ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಪನ್ನಾ ಖ್ಯಾತಿಯ ನಟಿ ನೀತಾ ಅಶೋಕ್ ಅವರು ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಪ್ರಿಯತಮ ಪ್ರೇಮ ನಿವೇದನೆ ಮಾಡಿರುವ ಫೋಟೋವನ್ನು ನೀತಾ ಅಶೋಕ್ ರವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸತೀಶ್ ಮೆಸ್ತಾ ಎನ್ನುವವರನ್ನು ನೀತಾ ಅಶೋಕ್ ನಿಶ್ಚಿತಾರ್ಥ ಮಾಡಿಕೊಂಡಿದ್ದು ಸತೀಶ್ ಮೆಸ್ತಾ ನೀತಾ ಅಶೋಕ್ ಇಬ್ಬರೂ ಸ್ನೇಹಿತರು. ಕಾಲೇಜಿನಿಂದಲೇ ಇವರಿಬ್ಬರು ಸ್ನೇಹಿತರಾಗಿದ್ದು ಸದ್ಯ ಈಗ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ.
ಸತೀಶ್ ಮೆಸ್ತಾ ಅವರು ಕಾಲೇಜ್ ಬೀಚ್ನಲ್ಲಿ ನೀತಾಗೆ ಪ್ರೇಮ ನಿವೇದನೆ ಮಾಡಿದ್ದು ಈ ಜೋಡಿ ಯಾವಾಗ ಮದುವೆಯಾಗಲಿದೆ ಎಂಬುದನ್ನು ಇನ್ನೂ ಹೇಳಿಲ್ಲ. ಇನ್ನು ಸಾಕಷ್ಟು ಜನರು ನೀತಾ ಅಶೋಕ್ ಜೋಡಿಗೆ ಶುಭಾಶಯ ತಿಳಿಸಿದ್ದಾರೆ.
ಸತೀಶ್ ಮೆಸ್ತಾ ವೃತ್ತಿ ಏನು? ಹಿನ್ನಲೆ ಏನು? ಎಂಬುದು ಇನ್ನೂ ಕೂಡ ಬಹಿರಂಗವಾಗಿಲ್ಲ. ಹೌದು ಅವರ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ. ಎಸ್ಸೆಸ್ಸೆಲ್ಸಿ ನಂತರ ಪಿಯುಸಿ ಕಾಮರ್ಸ್ ಆಯ್ಕೆ ಮಾಡಿಕೊಂಡು ಎಂಬಿಎ ಓದಬೇಕೆಂದು ನಿರ್ಧರಿಸಿದ್ದ ನೀತಾ ಅಶೋಕ್ ಅವರು ಯಶೋದೆ ಎಂಬ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಪಡೆದರು. ನೀತಾ ಅಶೋಕ್ಗೆ ಫೇಸ್ಬುಕ್ ಮೂಲಕ ಈ ಅವಕಾಶ ಸಿಕ್ಕಿತ್ತು.
ಇನ್ನು ಉಡುಪಿ ಸಮೀಪದ ಕೋಟದ ನೀತಾ ಅಶೋಕ್ ಅವರು ಎಂಬಿಎ ಮುಗಿಸಿದ್ದಯ ನಾ ನಿನ್ನ ಬಿಡಲಾರೆ ಸೇರಿದಂತೆ ನೀತಾ ಅವರು ಹಿಂದಿಯ ಧಾರಾವಾಹಿಗಳಲ್ಲಿ ಕೂಡ ಕಾಣಿಸಿಕೊಂಡಿದ್ದರು. ಕಿಚ್ಚ ಸುದೀಪ್ ಅವರೇ ನೀತಾ ಅಶೋಕ್ಗೆ ಫೋನ್ ಮಾಡಿ ವಿಕ್ರಾಂತ್ ರೋಣ ಚಿತ್ರದ ಆಫರ್ ನೀಡಿದ್ದರಂತೆ.ಕಿಚ್ಚ ಸುದೀಪ್ ರವರ ಸಿನಿಮಾದಲ್ಲಿ ನಿರೂಪ್ ಭಂಡಾರಿ ಅವರ ಜೊತೆ ನೀತಾ ಅಶೋಕ್ ಅಭಿನಯಿಸಿದ್ದು ಅಪರ್ಣಾ ಬಲ್ಲಾಳ್ ಅಥವಾ ಪನ್ನಾ ಪಾತ್ರದಲ್ಲಿ ನೀತಾ ಅಶೋಕ್ ನಟಿಸಿ ಜನರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.