ವಾರ್ತಾ ಮಂಜರಿ
Trending Stories, Viral News, Gossips & Everything in Kannada

ನಟಿ ರಕ್ಷಿತಾ ಪ್ರೇಮ್ ಮದುವೆ ಹೇಗಿತ್ತು ನೋಡಿ…ಚಿಂದಿ ವಿಡಿಯೋ

4,000

Rakshitha Prem Marriage Photos: ಮುಂಬೈನಲ್ಲಿ ಹುಟ್ಟು ಬೆಳೆದ ಶ್ವೇತಾ ಅಂದರೆ ಕನ್ನಡಿಗರ ಪ್ರೀತಿಯ ಫೇವರಿಟ್ ಹೀರೋಯಿನ್ ಕ್ರೇಜಿ ಕ್ವೀನ್ ರಕ್ಷಿತಾ ರವರು ಕನ್ನಡ ತೆಲುಗು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೌದು ಇವರು ಕನ್ನಡಿಗರ ಸುಂಟರಗಾಳಿಯ ಬೆಡಗಿ. ರಕ್ಷಿತಾ ತಂದೆ ಪ್ರಖ್ಯಾತ ಕ್ಯಾಮರಾಮ್ಯಾನ್ ಗೌರಿಶಂಕರ್ ಅವರಾಗಿದ್ದು ಹಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ಯಶಸ್ಸಿನಲ್ಲಿದ್ದಾಗಲೇ ನಿರ್ದೇಶಕ ಪ್ರೇಮ್ ಅವರನ್ನು ಮದುವೆಯಾಗಿದ್ದು ಮಾತ್ರ ಆಗ ಹಲವರಿಗೆ ಶಾಕ್ ನೀಡಿತ್ತು ಎನ್ನಬಹುದು.

ಇನ್ನು ಪ್ರೇಮ್ ಅವರು ಮೂಲತಃ ಮಂಡ್ಯದವರು. ಇಂಗ್ಲಿಷ್ ಗೊತ್ತಿಲ್ಲ. ಆದರೆ ರಕ್ಷಿತಾ ಮಾತ್ರ ಸಿಟಿಯಲ್ಲಿ ಶ್ರೀಮಂತ ಮನೆಯಲ್ಲಿ ಬೆಳೆದವರು. ರಕ್ಷಿತಾಗೆ ಹಳ್ಳಿಯ ಬದುಕು ಸೊಗಡಿನ ಬಗ್ಗೆ ಏನೂ ಗೊತ್ತಿಲ್ಲ. ಇನ್ನು ಇವರಿಬ್ಬರು ಹೇಗೆ ಪ್ರೀತಿ ಮಾಡಿದರು? ಹೇಗೆ ಮದುವೆಯಾದರು ಎಂಬುದು ಹಲವರಿಗೆ ಇನ್ನೂ ಆಶ್ಚರ್ಯವಾಗಿ ಉಳಿದಿದೆ. ಮನಸು ಮನಸುಗಳು ಒಂದಾದರೆ ಇನ್ನೇನು ಬೇಕು ಅಲ್ಲವೇ? ಹಾಗೆಯೇ ರಕ್ಷಿತಾ-ಪ್ರೇಮ್ ಪ್ರೀತಿಸಿ ಮದುವೆಯಾದರು. ಇಂದು ಈ ದಂಪತಿಗೆ ಸೂರ್ಯ ಎಂಬ ಮಗ ಕೂಡ ಇದ್ದಾನೆ.

ರಕ್ಷಿತಾರ ಮದುವೆ ರಾಜರಾಜೇಶ್ವರಿ ನಗರದಲ್ಲಿ ನಡೆದಿದ್ದು ಸಾವಿರಾರು ಜನರು ಈ ಮದುವೆಗೆ ಸಾಕ್ಷಿಯಾಗಿದ್ದರು. ಚಿಕ್ಕ ಚಿಕ್ಕ ಮಕ್ಕಳು ವಿಕಲಚೇತನರು ಕೂಡ ಈ ಮದುವೆಗೆ ಹೂವು ಹಾಕಿ ಹಾರೈಸಿದ್ದರಂತೆ. ಮದುವೆಯಾದಮೇಲೆ ರಕ್ಷಿತಾ ಪ್ರೇಮ್ ಕೂಡ ತುಂಬ ಬದಲಾದರು. ಇನ್ನು ರಕ್ಷಿತಾ ರಾಗಿಮುದ್ದೆ ತಿನ್ನೋದು ಕಲಿತಿದ್ದಾರೆ ಪ್ರೇಮ್ ಕೂಡ ಚೈನೀಸ್ ಫುಡ್‌ ತಿನ್ನುತ್ತಿದ್ದಾರೆ. ಹಬ್ಬಗಳನ್ನು ರಕ್ಷಿತಾ ಈಗ ಸಂಪ್ರದಾಯಬದ್ಧವಾಗಿ ಆಚರಿಸುತ್ತಿದ್ದು ಮದುವೆ ಮುನ್ನ ಸ್ವತಂತ್ರವಾಗಿದ್ದ ರಕ್ಷಿತಾ ಪ್ರೇಮ್‌ರಿಂದಾಗಿ ಅವಲಂವಿಯಾದರಂತೆ.

ಇನ್ನು ರಕ್ಷಿತಾ ತಂದೆ ತಾಯಿ ಸಪರೇಟ್ ಆಗಿದ್ದರು. ಇವರು ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡರು. ಮದುವೆ ಬಗ್ಗೆ ರಕ್ಷಿತಾಗೆ ಮೊದಲು ನಂಬಿಕೆಯಿರಲಿಲ್ಲ. ಆದರೆ ಪ್ರೇಮ್ ಅವರಲ್ಲಿ ತಂದೆಯ ಗುಣಗಳನ್ನು ಕಂಡ ರಕ್ಷಿತಾ ಅವರನ್ನೇ ಮದುವೆಯಾಗಲು ನಿರ್ಧಾರ ಮಾಡಿದ್ದು ನಟ ಪ್ರೇಮ್‌ಗೆ ಯಾವುದೇ ದುಶ್ಚಟಗಳಿಲ್ಲ.

ಹೀಗಾಗಿ ರಕ್ಷಿತಾಗೆ ಬಯ್ಯಲು ಕಾರಣ ಕೂಡ ಇಲ್ಲವಂತೆ. 2007ರಲ್ಲಿ ಮದುವೆಯಾಗಿದ್ದ ರಕ್ಷಿತಾ ಪ್ರೇಮ್ ಇಂದು ಖುಷಿ ಖುಷಿಯಾಗಿ ಜೀವನ ನಡೆಸುತ್ತಿದ್ದಾರೆ. ಮದುವೆ ದಿನ ಕೂಡ ರಕ್ಷಿತಾ ತಾಯಿ ನಿಜವಾಗಲೂ ಗಂಭೀರವಾಗಿದ್ದೀಯಾ? ಈಗಲಾದರೂ ಹೇಳು ಇಷ್ಟ ಇಲ್ಲ ಅಂದ್ರೆ ಓಡಿಹೋಗು ಅಂತ ಹೇಳಿದ್ದರಂತೆ.

ಸದ್ಯ ರಕ್ಷಿತಾ ಮತ್ತು ಪ್ರೇಮ್ ದಂಪತಿ ಮದುವೆಯಾಗಿ 15 ವರ್ಷಗಳಾಗಿದೆ. ಹೀಗಾಗಿ ತಮ್ಮ 15ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಹೌದು ರಕ್ಷಿತಾ ಅವರು ತಮ್ಮ ಮದುವೆ ವಾರ್ಷಿಕೋತ್ಸವ ಸಂಭ್ರಮದಂದು ಸ್ನೇಹಿತರ ದಿನಾಚರಣೆಗೆ ಶುಭ ಕೂರಿದ್ದರು.

 

ಈ ಮೂಲಕ ತಮ್ಮ ವಿವಾಹ ವಾರ್ಷಿಕೋತ್ಸವವ ಫ್ರೆಂಡ್‍ಶಿಪ್ ಡೇಗೆ ಹೋಲಿಸಿದ್ದು ಸ್ನೇಹಿತರ ದಿನಾಚರಣೆಗೆ ಶುಭಾಯಗಳು. ನಾವಿಬ್ಬರು ಮದುವೆಯಾಗಿ 15 ವರ್ಷಗಳಾಗಿದೆ. ನಾವಿಬ್ಬರು ಹೀಗೆ ಮುಂದಕ್ಕೂ ಇರುತ್ತೇವೆ ಎಂದು ನಾನು ಭಾವಿಸಿದ್ದೇನೆ. ಯಾವಾಗಲೂ ಸಂತೋಷವಾಗಿರಿ. ದೇವರು ನಿಮಗೆ ಆರ್ಶೀವಾದ ಮಾಡಲಿ ಎಂದು ರಕ್ಷಿತಾ ಅವರು ಇನ್ಸ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು. ಈ ಬೆನ್ನಲ್ಲೆ ವಿಡಿಯೋವೊಂದು ವೈರಲ್ ಆಗಿದ್ದು ಇದರಲ್ಲಿ ಪ್ರೇಮ್ ಹಾಗೂ ರಕ್ಷಿತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ಷಣ ನೋಡಬಹುದು.