ಸಾಮಾನ್ಯವಾಗಿ ಮೊದ ಮೊದಲು ನಾವುಗಳೆಲ್ಲರು ಸಹ ಪದವಿ ಪಡೆಯಲು ಕಾಲೇಜಿಗೆ ಸೇರಿಕೊಂಡಾಗ ಯಾವಾಗ ಮುಗಿಯುತ್ತದೆ ಸ್ವಾಮಿ ಈ ಕಾಲೇಜು ಜೀವನ ಎಂದನಿಸುತಿತ್ತು ಅಲ್ಲವೇ? ಆದರೆ ದಿನಗಳು ಉರುಳಿ ವರ್ಷಗಳು ಕಳೆದು ಅಂತಿಮ ವರ್ಷದ ಪದವಿಗೆ ಬಂದ ಮೇಲಂತೂ ಯಾಕಪ್ಪ ಇಷ್ಟು ಬೇಗ ಕಾಲೇಜು ಜೀವನ ಮುಗಿಯಿತು ಎಂದು ಪ್ರತಿಯೊಬ್ಬರಿಗೂ ಕೂಡ ಅನಿಸದೇ ಇರುವುದಿಲ್ಲ.
ಇನ್ನು ಯಾಕೆಂದರೆ ಕಾಲೇಜು ಎಂಬುದು ನಮಗೆ ಕೇವಲ ವಿದ್ಯೆ ಕಲಿಸುವ ವಿದ್ಯಾಮಂದಿರವಲ್ಲ. ಇದರ ಜೊತೆಗೆ ಅದು ವಿದ್ಯಾರ್ಥಿಗಳಲ್ಲಿ ಸ್ನೇಹ ಪ್ರೀತಿ ಬಾಂಧವ್ಯದ ಜೀವನವನ್ನು ರೂಪಿಸುವ ಒಂದು ಭವ್ಯ ಮಂದಿರ ಅಂತಾನೇ ಹೇಳಬಹುದು.
ಸ್ಟೂಡೆಂಟ್ ಲೈಫ್ ಈಸ್ ಗೋಲ್ಡನ್ ಲೈಫ್ ಎಂಬುವಂತಹ ಈ ಆಂಗ್ಲಾ ಸುಭಾಷಿತ ಎಲ್ಲಾ ವರ್ಗಕ್ಕೆ ಅನ್ವಯಿಸಿದರೂ ನಿಜವಾದ ಸುವರ್ಣದಿನಗಳು ಪ್ರಾರಂಭವಾಗುವುದೇ ಕಾಲೇಜಿನ ಮೆಟ್ಟಿಲು ತುಳಿಯುವ ಮೂಲಕ ಅಲ್ಲವೇ? ಹೌದು ಜೀವನಪರ್ಯಂತ ಉಳಿಯುವ ಗೆಳೆತನ ಪ್ರೇಮಾಂಕುರ ಮೂಲಕ ಜೀವನಸಂಗಾತಿಯ ಆಯ್ಕೆ ವೃತ್ತಿಪರ ಜೀವನಕ್ಕೆ ಅಗತ್ಯವಾದ ತರಬೇತಿ ಮುಂದಿನ ದಿನಗಳಲ್ಲಿ ಅಗತ್ಯವಾದ ಹಲವು ಕಲೆಗಳ ಬಗ್ಗೆ ತರಬೇತಿ ಮೊದಲಾದವುಗಳಿಗೆಲ್ಲಾ ಪರ್ವಕಾಲ. ಇವೆಲ್ಲಾ ಕಾಲೇಜು ದಿನಗಳ ಒಳ್ಳೆಯ ಅಂಶಗಳಾದರೆ ಕೆಟ್ಟ ಅಂಶಗಳೂ ಇವೆ.
ಇನ್ನು ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿಯನ್ನು ಮುಗಿಸುತ್ತಿರುವ ವಿದ್ಯಾರ್ಥಿಗಳಿಗೆ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳು ಹಾಗು ಶಿಕ್ಷಕರು ಬೀಳ್ಕೊಡುಗೆ ನೀಡುವಾಗ ಎಲ್ಲೋ ಒಂದು ಕಡೆ ಆತ್ಮವೇ ದೇಹವನ್ನು ಬಿಟ್ಟುಹೋಗುತ್ತಿದೆ ಎಂಬಂತೆ ಭಾಸವಾಗುತ್ತದೆ.
ಹೌದು ಏಕೆಂದರೆ ಎಲ್ಲೆಲಿಂದಲೋ ಬರುವ ವಿದ್ಯಾರ್ಥಿಗಳನ್ನು ಸ್ನೇಹದ ಸರಪಳಿಯಂತೆ ಮಾಡುವ ಕಾಲೇಜಿನ ನೆನಪುಗಳನ್ನು ಮರೆಯಲು ಅಸಾಧ್ಯವೇ ಸರಿ. ಇನ್ನೂ ಪ್ಲೀಸ್ ಆಟೋಗ್ರಾಫ್ ಬರೆದುಕೊಡಿ ಎಂದು ಗೆಳೆಯ-ಗೆಳತಿಯರು ಹೇಳಿ ಕೈ ಕುಲುಕಿ ತಬ್ಬಿ ಅಳುವುದು ಕಂಡರೇ ಅಬ್ಬಾ ನಮ್ಮ ಜೀವನದಲ್ಲಿ ಉಳಿಯುವ ಇಂಥ ಸ್ನೇಹದ ಮಧುರ ನೆನಪು ಬೇರೊಂದಿಲ್ಲ ಅನಿಸುತ್ತದೆ.
ಸದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ 1ವೀಡಿಯೊ ವೈರಲ್ ಆಗುತ್ತಿದ್ದು ಈ ವೀಡಿಯೊವನ್ನು ನೋಡುತ್ತಿದ್ದರೆ ನಮ್ಮ ಕಾಲೇಜಿನ ನೆನಪುಗಳು ತುಂಟಾಟಗಳು ಚೇಷ್ಟೆಗಳು ಎಲ್ಲವೂ ಕೂಡ ಕಣ್ಣು ಮುಂದೆ ಬರುತ್ತದೆ.
ಹೌದು ಕಾಲೇಜಿನ ಫಂಕ್ಷನ್ ನಲ್ಲಿ ಕಾಲೇಜಿನ ವಿದ್ಯಾರ್ಥಿ ಗಳೆಲ್ಲರೂ ಕೂಡ ಯಾವ ರೀತಿ ನೃತ್ಯ ಮಾಡುತ್ತಿದ್ದಾರೆ ಎಂದರೆ ನಿಜಕ್ಕೂ ಈ ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ. ನೀವು ಕೂಡ ಒಮ್ಮೆ ಈ ವಿಡಿಯೋ ನೋಡಿ ಖಚಿತವಾಗಿಯೂ ನಿಮ್ಮ ಸ್ಟೂಡೆಂಟ್ ಲೈಫ್ ಗೆ ಹಿಂತಿರುಗಿ ಹೋಗುವುದಂತೂ ಸತ್ಯ.. ಸದ್ಯ ಇದನ್ನ ಬೆಸ್ಟ್ ಡ್ಯಾನ್ಸ್ ಎನ್ನುತ್ತಿದ್ದಾರೆ ನೆಟ್ಟಿಗರು.