ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಮಲಯಾಳಂ ನಲ್ಲಿ ಹಾಡು ಹೇಳಿದ ಸುದೀಪ್ ಪತ್ನಿ ಪ್ರಿಯಾ …ಚಿಂದಿ ವಿಡಿಯೋ

3,431

Kiccha Sudeep Wife Priya Sing Malayalam Song : ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.? ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಸಹ ಸುದೀಪ್ ಎಂದರೆ ಅಚ್ಚುಮೆಚ್ಚು.

ಇನ್ನು ಸುದೀಪ್ ಅವರು ಶಿವಮೊಗ್ಗದವರು ಪ್ರಾಥಮಿಕ ಶಿಕ್ಷಣವನ್ನು ಶಿವಮೊಗ್ಗದಲ್ಲೇ ಪಡೆಯುತ್ತಾರೆ. ತದ ನಂತರ ಬೆಂಗಳೂರಿಗೆ  ಸ್ವಿಫ್ಟ್ ಆಗುತ್ತಾರೆ. ಇನ್ನು ಸುದೀಪ್ ಅವರ ತಂದೆ ದೊಡ್ಡ ಬಿಸಿನೆಸ್ ಮ್ಯಾನ್ ಆಗಿದ್ದು ಅಲ್ಲದೆ ಅವರದು ಹೋಟೆಲ್ ಇಂದಿಗೂ ಕೂಡ ಬೆಂಗಳೂರಿನಲ್ಲಿದೆ.

ಇನ್ನು ಕಿಚ್ಚ  ಸುದೀಪ್ ಅವರ ಪತ್ನಿ ಪ್ರಿಯಾ ರಾಧಾಕೃಷ್ಣ ಅವರು ಮೂಲತಃ  ಕೇರಳದವರಾಗಿದ್ದು ಅವರ ಮಾತೃಭಾಷೆ ಮಲಯಾಳಂ. ಹೌದು ಮೊದಲ ಬಾರಿ ಪ್ರಿಯಾ ಅವರು ಸುದೀಪ್ ಅವರನ್ನು ನೋಡಿದ್ದು ಥಿಯೇಟರ್ನಲ್ಲಿ.

ತದ ನಂತರ ಓರ್ವ ಕಾಮನ್ ಫ್ರೆಂಡ್ ಮೂಲಕ ಇಬ್ಬರೂ ಪರಿಚಯವಾಗುತ್ತಾರೆ. ಬಳಿಕ ಇಬ್ಬರು ಕೂಡ ಬೆಸ್ಟ್ ಫ್ರೆಂಡ್ಸ್ ಆಗುತ್ತಾರೆ. ಇನ್ನು ಕಾಲೇಜು ಮುಗಿದ ಬಳಿಕ ಪ್ರಿಯಾ ಅವರು ತುಂಬಾನೇ ಬ್ಯೂಜಿ ಆಗುತ್ತಾರೆ. ಅಲ್ಲದೆ ಕಿಚ್ಚ ಸುದೀಪ್ ಕೂಡ ಸಿನಿಮಾಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಇನ್ನು ಇದೇ ವೇಳೆ ಇಬ್ಬರಿಗೂ ಕೂಡ ಪ್ರೀತಿಯಾಗುತ್ತದೆ.

ಸುದೀಪ್ ಅವರು ಸ್ಪರ್ಶ ಸಿನಿಮಾದ ಮೂಲಕ ತೆರೆಮೇಲೆ ಬರುತ್ತಾರೆ. ಈ ಚಿತ್ರ ಕೂಡ ಅವರಿಗೆ ಕೊಂಚ ಮಟ್ಟಿಗೆ ಹೆಸರನ್ನು ತಂದು ಕೊಡುತ್ತದೆ. ನಂತರ ಹುಚ್ಚ ಸಿನಿಮಾವನ್ನು ಕೈಗೆತ್ತಿಕೊಂಡ ಕಿಚ್ಚ ಸುದೀಪ್ ಅವರು ಕೊಟ್ಟಿದ್ದ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಸಿನಿಮಾ ಗೆಲ್ಲಲು ಪ್ರಮುಖ ಕಾರಣವಾಗುತ್ತರೆ.

ಹೌದು ಇದೇ ಸಮಯದಲ್ಲಿ ಚಿತ್ರ ಸೂಪರ್ ಡೂಪರ್ ಹಿಟ್ ಆಗುವ ಮೂಲಕ ಸುದೀಪ್ ಅವರಿಗೆ ಸಾಕಷ್ಟು ಖ್ಯಾತಿಯನ್ನು ತಂದುಕೊಟ್ಟಿತು. ಇನ್ನು ಇದೆ ಶುಭಸಂದರ್ಭದಲ್ಲಿ ಕಿಚ್ಚ ಸುದೀಪ್ ಮತ್ತು ಪ್ರಿಯಾಂಕಾ ಅವರ ಪ್ರೇಮ ಕಹಾನಿ ಮನೆಯವರಿಗೆ ಗೊತ್ತಾಗುತ್ತೆ.

ಬಳಿಕ ಇಬ್ಬರ ಕುಟುಂಬವನ್ನು ಒಪ್ಪಿಸಿ ಮದುಲವೆ ಕೂಡ ಆಗುತ್ತಾರೆ. ಹೌದು  ಬರೋಬ್ಬರಿ ಐದು ವರ್ಷಗಳ ಕಾಲ ಸುದೀಪ್ ಮತ್ತು ಪ್ರಿಯಾ ಅವರು ಲವ್ ಮಾಡಿ ಮದುವೆಯಾಗುತ್ತಾರೆ. ಅಲ್ಲದೆ ಎರಡು ವರ್ಷಗಳ ನಂತರ ಅವರಿಗೆ ಓರ್ವ ಹೆಣ್ಣು ಮಗು ಕೂಡ ಜನಿಸುತ್ತದೆ.

ಅವರ ಹೆಸರು ಸಾನ್ವಿ ಎಂಬುದಾಗಿದ್ದು ಇನ್ನು ಮದುವೆ ಬಳಿಕ ಬ್ಯುಸಿಯಾದ ನಟ ಫ್ಯಾಮಿಲಿ ಜೊತೆ ಸಮಯ ಕಳೆಯಲು ಕೊಂಚ ಸೋತರು ಅಂತನೇ ಹೇಳಬಹುದು. ಹೌದು ಹೀಗಾಗಿಯೇ ಬೇಸತ್ತು ಪ್ರಿಯಾ ಅವರು ವಿಚ್ಛೇದನ ಕೂಡ ಅರ್ಜಿ ಸಲ್ಲಿಸಿದ್ದರು. ಆದರೆ ಸುದೀಪ್ ಮತ್ತು ಪ್ರಿಯಾಂಕಾ ಅವರು ಕೂತು ಚರ್ಚೆ ಮಾಡಿ ತಮ್ಮ ಮಗಳಿಗೋಸ್ಕರ ಮತ್ತೊಮ್ಮೆ ಒಂದಾಗಿದ್ದಾರೆ.

ಇನ್ನು ಸುದೀಪ್ ಮತ್ತು ಪ್ರಿಯಾ ಅವರಿಂದ ಕಲಿಯುವುದು ಸಾಕಷ್ಟಿದ್ದು ಈ ಕಾಲದಲ್ಲಿ ಒಂದು ಬಾರಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಡೈವರ್ಸ್ ಆಗೋದೇ ಜಾಸ್ತಿ. ಅಂತಹದರಲ್ಲಿ ಇವರು ಎಲ್ಲವನ್ನೂ ಮೀರಿ ಪುನಹ ಒಂದಾಗಿರುವುದು ನಿಜಕ್ಕೂ ಮೆಚ್ಚಲೇಬೇಕಾದ ಸಂಗತಿ.

ಇನ್ನು ಸಾಮಾನ್ಯವಾಗಿ ನಮಗೆಲ್ಲ ತಿಳಿದಿರುವಂತೆ ಹೇಗೆ ಹುಡುಗನೆ ಹುಡುಗಿಗೆ ಪ್ರಪೋಸ್ ಮಾಡುತ್ತಾನೂ ಅದೇ ರೀತಿ ಇಲ್ಲಿ ಕಿಚ್ಚ ಸುದೀಪ್ ಅವರೇ ಪ್ರಿಯಾ ಅವರಿಗೆ ಪ್ರಪೋಸ್ ಮಾಡಿದ್ದು.  ಸದ್ಯ ಸುಖ ಜೀವನ ನಡೆಸುತ್ತಿದ್ದು ಪ್ರಿಯಾ ಅವರ ಎಲ್ಲಾ ಸಿನಿಮಾ ಕಾರ್ಯಕ್ರಮಕ್ಕೂ ಹೋಗುತ್ತಾರೆ. ಈ ಹಿಂದೆ ವಿಕ್ರಾಂತ್ ರೋಣ ಸಿನಿಮಾದ ಪ್ರಚಾರದಲ್ಲಿ ಇಬ್ಬರೂ ಕಾಣಿಸಿಕೊಂಡಿದ್ದು ಈ ವೇಳೆ ಪ್ರಿಯಾ ರವರು ಮಲಯಾಳಂ ಹಾಡಿನ ಗಾಯನ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ.