ಸದ್ಯ ಇತ್ತೀಚಿನ ದಿನಗಳಲಂತೂ ಅರಣ್ಯದಲ್ಲಿ ರೆಸಾರ್ಟ್ ನಿರ್ಮಿಸಿ ಪ್ರವಾಸೋದ್ಯಮ ಬೆಳೆಸುವುದೇ ಅಭಿವೃದ್ಧಿ ಎಂಬುದು ಅಧಿಕಾರಿಗಳ ತನಗೆ ಬಂದುಬಿಟ್ಟಿದೆ. ಅರಣ್ಯ ಪ್ರದೇಶ ದಿನೇ ದಿನೆ ಸಂಕುಚಿತವಾಗುತ್ತಿದ್ದು, ಕೈಗಾರಿಕೆ, ನಗರೀಕರಣ, ಆರ್ಥಿಕ ಪ್ರಗತಿಯಿಂದ ಅರಣ್ಯಗಳ ಒತ್ತಡಗಳು ಹೆಚ್ಚಾಗಿ ಬಿಟ್ಟಿದೆ.
ಇದರಿಂದ ಪ್ರಾಣಿಗಳಿಗೆ ಆಹಾರ, ನೀರು ಮತ್ತು ಸಂತಾನ ಅಭಿವೃದ್ಧಿಗೆ ಸ್ಥಳವಿಲ್ಲದಂತಾಗಿದ್ದು,ಅರಣ್ಯ ಪ್ರದೇಶ ಸಂಕುಚಿತವಾಗುತ್ತಿರುವುದೇ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಇವುಗಳ ಪರಿಣಾಮವೆಂಬಂತೆ ಪ್ರಾಣಿ ಮತ್ತು ಮಾನವ ಸಂಘರ್ಷ ದಿನೇ ದಿನೇ ಹೆಚ್ಚಾಗುತ್ತಿದೆ ಎಂದೇ ಹೇಳಬಹುದು. ಸುಮಾರು 30 ವರ್ಷಗಳಲ್ಲಿ ಪ್ರಾಣಿ ಹಾಗೂ ಮಾನವ ಸಂಘರ್ಷ ಹೆಚ್ಚಾಗಿದ್ದು, ಅರಣ್ಯ ಇಲಾಖೆಯ ದಾಖಲೆಗಳು ಸ್ಪಷ್ಟವಾಗಿ ಇದನ್ನು ನೋಡಬಹುದು.
ಆದರೆ ದಿನದಿಂದ ದಿನಕ್ಕೆ ಈ ಸಂಘರ್ಷ ಹೆಚ್ಚಲು ಕಾರಣವೇನು? ಕಾಡುಪ್ರಾಣಿಗಳು ಕಾಡು ಬಿಟ್ಟು ನಾಡಿಗೆ ಏಕೆ ಬರುತ್ತಿವೆ? ಎಂಬ ಪ್ರಶ್ನೆಗೆ ಸುಲಭವಾಗಿ ಉತ್ತರ ಕೂಡ ಸಿಗುವುದಿಲ್ಲ. ನಾಡಿಗೆ ಬರುವ ಪ್ರಾಣಿಗಳನ್ನು ಕಾಡಿಗೆ ಸ್ಥಳಾಂತರಿಸಬೇಕು ಎನ್ನುವುದೂ ಇದಕ್ಕೆ ಪರಿಹಾರವೂ ಅಲ್ಲ. ಇದೀಗ ಹಂದಿ ಹಿಡಿಯಲು ಒಬ್ಬ ಯುವಕ ಮಾಡಿದ ಪ್ಲಾನ್ ವೈರಲ್ ಆಗಿದೆ ನೋಡಿ .