಯಾಗಿರುವ ಜೀ ಕನ್ನಡದಲ್ಲಿ ಗಟ್ಟಿಮೇಳ ಹಾಗೂ ಜೊತೆಜೊತೆಯಲಿ ಧಾರಾವಾಹಿಗಳು ವರ್ಷದ ಕಾಲದಿಂದ ಟಾಪ್ ಎರಡು ಧಾರಾವಾಹಿಗಳಾಗಿವೆ.
ಕಳೆದ ಎರಡು ವರುಷಗಳಿಂದ ಪ್ರಸಾರವಾಗುತ್ತಿರುವ ಗಟ್ಟೀಮೇಳ ಧಾರಾವಾಹಿಯೂ ಜನರ ಅಚ್ಚುಮೆಚ್ಚಿನ ಧಾರಾವಾಹಿಯಾಗಿದ್ದು, ಟಿ.ಆರ್ ಪಿ ಯಲ್ಲೂ ಮೂಂಚೂಣೆಯಲ್ಲಿದೆ. ಧಾರಾವಾಹಿಯ ಪ್ರತಿಯೊಬ್ಬ ಕಲಾವಿದರು ಕೂಡ ಖ್ಯಾತಿಗಳಿಸಿದ್ದು, ಅದರಲ್ಲಿ ಅಮೂಲ್ಯ ವೇದಾಂತ್ ಪಾತ್ರ ಬಹಳ ಮುಖ್ಯ.
ಹೆಣ್ಣನ್ನು ದ್ವೇಷಿಸುವ ಪಾತ್ರದಲ್ಲಿ ವೇದಾಂತ್, ಈ ಉದ್ಯಮಿಯ ಬಾಳಲ್ಲಿ ಅಮೂಲ್ಯ ಪಾದಾರ್ಪಣೆ ಮಾಡುತ್ತಾಳೆ. ಸದ್ಯ ಇದೀಗ ಅಮೂಲ್ಯ, ಈ ಧಾರಾವಾಹಿಯ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದು, ಕಿರುತೆರೆ ಲೋಕದ ಟಾಪ್ ನಟಿಯಾಗಿದ್ದಾರೆ. ನಟಿ ಅಮೂಲ್ಯ ಹಾಗು ವೇದಾಂತ್ ಮಾಡಿರುವ ಈ ಚಿಂದಿ ಡ್ಯಾನ್ಸ್ ನೋಡಿ.
Gattimela amulya vedanth Romantic Dance on Stage