ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಅಪ್ಪನಂತೆ ಎಲ್ಲರನ್ನು ನಗಿಸಿದ ಸಿಲ್ಲಿಲಲ್ಲಿ ರವಿಶಂಕರ್ ಮಗ….ಚಿಂದಿ ವಿಡಿಯೋ

3,915

90 ದಶಕದಲ್ಲಿ ಹುಟ್ಟಿದವರು ಸಿಲ್ಲಿ ಲಲ್ಲಿ ಎಂದ ತಕ್ಷಣ ಥಟ್ ಎಂದು ನಿಂತು ಬಿಡುತ್ತಾರೆ. ಅಷ್ಟರ ಮಟ್ಟಿಗೆ ಈ ಧಾರವಾಹಿ ಕನ್ನಡಿಗರ ಮನೆ ಮಾತಾಗಿತ್ತು. ಈಟಿವಿ ಕನ್ನಡ ವಾಹಿನಿಯಲಿ ಪ್ರಸಾವಸಗುತ್ತಿದ್ದ ಈ ನಗೆ ಚಟಾಕಿ ಧಾರಾವಾಹಿಯನ್ನು ಫೈನಲ್ ಕಟ್ ನಿರ್ಮಾಣ ಸಂಸ್ಥೆಯಡಿ ವಿಜಯ್ ಪ್ರಸಾದ್ ನಿರ್ದೇಶಿಸುತ್ತಿದ್ದರು.

 

ಡಾ. ವಿಟ್ಟಲ್ ರಾವ್ ಅವರ ಕುಟುಂಬ ಮತ್ತು ಅವರ ದಿನನಿತ್ಯದ ಚಟುವಟಿಕೆಗಳನ್ನು ಪ್ರದರ್ಶಿಸುತ್ತಾ ಜನರಿಗೆ ಹೊಟ್ಟೆ ಹುಣ್ಣಾಗುವಂತೆ ನಗೆಸುತ್ತಿದ್ದ ಬರೋಬ್ಬರಿ 1162 ಸಂಚಿಕೆಗಳನ್ನು ಪ್ರಸಾರ ಮಾಡಿ ಹೊಸದೊಂದು ದಾಖಲೆಯನ್ನೇ ಬರೆದಿತ್ತು. ಇನ್ನು ಈಗಿನ ಜನಪ್ರಿಯ ನಟರಾದ ಯಶ್ ಮತ್ತು ಗಣೇಶ್ ಅವರು ಕೂಡ ಈ ಧಾರಾವಾಹಿಯಲ್ಲಿ ಅತಿಥಿ ಪಾತ್ರಗಳನ್ನು ನಿರ್ವಹಿಸಿದ್ದರು.

ಡಾಕ್ಟರ್ ವಿಠ್ಠಲ್ ರಾವ್ ವೆರಿ ಫೇಮಸ್ ಇನ್ ಸರ್ಜರಿ ಆ್ಯಂಡ್ ಬರ್ಜರಿ ಕಮಾನ್ ಟೆಲ್ ಮಿ ವಾಟ್ ಇಸ್ ಯುವರ್ ಪ್ರಾಬ್ಲಂ ಆ್ಯಂಡ್ ಶೊ ಮಿ ಯುವರ್ ಲಾಂಗ್ ಟಂಗ್ ಅರೆ ರವಿ ಶಂಕರ್ ಅವರ ಬಾಯಿಂದ ಬರುವ ಈ ಸಂಭಾಷಣೆ ಆಗಿನ ಸಮಯದಲ್ಲಿ ದೊಡ್ಡ ಟ್ರೆಂಡ್ ಅನ್ನೆ ಸ್ರುಷ್ಟಿ ಮಾಡಿತ್ತು. ಅವರ ಈ ಒಂದು ಸಂಭಾಷಣೆ ಕೇಳಲು ಹಾಗೂ ಅವರ ಪಾತ್ರ ನೋಡಲು ಅದೆಷ್ಟು ಜನರು ಕಾದು ಕುಳಿತಿರುತ್ತಿದ್ದರು.

 

ಸಿಲ್ಲಿ ಲಲ್ಲಿ ಮುಗಿದ ಬಳಿಕ ಕಿರುತೆರೆಯಿಂದ ಬಹಳ ದೂರ ಉಳಿದಿದ್ದ ರವಿಶಂಕರ್ ಅವರು, ಒಂದೆರಡು ಸಿನಿಮಾದಲ್ಲಿ ನಾಯಕನಾಗಿಯೂ ಕೂಡ ಬಣ್ಣ ಹಚ್ಚಿದ್ದರು. ಆದರೆ ಅದ್ಯಾವುದು ಕೂಡ ಅವರಿಗೆ ಯಶಸ್ಸು ತಂದುಕೊಟ್ಟಿರಲಿಲ್ಲ. ನಂತರ ಹಾಸ್ಯ ನಟನಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಇವರು ಸಾಕಷ್ಟು ಜನಪ್ರಿಯತೆ ಗಳಿಸಿದರು.

 

ಹೌದು ವಿಠ್ಠಲ್ ಪಾತ್ರ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಈಗಲೂ ಈ ಪಾತ್ರ ನೆನೆದು ರವಿಶಂಕರ್ ಅವರನ್ನು ಅದೇ ಹೆಸರಿನಲ್ಲಿ ಗುರುತಿಸುತ್ತಾರೆ. ಅಷ್ಟರ ಮಟ್ಟಿಗೆ ಜನಪ್ರಿಯತೆ ಪಡೆದುಕೊಂಡಿತ್ತು ಡಾ.ವಿಠ್ಠಲ್ ರಾವ್ ಪಾತ್ರ. ಸಿಲ್ಲಿ ಲಲ್ಲಿ ನಂತರ ರವಿಶಂಕರ್ ಗೌಡ ಅವರು ಹೆಚ್ಚಿನ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳಲಿಲ್ಲ.

 

ಬದಲಿಗೆ ಸಿನಿಮಾ ನಟನೆ ಶುರು ಮಾಡಿದ್ದು ಅನೇಕ ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಮತ್ತು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಒಂದೆರಡು ಸಿನಿಮಾಗಳಲ್ಲಿ ಹೀರೋ ಆಗಿ ಸಹ ನಟಿಸಿ ಜನಪ್ರಿಯತೆ ಪಡೆದುಕೊಂಡಿದ್ದಾರೆ.

 

ಇನ್ನು ನಟ ರವಿಶಂಕರ್ ಅವರು ಒಳ್ಳೆಯ ಹಾಡುಗಾರ ಕೂಡ ಹೌದು. ಸಂಗೀತಕ್ಕೆ ಸೇರಿದ ಮನೆಯ ಹುಡುಗಿಯ ಜೊತೆಯಲ್ಲೇ ಮದುವೆಯಾಗಿದ್ದು ಕನ್ನಡದ ಖ್ಯಾತ ಗಾಯಕಿ ಮಂಜುಳಾ ಗುರುರಾಜ್ ಅವರ ಮಗಳು ಸಂಗೀತ ಗುರುರಾಜ್ ಅವರೊಡನೆ ಮದುವೆಯಾಗಿದ್ದಾರೆ. ಈ ಜೋಡಿಗೆ ಇಬ್ಬರು ಮಕ್ಕಳು. ಹಲವು ವರ್ಷಗಳಿಂದ ಸುಖವಾದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ ರವಿಶಂಕರ್ ಗೌಡ ಮತ್ತು ಸಂಗೀತ ಗುರುರಾಜ್.

 

ಇತ್ತೀಚೆಗೆ ರವಿಶಂಕರ್ ಗೌಡ ಅವರು ಹೊಸ ಮನೆಯೊಂದನ್ನು ಕಟ್ಟಿಸಿ ಗೃಹಪ್ರವೇಶ ಮಾಡಿದ್ದು ಇವರ ಮನೆಯ ಗೃಹಪ್ರವೇಶಕ್ಕೆ ಇವರ ಕುಟುಂಬದವರು ಕನ್ನಡ ಚಿತ್ರರಂಗದ ಖ್ಯಾತ ಕಲಾವಿದರು ಸಾಕಷ್ಟು ಜನರು ಆಗಮಿಸಿದ್ದರು.

 

ಹೌದು ಸಿನಿಮಾರಂಗದಲ್ಲಿ ಸದಾ ಸಕ್ರಿಯರಾಗಿರುವಂತಹ ರವಿಶಂಕರ್ ಗೌಡ ಅವರು ಇದೀಗ ತಮ್ಮ ಕನಸಿನ ಮನೆಯೊಂದನ್ನು ನಿರ್ಮಿಸಿಕೊಂಡಿದ್ದು ಇತ್ತೀಚೆಗೆ ಆ ಮನೆಯ ಗ್ರಹಪ್ರವೇಶವನ್ನೂ ಕೂಡ ಅದ್ದೂರಿಯಾಗಿ ಮಾಡಿದ್ದಾರೆ. ಅವರ ಕನಸಿನ ಮನೆಯನ್ನು ತುಂಬಾ ಸುಂದರವಾಗಿ ನಿರ್ಮಿಸಿದ್ದು ಅತ್ಯಾಧುನಿಕ ರೀತಿಯಲ್ಲಿ ಮನೆಯನ್ನು ನಿರ್ಮಾಣ ಮಾಡಿಕೊಂಡಿದ್ದಾರೆ.

 

ಸಾಂಪ್ರದಾಯಕವಾಗಿ ಮನೆಯ ಗ್ರಹಪ್ರವೇಶವನ್ನು ಮಾಡಿದ್ದು ಚಿತ್ರರಂಗದ ಅನೇಕ ಗಣ್ಯರು ಇವರ ಮನೆಗೆ ಭೇಟಿ ನೀಡಿ ಅವರಿಗೆ ಶುಭ ಹಾರೈಸಿದ್ದಾರೆ.ನವರಸ ನಾಯಕ ಜಗ್ಗೇಶ್ ಅವರು ಗೋಲ್ಡನ್ ಸ್ಟಾರ್ ಗಣೇಶ್ ಅವರ ಕುಟುಂಬ ಶಾಲಿನಿ ಅವರು ಇನ್ನೂ ಅನೇಕರು ಇವರ ಮನೆಗೆ ಭೇಟಿ ನೀಡಿ ಅವರಿಗೆ ಶುಭವನ್ನು ಹಾರೈಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್ ಆಗಿದ್ದು ರವಶಂಕರ್ ಪುತ್ರ ತನ್ನ ಅಪ್ಪನಂತೆ ಎಲ್ಲರನ್ನು ಹೇಗೆ ನಗಿಸುತ್ತಾರೆ ನೀವೆ ನೋಡಿ..