ಸದ್ಯಸ್ಯಾಂಡಲ್ ವುಡ್ ಗೆ (Sandalwood) ಈಗಾಗಲೇ ನೆನಪಿರಲಿ ಪ್ರೇಮ್ (Nenapirali Pream) ಪುತ್ರಿ ಎಂಟ್ರಿ ಕೊಟ್ಟಿದ್ದು ಸ್ಯಾಂಡಲ್ ವುಡ್ನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ನಟ ಪ್ರೇಮ್ ರವರು ಇದೀಗ ಮಗಳ(Daughter) ಸಿನಿಮಾ ಎಂಟ್ರಿಯ ಬಗ್ಗೆ ಎಕ್ಸಾಯಿಟ್ (Excite) ಆಗಿದ್ದಾರೆ.
ಅಂದಹಾಗೆ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್(Amrutha Pream) ಬಣ್ಣದ ಲೋಕಕ್ಕೆ ಬರ್ತಾರೆ ಎನ್ನುವ ಸುದ್ದಿ ಅನೇಕ ದಿನಗಳಿಂದ ಕೇಳಿಬರುತ್ತಿದ್ದು ಇದೀಗ ಅಧಿಕೃತವಾಗಿದೆ. ಇನ್ನು ಇತ್ತೀಚಿಗಷ್ಟೆ ಸ್ಯಾಂಡಲ್ ವುಡ್(Sandalwood) ಖ್ಯಾತ ನಟಿ ಮಾಲಾಶ್ರೀ(Malashree( ಪುತ್ರಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಮಾಲಾಶ್ರೀ ಪುತ್ರಿ ಎಂಟ್ರಿಯ(Entry) ಬೆನ್ನಲ್ಲೇ ಮತ್ತೋರ್ವ ಖ್ಯಾತ ನಟ ಪ್ರೇಮ್ ಪುತ್ರಿಯ ಎಂಟ್ರಿ ಕನ್ನಡ ಅಭಿಮಾನಿಗಳಿಗೆ(Fans)ಸಂತಸ ತಂದಿದೆ ಎನ್ನಬಹುದು.
ಅಂದಹಾಗೆ ಅಮೃತಾ (Amrutha) ಅವರನ್ನು ಬಣ್ಣದ ಲೋಕಕ್ಕೆ ಪರಿಚಯಿಸುತ್ತಿದ್ದಾರೆ ಡಾಲಿ ಧನಂಜಯ್ (Daali Dhananjay). ಹೌದು, ಡಾಲಿ ಧನಂಜಯ್ ನಿರ್ಮಾಣದ ಡಾಲಿ ಪಿಕ್ಚರ್ಸ್ನಿಂದ ಅಮೃತಾ ಪ್ರೇಮ್ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅಂದಹಾಗೆ ಸಿನಿಮಾಗೆ ಟಗರು ಪಲ್ಯಾ(Tagaru Palya) ಎಂದು ನಾಮಕರಣ ಮಾಡಲಾಗಿದೆ. ಇನ್ನು ಟಗರ್ ಪಲ್ಯಾ ಸಿನಿಮಾ ಘೋಷಣೆಯಾಗಿ ಅನೇಕ ದಿನಗಳಾಗಿತ್ತು.
ಆದರೆ ನಾಯಕ ಮತ್ತು ನಾಯಕಿ ವಿಚಾರ ಬಹಿರಂಗವಾಗಿರಲಿಲ್ಲ. ಇದೀಗ ಸೂಪರ್ ವಿಚಾರವನ್ನು ಡಾಲಿ ಪಿಕ್ಚರ್ಸ್ ರಿವೀಲ್ ಮಾಡಿದ್ದು ಟಗರ್ ಪಲ್ಯಾ ಸಿನಿಮಾಗೆ ಅಮೃತಾ ಪ್ರೇಮ್ ನಾಯಕಿಯಾದರೆ ನಾಯಕನಾಗಿ ನಾಗಭೂಷಣ್(Nagabhushan) ಕಾಣಿಸಿಕೊಳ್ಳುತ್ತಿದ್ದಾರೆ. ಇದೊಂದು ಪಕ್ಕಾ ಹಳ್ಳಿ ಸೊಗಡಿನ ಸಿನಿಮಾವಾಗಿದೆ.
ಸದ್ಯ ಈಗಾಗಲೇ ಟಗರು ಪಲ್ಯಾ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದುಬಅಮೃತಾ ಪ್ರೇಮ್ ಕೆಂಪು ಮತ್ತು ಹಳದಿ ಬಣ್ಣದ ದಾವಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಪಕ್ಕಾ ಸಂಪ್ರದಾಯಸ್ಥ ಹೆಣ್ಣು ಮಗಳ ಲುಕ್ನಲ್ಲಿ ಪೋಸ್ ನೀಡಿದ್ದಾರೆ.
ಅಮೃತಾ ಫೋಟೋ ಲುಕ್ ಅಭಿಮಾನಿಗಳ ಹೃದಯ ಗೆದ್ದಿದ್ದು ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಇನ್ನು ಡಾಲಿ ಧನಂಜಯ್ ತನ್ನ ನಿರ್ಮಾಣ ಸಂಸ್ಥೆಯಿಂದ ಹೊಸ ಪ್ರತಿಭೆಗಳನ್ನು ಪರಿಚಯಿಸುವುದಾಗಿ ಹೇಳಿದ್ದರು. ಅದರಂತೆ ಹೊಸ ಪ್ರತಿಭೆಗಳನ್ನು ಲಾಂಚ್ ಮಾಡುತ್ತಿದ್ದಾರೆ. ಸದ್ಯ ಟಗರು ಪಲ್ಯಾ ಅನೌನ್ಸ್ ಆಗಿದೆ. ಈ ಚಿತ್ರಕ್ಕೆ ಉಮೇಶ್ ಕೆ ಕೃಪ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಇನ್ನು ಟಗರು ಸಿನಿಮಾ ಡಾಲಿ ಧನಂಜಯ್ ಅವರ ಸಿನಿ ಜೀವನಕ್ಕೆ ದೊಡ್ಡ ಬ್ರೇಕ್ ಕೊಟ್ಟ ಸಿನಿಮಾವಾಗಿದೆ. ಅದೆ ಹೆಸರಿನಲ್ಲಿ ಈಗ ತನ್ನದೇ ಬ್ಯಾನರ್ ನಲ್ಲಿ ಸಿನಿಮಾ ಮಾಡುತ್ತಿದ್ದು ಈ ಸಿನಿಮಾ ಬಗ್ಗೆ ಹಾಗೂ ಪ್ರೇಮ್ ಪುತ್ರಿಯ ಡಾಲಿ ಪಿಕ್ಚರ್ ನಮ್ಮ ಪ್ರೀತಿಯ ನೆನಪಿರಲಿ ಪ್ರೇಮ್ ಅಣ್ಣನ ಮಗಳನ್ನು ಕನ್ನಡದ ಮಣ್ಣಿನ ಸೊಗಡಿನ ಮಗಳಾಗಿ ನಮ್ಮ ಸಂಸ್ಥೆಯ ಮೂರನೆ ಕಾಣಿಕೆ ಟಗರು ಪಲ್ಯ ಸಿನೆಮಾದ ಮೂಲಕ ಪರಿಚಯಿಸುತ್ತಿದ್ದೇವೆ.
ಅಮೃತಾ ಪ್ರೇಮ್ ಕನ್ನಡದ ಮನೆ ಮಗಳಾಗಿ ಬೆಳಗಲಿ ಬೆಳೆಯಲಿ. ನಿಮ್ಮ ಪ್ರೀತಿ ಇರಲಿ. ಹರಸಿ. ಹಾರೈಸಿ ಎಂದು ಹೇಳಿದೆ. ಪ್ರಸ್ತುತ ಬಯೋ ಮೆಡಿಕಲ್ ಎಂಜಿನಿಯರಿಂಗ್ (Biomedical Engineering) ಓದುತ್ತಿರುವ ಅಮೃತ ಓದು ಮುಂದುವರಿಸುವುದರ ಜೊತೆಗೆ ಚಿತ್ರರಂಗದಲ್ಲೂ ತೊಡಗಿಸಿಕೊಳ್ಳಲಿದ್ದಾರೆ.ಅಮೃತಾ ಹಲವು ರೀಲ್ಸ್ (Reels) ಮಾಡುತ್ತಿದ್ದರು.
ಈ ವಿಡಿಯೋವನ್ನು ತಂದೆ ಪ್ರೇಮ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡುತ್ತಿದ್ದರು.ಈಗ ಅಮೃತಾ ಅವರ ಸೊಂಟ ಬಳುಕಿಸುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು ಪುಷ್ಪವತಿ ಹಾಡುಗೆ ಹೇಗೆ ಕುಣಿಸಿದ್ದಾರೆ ನೀವೆ ನೋಡಿ.