ವಾರ್ತಾ ಮಂಜರಿ
Trending Stories, Viral News, Gossips & Everything in Kannada

ತೈಲವಾ ರಜನೀಕಾಂತ್ ಸ್ಟೈಲ್ ನಲ್ಲಿ ವಾಕ್ ಮಾಡಿದ ರಿಷಬ್…ಚಿಂದಿ ವಿಡಿಯೋ

12,923

ಸದ್ಯ ಕನ್ನಡದ ಸ್ಟಾರ್ ಸುವರ್ಣ ಚಾನೆಲ್ ಹೊಸ ಪ್ರಯೋಗಗಳನ್ನ ಮಾಡ್ತಾನೇ ಇರುತ್ತದೆ. ಹೌದು ಧಾರವಾಹಿ ರಿಯಾಲಿಟಿ ಶೋ ಹೀಗೆ ವಿವಿಧ ಕಾರ್ಯಕ್ರಮಗಳನ್ನ ಮಾಡುತ್ತಾ ಬಂದಿದ್ದು ಈ ಹಿಂದೆ ಗಾನಬಜಾನ ಹೆಸರಿನ ರಿಯಾಲಿಟಿ ಶೋ ಕೂಡ ಆರಂಭಗೊಂಡಿತ್ತು.

ಇನ್ನು ಈ ಶೋ ನಿಜಕ್ಕೂ ವಿಶೇಷವಾಗಿಯೇ ಇತ್ತು. ಹಾಡು-ಆಟ-ಮಸ್ತಿ ಎಲ್ಲವೂ ಈ ಒಂದು ಗಾನಬಜಾನ ಶೋದಲ್ಲಿ ಇದ್ದವ. ಇನ್ನು ಈ ಶೋದ ಉದ್ದೇಶ ಕೂಡ ಇದೇ ಆಗಿದ್ದು ಈಗಾಗಲೇ ಎರಡು ಸೀಸನ್ ಮೂಲಕ ಜನರನ್ನ ಈ ಶೋ ರಂಜಿಸಿದೆ. ಸದ್ಯ ಗಾನಬಜಾನ ಸೀಸನ್-3ಗೆ ಅಕುಲ್ ಬಾಲಾಜಿ ಆ್ಯಂಕರ್ ಆಗಿದ್ದಾರೆ. ಹೌದು ಸಿನಿಮಾ ತಾರೆಯರು ಭಾಗವಹಿಸೋ ಈ ರಿಯಾಲಿಟಿ ಶೋದಲ್ಲಿ ಒಂದು ಹೊಸ ಚಾರ್ಮ್​ ಬಂದಂತಿದ್ದು ಈ ಹಿಂದಿನ ಸ್ಟಾರ್ ಸುವರ್ಣ ಕಾರ್ಯಕ್ರಮಕ್ಕೆ ಅಕುಲ್ ಬಾಲಾಜಿ ಆ್ಯಂಕರ್ ಆಗಿರುತ್ತಿದ್ದರು.

ಆದರೆ ಇದೀಗ ಗಾನಬಜಾನ ಶೋ ಮೂಲಕ ಮತ್ತೊಮ್ಮೆ ಧಮಾಕಾ ಮಾಡೋಕೆ ಅಕುಲ್ ಬಾಲಾಜಿ ಸಜ್ಜಾಗಿದ್ದು ಈ ಶೋದ ಸೀಸನ್-02 ಅನ್ನ ಈ ಹಿಂದೆ ನಿರಂಜನ್ ದೇಶಪಾಂಡೆ ನಿರೂಪಣೆ ಮಾಡುತ್ತಿದ್ದರು. ಅದಕ್ಕೂ ಮೊದಲು ಬಂದ ಸೀಸನ್-1 ಅನ್ನ ನಾಯಕ ನಟ ಲೂಸ ಮಾದ ಯೋಗಿ ನಿರೂಪಿಸಿದ್ದರು. ಗಾನಬಜಾನ ಸೀಸನ್-3 ಕಳೆದ ವಾರದಿಂದಲೇ ಪ್ರಸಾರ ಆಗುತ್ತದ್ದು ಭರ್ಜರಿಯಾಗಿ ಗ್ರಾಂಡ್ ಓಪನ್ ಆಗಿದೆ. ಇನ್ನು ಈ ಶೋದ ಇನ್ನಷ್ಟು ವಿವರಣೆ ನೀಡೋದಾದ್ರೆ ಸೆಲೆಬ್ರಿಟಿಗಳು ಈ ಒಂದು ಶೋದಲ್ಲಿ ಭಾಗಿ ಆಗುತ್ತಾರೆ.

ಹೌದು ಎರಡು ತಂಡಗಳಾಗಿಯೆ ಅವರನ್ನ ಇಲ್ಲಿ ವಿಂಗಡಿಸಲಾಗುತ್ತದೆ. ಆಮೇಲೆ ಹಾಡು-ಕುಣಿತ-ತಮಾಷೆ ಎಲ್ಲವೂ ಇರುತ್ತದೆ. ಹೆಚ್ಚಿಗೆ ಸ್ಕೋರ್ ಮಾಡೋ ಸೆಲೆಬ್ರಿಟಿಗಳನ್ನ ಇಲ್ಲಿ ವಿನ್ನರ್ ಎಂದು ಕೂಡ ಘೋಷಿಸಲಾಗುತ್ತದೆ. ಹೀಗೆ ಮನರಂಜನೆಯನ್ನ ಒಳಗೊಂಡ ಈ ಶೋ ಭರ್ಜರಿಯಾಗಿ ಒಪನಿಂಗ್ ಪಡೆದುಕೊಂಡಿದ್ದು ಕಪಲೆದ ಭಾನುವಾರ ಶೋ ಮೊದಲ ಎಪಿಸೋಡ್ ಪ್ರಸಾರ ಆಗಿದೆ.

ಸದ್ಯ ಕಾರ್ಯಕ್ರಮದ ಗ್ರಾಂಡ್ ಓಪನಿಂಗ್ ದಿನ ದೇಶವೇ ಮೆಚ್ಚಿಕೊಂಡ ಕಾಂತಾರ ಸಿನಿಮಾ ತಂಡದವರು ಭಾಗವಹಿಸಿದ್ದು ರಿಷಬ್ ಶೆಟ್ಟಿ ಸಪ್ತಮಿ ಗೌಡ ಸ್ವರಾಜ್ ಶೆಟ್ಟಿ, ರಂಜನ್ ಸೇರಿದಂತೆ ಇನ್ನು ಅನೇಕರು ಗಾನಬಜಾನ ಸೀಸನ್ 3 ಸೆಟ್ ನಲ್ಲಿ ಮಸ್ತ್ ಮಜಾ ಮಾಡಿ ಬೊಂಬಾಟ್ ಆಗಿ ಮನೋರಂಜನೆ ನೀಡಿದ್ದಾರೆ.

ಈ ತಂಡ ಸಾಕಷ್ಟು ಫನ್ ಗೇಮ್‌ಗಳನ್ನು ಆಡಿದ್ದು ಎಲ್ಲರಿಗೂ ರಸದೌತಣ ನೀಡಿದೆ ಎನ್ನಬಹುದು.ಇನ್ನು ಕಾರ್ಯಕ್ರಮದಲ್ಲಿ ರಿಷಬ್ ರವರು ರಜನಿಕಾಂತ್ ರವರನ್ನಿ ಬೇಟಿಯಾದ ಕ್ಷಣವನ್ನು ಸ್ಮರಿಸಿದ್ದು ಜೊತೆಗೆ ರಜನಿ ಕೊಟ್ಟ ಚಿನ್ನದ ಸರವನ್ನು ಕೂಡ ತೋರಿಸಿದ್ದಾರೆ. ಅಲ್ಲದೇ ರಜನಿ ಅವರ ಮಿಮಿಕ್ರಿ ಕೂಡ ಮಾಡಿದ್ದು ಈ ಎಲ್ಲಾ ಕ್ಷಣವನ್ನು ಲೇಖನಿಯ ಕೆಳಗೆ ಹಂಚಿಕೊಂಡಿರುವ ವಿಡಿಯೋದಲ್ಲಿ ನೋಡವಹುದು.