ವಾರ್ತಾ ಮಂಜರಿ
Trending Stories, Viral News, Gossips & Everything in Kannada

ನಟಿ ನಿಖಿತಾಳನ್ನು ಎತ್ತಿ ಡಾನ್ಸ್ ಮಾಡಿದ ಡಿಬಾಸ್…ಚಿಂದಿ ವಿಡಿಯೋ

23,740

Darshan dance with actress Nikita Tukral : ಕನ್ನಡ ಚಿತ್ರರಂಗದಲ್ಲಿ ಕ್ವೀನ್ ಎಂದು ಯಾವುದಾದರು ಬಿರುದು ಇದ್ದರೆ ಅದು ಎವರ್ ಗ್ರೀನ್ ರಮ್ಯಾ ಅವರಿಗೆ ಮಾತ್ರ ಎನ್ನಬಹುದು. ಯಾರೇ ಇರಲಿ ಯಾರೇ ಬರಲಿ ನಿನ್ನ ರೇಂಜಿಗೆ ಯಾರಿಲ್ಲ ಎಂದು ಈಗಲೂ ಕೂಡ ಸಾಮಾಜಿಕ ಜಾಲತಾಣದಲ್ಲಿ ರಮ್ಯಾ ಅವರ ಫೋಟೋ ಜೊತೆಗೆ ಬರೆದ ಸಾಲುಗಳು ಆಗಾಗ ಕಾಣಿಸುತ್ತಲೇ ಇರುತ್ತವೇ. ಕನ್ನಡದ ಬಹಳಷ್ಟು ಸಿನಿಪ್ರಿಯರ ನೆಚ್ಚಿನ ನಟಿಯಾದ ರಮ್ಯಾ ಎನಾದರು ಎಲ್ಲಿದ್ದಾರೆ ಎಂಬ ಕುತೂಹಲ ಸಾಕಷ್ಟು ವರುಷಗಳಿಂದ ಅಭಿಮಾನಿಗಳಿಗಿತ್ತು.

ಅದಕ್ಕೆಲ್ಲಾ ಈಗಾಗಲೇ ಉತ್ತರ ಕೂಡ ಸಿಕ್ಕಿದೆ. ಸ್ಯಾಂಡಲ್ವುಡ್ ನಲ್ಲಿ ಸ್ಟಾರ್ ನಟಿಯಾಗಿ ಕನ್ನಡದ ಟಾಪ್ ಹೀರೋಯಿನ್ ಆಗಿ ಮಿಂಚುತ್ತಿದ್ದ ಸಮಯದಲ್ಲಿ ರಾಜಕೀಯದ ಕಡೆ ಮುಖ ಮಾಡಿದ್ದರು. ರಮ್ಯಾ ಅವರು ಸರಿ ನಿರ್ಧಾರವೋ ತಪ್ಪು ನಿರ್ಧಾರವೋ ತಿಳಿದಿಲ್ಲ. ಆದರೆ ಅವರ ಸಿನಿಮಾ ಅಭಿಮಾನಿಗಳಿಗಂತೂ ಬಹಳಷ್ಟು ಬೇಸರ ತರಿಸಿದ್ದಂತೂ ಮಾತ್ರ ಸತ್ಯ. ಸಿನಿಮಾದಿಂದ ಧಿಡೀರ್ ರಾಜಕಾರಣಕ್ಕೆ ಬಂದ ರಮ್ಯಾ ಅವರು ಮಂಡ್ಯ ಲೋಕಸಭಾ ಉಪಚುಮಾವಣೆಯಲ್ಲಿ ನಿಂತು ಗೆದ್ದು ಸಂಸದರೂ ಆದರು. ಆದರೆ ಮತ್ತೊಂದು ಚುನಾವಣೆಯಲ್ಲಿ ಸಂಸದರಾಗುವ ಅವಕಾಶ ದೊರಕಲೇಯಿಲ್ಲ.

ಇನ್ನು ರಾಹುಲ್ ಗಾಂಧಿ ಅವರೊಂದಿಗೆ ಬಹಳಾನೇ ಆಪ್ತರಾಗಿದ್ದ ರಮ್ಯಾ ಅವರು ಕಾಂಗ್ರೆಸ್ ನ ಸಾಮಾಜಿಕ ಜಾಲತಾಣದ ಹೆಡ್ ಕೂಡ ಆಗಿದ್ದರು. ಆದರೆ ಅವರ ಕೆಲ ಪೋಸ್ಟ್ ಗಳು ಕಾಂಗ್ರೆಸ್ ಪಕ್ಷಕ್ಕೆ ಕೊಂಚ ಮುಜುಗರವನ್ನುಂಟು ಮಾಡಿದ್ದು ಕೆಲ ದಿನಗಳ ನಂತರ ತಮ್ಮ ಪದವಿ ತ್ಯಜಿಸಿದ ಅವರು ಸಾಮಾಜಿಕ ಜಾಲತಾಣದಿಂದ ಕೂಡ ದೂರ ಉಳಿದರು. ರಾಜಕೀಯಕ್ಕೂ ಬರುವ ಮುನ್ನ ಅಮೇರಿಕಾದ ಹುಡುಗನೊಬ್ಬನ ಜೊತೆ ಮದುವೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ರಾಜಕೀಯಕ್ಕೆ ಬಂದ ನಂತರ ಆ ವಿಚಾರ ಮತ್ತೆ ಎಲ್ಲಿಯೂ ಸುದ್ದಿಯಾಗಲೇಯಿಲ್ಲ. ರಮ್ಯಾ ಅವರ ಮದುವೆ ವಿಚಾರವೂ ಕೂಡ ಅಲ್ಲಿಯೇ ನಿಂತು ಹೋಯಿತು.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ರಮ್ಯಾ ಅವರು ಸ್ಯಾಂಡಲ್ವುಡ್ ನಲ್ಲಿ ಬ್ಯುಸಿ ಆಗಿದ್ದಾಗ ಸಾಲು ಸಾಲು ಚಿತ್ರಗಳನ್ನು ಮಾಡುತ್ತಿದ್ದರು. ಆ ಸಮಯದಲ್ಲಿ ಬೆಂಗಳೂರಿನಲ್ಲಿಯೇ ಸೆಟಲ್ ಆಗಿದ್ದ ಅವರು ನಂತರ ಮಂಡ್ಯದ ಲೋಕಸಭಾ ಸದಸ್ಯೆಯಾದ ಬಳಿಕ ಮಂಡ್ಯದಲ್ಲಿ‌ ಒಂದು ಬಾಡಿಗೆ ಮನೆಯನ್ನೂ ಸಹ ಮಾಡಿಕೊಂಡಿದ್ದರು. ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ಅವರು ಮಂಡ್ಯದಲ್ಲಿನ ಮನೆಯನ್ನು ಖಾಲಿ ಮಾಡಿದ್ದರು ಎಂಬ ಸುದ್ದಿಯಿದೆ.

ಇತ್ತ ಬೆಂಗಳೂರಿನಲ್ಲಿಯೂ ಕಾಣದ ಅತ್ತ ಮಂಡ್ಯದಲ್ಲಿಯೂ ಮನೆ ಖಾಲಿ ಮಾಡಿದ ರಮ್ಯ ಅವರು ಸದ್ಯ ಎಲ್ಲಿದ್ದಾರೆ ಎಂದು ಬಹಳಷ್ಟು ಜನರು ಪ್ರಶ್ನಿಸಿದ್ದರು. ರಮ್ಯಾ ಅವರು ಬೆಂಗಳೂರಿನಿಂದ ದೂರಾದ ನಂತರ ಸದ್ಯ ದೆಹಲಿಯಲ್ಲಿ ಸೆಟಲ್ ಆಗಿದ್ದು ಅಲ್ಲಿಯೇ ವಾಸವಿದ್ದರು.

ಅವರೊಟ್ಟಿಗೆ ಮೂರು ನಾಯಿ ಮರಿಗಳನ್ನು ಸಾಕಿಕೊಂಡು ನಾನು ಇವರೊಡನೆಯೇ ಡೇಟ್ ಮಾಡುತ್ತಿರುವೆ ಎಂದು ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ್ದರು.ದೆಹಲಿಯಲ್ಲೊ ಸೆಟಲ್ ಆಗಿದ್ದ ಸ್ಯಾಂಡಲ್ವುಡ್ ನ ಮೋಹಕ ತಾರೆ ರಮ್ಯಾ ಅವರು ಕನ್ನಡ ಚಿತ್ರರಂಗಕ್ಕೆ ಮರಳಲಿ ಮತ್ತೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿ ಎಂಬುದೇ ಅಭಿಮಾನಿಗಳ ಆಶಯವಾಗಿತ್ತು. ಸದ್ಯ ಇದೀಗ ಅಭಿಮಾನಿಗಳ ಆಸೆಗೆ ತೆರೆಬಿದ್ದಿದ್ದು ಉತ್ತರಕಾಂಡ ಎಂಬ ಸಿನಿಮಾ ಮೂಲಕ ಮತ್ತೆ ರಮ್ಯಾ ಕಮ್ ಬ್ಯಾಕ್ ಮಾಡಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ರಮ್ಯಾ ಅವರ ಅಭಿಮಾನಿಗಳು ಹಳೆಯ ವಿಡಿಯೋವನ್ನು ಪೋಸ್ಟ್ ವೈರಲ್ ಮಾಡಿಸುತ್ತಿರುತ್ತಾರೆ.ಹೌದು ಈ ಹಿಂದೆ ಡ್ಯಾನ್ಸ್ ಡ್ಯಾನ್ಸ್ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಸಂಚಿಕೆಗೆ ವಿಶೇಷ ಅತಿಥಿಯಾಗಿ ದರ್ಶನ್ ಭಾಗವಹಿಸಿದ್ದು ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿದ್ದ ನಟಿ ಶ್ರುತಿ ಹರಿಹರನ್ ಸಿನಿಮಾದಲ್ಲಿ ಬಿಜಿಯಾದ ನಂತರ ಅವರ ಜಾಗಕ್ಕೆ ಆಗಮಿಸಿ ಜೋಡಿಗಳಿಗೆ ಮಾರ್ಕ್ಸ್ ಕೊಡಲು ಶುರು ಮಾಡಿದ್ದು ಹಾಟ್ ನಟಿ ನಿಖಿತಾ.

ಇನ್ನು ಡ್ಯಾನ್ಸ್ ಡ್ಯಾನ್ಸ್ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಎಪಿಸೋಡ್ ನಲ್ಲಿ ನಟ ದರ್ಶನ್ ಜೊತೆ ನಟಿ ರಮ್ಯಾ ಕೂಡ ಭಾಗವಹಿಸಿದ್ದರು.ನಟ ದರ್ಶನ್ ನಟಿ ರಮ್ಯಾ ನಿಖಿತಾ ಶರ್ಮಿಳಾ ಮಾಂಡ್ರೆ ಡ್ಯಾನ್ಸ್ ಡ್ಯಾನ್ಸ್ ವೇದಿಕೆ ಮೇಲೆ ಕುಣಿದು ಕುಪ್ಪಳಿಸಿದ್ದು ಇದೀಗ ಈ ವಿಡಿಯೋ ಬಹಳ ವೈರಲ್ ಆಗಿದೆ. ಹೌದು ದಚ್ಚು ಹಾಗೂ ರಮ್ಯಾ ಹೇಗೆ ಕುಣಿದಿದ್ದಾರೆ ನೀವೆ ಕೆಳಗಿನ ವಿಡಿಯೋದಲ್ಲಿ ನೋಡಿ.