ಸಾಮಾನ್ಯವಾಗಿ ಮನೆಯಲ್ಲಿ ಸಾಕು ಪ್ರಾಣಿಗಳಿದ್ದರೆ ಅದರಿಂದ ಬಹಳ ಉಪಯೋಗಗಳಿವೆ ಎನ್ನುತ್ತವೆ ಸಂಶೋಧನೆಗಳು. ಹೌದು ಆರೋಗ್ಯ ಮಾನಸಿಕ ನೆಮ್ಮದಿ ಎಲ್ಲವನ್ನು ಮನೆಯಲ್ಲಿನ ಸಾಕು ಪ್ರಾಣಿಗಳು ಸುಧಾರಿಸುತ್ತವಂತೆ. ಇನ್ನು ಇತ್ತೀಚಿಗಿನ ದಿನಗಳಲ್ಲಿ ಮನೆಯಲ್ಲಿ ಸಾಕು ಪ್ರಾಣಿಗಳನ್ನು ಸಾಕುವುದು ಒಂದು ಜವಾಬ್ದಾರಿಯುತ ಕೆಲಸವಾಗಿದೆ.
ಅದರಲ್ಲೂ ಕೂಡ ಸಿಟಿ ಲೈಫ್ನಲ್ಲಿ ಸಾಕು ಪ್ರಾಣಿಗಳ ಬಗ್ಗೆ ಅತಿಯಾದ ಕೇರ್ ತೆಗೆದುಕೊಳ್ಳುವುದು ಅನಿವಾರ್ಯ. ವಕೇಷನ್ಗಳಲ್ಲಿ ವೀಕೆಂಡಲ್ಲಿ ಹೊರಗಡೆ ಹೋಗುವಾಗ ಮಾತ್ರ ಸಾಕು ಪ್ರಾಣಿಗಳ ಆರೈಕೆ ಒಂದು ದೊಡ್ಡ ತಲೆನೋವು. ಇನ್ನು ಈ ಎಲ್ಲ ಕಾರಣಗಳ ಹೊರತಾಗಿಯೂ ಸಾಕು ಪ್ರಾಣಿಗಳನ್ನು ಸಾಕುವುದರಿಂದ ಸಾಕಷ್ಟು ಉಪಯೋಗ ಇದೆ.
ಇನ್ನು ನಿಮ್ಮ ಮನೆಯ ನಾಯಿಯ ಜತೆಗೆ ದಿನಾಲೂ ಬೆಳಗ್ಗೆ ಸಂಜೆ ವಾಕ್ ಹೋದರೆ ದೇಹಕ್ಕೆ ಉತ್ತಮ ವ್ಯಾಯಾಮ ಸಿಗುತ್ತದೆ. ಹೌದು ಈ ರೀತಿ ದಿನಲೂ ವಾಕ್ ಹೋಗುವುದರಿಂದ ದೇಹದ ಕೊಲೆಸ್ಟ್ರಾಲ್ ಹತೋಟಿಯಲ್ಲಿರುತ್ತದೆ. ಅಲ್ಲದೆ ಒಂಟಿಯಾಗಿ ಒಂದಷ್ಟು ದೂರ ನಡೆಯುವ ಬದಲು ನಿಮ್ಮ ಮನೆಯ ಸದಸ್ಯನಂತಿರುವ ನಾಯಿಯ ಜತೆ ಇದ್ದರೆ ಮನಸ್ಸಿಗೂ ಖುಷಿ ಸಿಗುತ್ತದೆ.
ಇನ್ನು ಮೀನು ಬೆಕ್ಕು ನಾಯಿ ಪಕ್ಷಿಗಳು ಒತ್ತಡವನ್ನು ನಿವಾರಿಸುತ್ತದೆ. ಅವುಗಳ ಓಡಾಟ ವರ್ತನೆ ನಿಮ್ಮಲ್ಲಿ ಹೊಸ ಹುರುಪು ತುಂಬುತ್ತದೆ. ಹೌದು ಅಲ್ಲದೆ ಕೆಲವು ಪ್ರಾಣಿಗಳು ಎಷ್ಟು ಚುರುಕಾಗಿರುತ್ತವೆ ಅಂದರೆ ತಮ್ಮ ಯಜಮಾನನ ಮನಸ್ಸು ಸರಿ ಇಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತವೆ ಮತ್ತು ಅವರ ಮೂಡ್ ಸರಿ ಮಾಡಲು ತಮ್ಮಿಂದಾಗುವ ಎಲ್ಲ ಪ್ರಯತ್ನ ಮಾಡುತ್ತವೆ.ಬೇಗ ಟೆನ್ಸ್ ಆಗುವುದು ಅತಿಯಾಗಿ ಚಿಂತೆ ಮಾಡುವ ವ್ಯಕ್ತಿಗಳು ಮನೆಯಲ್ಲಿ ಮದ್ದಿಗೆ ಸಾಕು ಪ್ರಾಣಿಗಳನ್ನು ಸಾಕಿದರೆ ಅರ್ಧಕರ್ದ ಸಮಸ್ಯೆ ದೂರವಾಗುತ್ತದೆ.
ಇನ್ನು ಮನೆಯಲ್ಲಿ ಸಾಕು ಪ್ರಾಣಿಗಳಿದ್ದರೆ ಅಲರ್ಜಿ ಆಗಬಹುದು ಮಕ್ಕಳಿಗೆ ಸೋಂಕು ತಗುಲಬಹುದು ಎಂದು ಹೆದರಬೇಕಾಗಿಲ್ಲ. ಆದರೆ ಸಣ್ಣ ಮಕ್ಕಳ ಸುತ್ತ ಸಾಕು ಪ್ರಾಣಿಗಳು ಓಡಾಡುತ್ತಿದ್ದರೆ ಅವುಗಳ ಇಮ್ಯುನಿಟಿ ಪವರ್ ಹೆಚ್ಚಲಿದ್ದು ಇದನ್ನು ಸಾಖಷ್ಟು ಅಧ್ಯಯನಗಳು ಸಾಬೀತು ಮಾಡಿವೆ. ಇನ್ನು ಪೆಟ್ಸ್ ಆತ್ಮ ವಿಶ್ವಾಸ ಹೆಚ್ಚಿಸುತ್ತವೆ. ಅವುಗಳು ತೋರುವ ಪ್ರೀತಿ ಸದಾ ಬಳಿಯೇ ಸುತ್ತುತ್ತಿರುವಾಗ ಸಿಗುವ ಕಾಳಜಿ ನಮ್ಮ ಸೆಲ್ಪ್ ಎಸ್ಟೀಮ್ ಹೆಚ್ಚಿಸುತ್ತವೆ ಎಂದು ಅಧ್ಯಯನಗಳು ತೋರಿಸುತ್ತವೆ.
ಇನ್ನು ಸಾಕು ಪ್ರಾಣಿಗಳು ನಮ್ಮ ನೋವನ್ನು ಕಡಿಮೆ ಮಾಡುತ್ತವೆ. ಅದರಲ್ಲೂ ಕ್ರೋನಿಕ್ ಇಲ್ನೆಸ್ನಿಂದ ಬಳಲುವವರು ಸಾಕು ಪ್ರಾಣಿಗಳ ಸಂಗದಲ್ಲಿ ಚೇತರಿಸಿಕೊಂಡ ಉದಾಹರಣೆಗಳಿದ್ದು ಪ್ರಾಣಿಗಳನ್ನು ಮುದ್ದು ಮಾಡುವಾಗ ಹಾಗೂ ಅವು ವಾಪಾಸು ಅಷ್ಟೇ ಪ್ರೀತಿಯನ್ನು ತೊರುವಾಗ ರೋಗಿಗಳು ನೋವು ಮರೆಯುವ ಸಾಧ್ಯತೆಗಳು ಹೆಚ್ಚಿವೆ. ಆದರೆ ಮನೆಯಲ್ಲಿ ವ್ಯಾಘ್ರಗಳಾದ ಹುಲಿ ಸಿಂಹ ಸಾಕಲು ಸಾಧ್ಯವೇ? ಸಾಕಿದರೆ ಉಪಯೋಗವಾಗುತ್ತದೇ? ನಮ್ಮ ದೇಶದಲ್ಲಿ ಇದು ಸಾಧ್ಯವಿಲ್ಲ ಆದರೆ ವಿದೇಶದಲ್ಲಿ ಈ ವ್ಯಾಘ್ಯಗಳ ಜೊತೆ ಕುಟುಂಬವೊಂದು ಹೇಗೆ ಜೀವನ ಮಾಡುತ್ತಿದೆ ನೀವೆ ಕೆಳಗಿನ ವಿಡಿಯೋದಲ್ಲಿ ನೋಡಿ.