ಕನ್ನಡ ಚಿತ್ರರಂಗ ಇದೀಗ ಉತ್ತುಂಗದಲ್ಲಿದ್ದು ರಿಷಬ್ ಶೆಟ್ಟಿ ಅಭಿನಯಿಸಿರುವ ಮತ್ತು ನಿರ್ದೇಶಿಸಿರುವ ಕಾಂತಾರ ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲಿಯೂ ಕೂಡ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಮೊದಲಿಗೆ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾಗಿದ್ದ ಕಾಂತಾರ ಈಗ ತೆಲುಗು ತಮಿಳು ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೆ ಡಬ್ ಆಗುವುದರ ಮೂಲಕ ಪ್ಯಾನ್ ಇಂಡಿಯಾ ಚಿತ್ರವಾಗಿ ಮಾರ್ಪಟ್ಟಿದೆ.
ಇನ್ನು ಈ ಸಿನಿಮಾ ಇಷ್ಟೊಂದು ದಾಖಲೆ ಬರೆಯಲು ದೈವವೇ ಕಾರಣ ಎಂದು ಸ್ವತಃ ರಿಷಬ್ ಶೆಟ್ಟಿ ಯವರೇ ಹೇಳಿಕೆಯನ್ನು ನೀಡಿದ್ದು ಹೀಗೆ ಕೋಟಿ ಕೋಟಿ ಲಾಭ ಮಾಡಿಕೊಟ್ಟ ಪಂಜುರ್ಲಿ ದೈವಕ್ಕೆ ರಿಷಬ್ ಕೊಟ್ಟಿದ್ದೇನು ಗೊತ್ತಾ? ತಿಳಿಸುತ್ತೇವೆ ಮುಂದೆ ಓದಿ .
ಸದ್ಯ ಸಿನಿಮಾವನ್ನು ಟಾಲಿವುಡ್ ಕಾಲಿವುಡ್ ಹಾಗೂ ಬಾಲಿವುಡ್ ಸಿನಿಪ್ರೇಕ್ಷಕರು ಕೂಡ ವೀಕ್ಷಿಸಿ ಕೊಂಡಾಡುತ್ತಿದ್ದು ಕೇವಲ ಸಿನಿಪ್ರೇಕ್ಷಕರು ಮಾತ್ರವಲ್ಲದೆ ಸ್ಟಾರ್ ನಟರು ಮತ್ತು ನಟಿಯರು ಚಿತ್ರವನ್ನು ವೀಕ್ಷಿಸಿ ರಿಶಬ್ ಶೆಟ್ಟಿಗೆ ಪ್ರಶಂಸೆಯ ಸುರಿಮಳೆಗೈದಿದ್ದಾರೆ. ಈ ಸಾಲಿಗೆ ನವರಸ ನಾಯಕ ಜಗ್ಗೇಶ್ ಕೂಡ ಸೇರಿಕೊಂಡಿದ್ದು ಜಗ್ಗೇಶ್ ರವರು ಕಾಂತಾರ ಚಿತ್ರವನ್ನು ವಿದೇಶದಲ್ಲಿ ವೀಕ್ಷಿಸಿದ್ದಾರೆ. ಈ ಕುರಿತು ತಡರಾತ್ರಿ ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಜಗ್ಗೇಶ್ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕನ್ನಡ ಚಿತ್ರರಂಗದ ಒಳಿತು ಬಯಸಿ ಬದುಕುತ್ತಿರುವ ಜೀವ ನನ್ನದು ಎಂದು ಸಾಲು ಪ್ರಾರಂಭಿಸಿದ ಜಗ್ಗೇಶ್ ತಾನು ಬಾಲ್ಯದಿಂದಲೂ ಕನ್ನಡ ಹಾಗೂ ರಾಜಣ್ಣನ ಹುಚ್ಚು ಅಭಿಮಾನಿ ಎಂದು ಬರೆದಿದ್ದಾರೆ. ಸದ್ಯ ಅಮೆರಿಕ ಪ್ರವಾಸದಲ್ಲಿರುವ ಜಗ್ಗೇಶ್ ಅಲ್ಲಿಯೇ ಕಾಂತಾರ ಚಿತ್ರವನ್ನು ವೀಕ್ಷಿಸಿರುವುದಾಗಿ ಬರೆದುಕೊಂಡಿದ್ದು ಇನ್ನೂ ಮುಂದುವರೆದು ವರ್ಷಕ್ಕೊಮ್ಮೆ ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುತ್ತೇನೆ ಅಂಥಹ ನಾಡಿನಿಂದ ಹುಟ್ಟಿ ಬಂದ ರಿಷಬ್ ಶೆಟ್ಟಿ ಕನ್ನಡ ಚಿತ್ರರಂಗಕ್ಕೆ ಎಂಥ ಅದ್ಭುತ ಕೊಡುಗೆ ಆತ ಎಂಥ ಅದ್ಭುತ ನಟ ಮತ್ತು ನಿರ್ದೇಶಕ ಎಂದು ಜಗ್ಗೇಶ್ ಕೊಂಡಾಡಿದ್ದಾರೆ.
ಕಾಂತಾರ ಚಿತ್ರದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವುದು ಚಿತ್ರದ ಕ್ಲೈಮ್ಯಾಕ್ಸ್ ಚಿತ್ರದ ಕೊನೆಯಲ್ಲಿ ರಿಷಬ್ ಶೆಟ್ಟಿಯ ಆ ಅತ್ಯದ್ಬುತ ನಟನೆ. ಈ ಭಾಗ ಜಗ್ಗೇಶ್ ಅವರಿಗೂ ಕೂಡ ಸಖತ್ ಇಷ್ಟವಾಗಿದ್ದು ಕ್ಲೈಮ್ಯಾಕ್ಸ್ ಕುರಿತು ವಿಶೇಷವಾಗಿ ಬರೆದುಕೊಂಡಿರುವ ಜಗ್ಗೇಶ್ ರವರು ಕೊನೆಯ 25 ನಿಮಿಷಗಳ ಕಾಲ ನಾನಿಲ್ಲಿರುವೆ ಎಂಬುದೇ ಮರೆತುಹೋಯಿತು ಮೌನ ನನ್ನನ್ನು ಆವರಿಸಿತು ಎಂದು ಬರೆದುಕೊಂಡಿದ್ದಾರೆ. ನನಗನಿಸಿದ್ದು ಈ ಅತ್ಯದ್ಬುತ ಚಿತ್ರ ಮಾಡಿರುವುದು ರಿಷಬ್ ಶೆಟ್ಟಿ ಅಲ್ಲ ಆತನ ವಂಶೀಕರ ತಂದೆ ತಾಯಿ ಆಶೀರ್ವಾದ ಹಾಗೂ ನಶಿಸುತ್ತಿರುವ ಆಧ್ಮಾತ್ಮಿಕ ಭಾವನೆಯನ್ನು ಮನುಷ್ಯರಿಗೆ ನೆನಪಿಸಲು ದೇವರೇ ಬಂದು ಆತನ ಕೈಯಲ್ಲಿ ಇಂತಹ ಅದ್ಭುತ ಸಿನಿಮಾ ಮಾಡಿಸಿದ್ದಾರೆ ದೇವರು ಆತನಿಗೆ ನೂರು ಕಾಲ ಆಯುಷ್ಯ ಆರೋಗ್ಯ ಕೊಡಲಿ ಕನ್ನಡ ಚಿತ್ರರಂಗಕ್ಕೆ ಆತನ ಕಲಾಸೇವೆ ಹೀಗೇ ಮುಂದುವರಿಯಲಿ ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.
ಹೀಗೆ ಒಂದು ಕಡೆ ಚಿತ್ರ ನೂರು ಕೋಟಿ ಕ್ಲಬ್ ಸೇರಿ ವಿಶೇಷ ದಾಖಲೆಯನ್ನು ಬರೆಯುತ್ತಿದ್ದರೆ ಜಗ್ಗೇಶ್ ರವರು ಹೇಳಿದಂತೆ ದೈವವೇ ಈ ಸಿನಿಮಾವನ್ನು ರಿಷಬ್ ಶೆಟ್ಟಿ ಕೈಯಲ್ಲಿ ಮಾಡಿಸಿದೆ ಎನ್ನುತ್ತಿದ್ದರೆ ಇನ್ನೂ ಹಲವರು. ಹೀಗೆಯೇ ಕೋಟಿ ಕೋಟಿ ಲಾಭ ಮಾಡಿಕೊಟ್ಟ ಪಂಜುರ್ಳಿ ದೈವಕ್ಕೆ ರಿಷಬ್ ಕೊಟ್ಟಿದ್ದೇನು ಗೊತ್ತಾ? ಹೌದು ಇಷ್ಟೆಲ್ಲಾ ಕೊಟ್ಟಿರುವ ಪಂಜುರ್ಳಿ ದೈವಕ್ಕೆ ಪ್ರಿಯವಾದ ನರ್ತನ ಸೇವೆಯನ್ನು ಕೊಟ್ಟಿದ್ದಾರಂತೆ ಕಾಂತರ ಚಿತ್ರತಂಡ.
ಯಾವುದಾದರೂ ಒಳ್ಳೆಯ ಕೆಲಸ ಮಾಡುವ ಮೊದಲು ಅಥವಾ ಆ ದೈವದಿಂದ ಒಳ್ಳೆಯದು ಆದಾಗ ಈ ಸೇವೆಯನ್ನು ಕೊಡಲಾಗುತ್ತದೆ. ಇನ್ನೂ ನರ್ತನ ಸೇವೆ ಎಲ್ಲ ಕೊಡುವುದರ ಜೊತೆಗೆ ಕಾಂತಾರ ತಂಡದವರು ದೇವಸ್ಥಾನ ನಿರ್ಮಾಣಕ್ಕಾಗಿ ಹಣ ಸಹಾಯವನ್ನು ಕೂಡ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಸಿನಿಮಾವನ್ನ ಜನರು ಗೆಲ್ಲಿಸಿರಬಹುದು ಆದರೆ ಯಾವತ್ತೂ ಕೂಡ ಆ ದೈವದ ಆಶೀರ್ವಾದ ಈ ಸಿನಿಮಾಗೆ ಖಂಡಿತ ಇದೆ ಎಂದೇ ಹೇಳಬಹುದು.