ಖ್ಯಾತ ನಟಿ ರಶ್ಮಿಕಾ ಮಂದಣ್ಣ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ಕನ್ನಡ ಚಿತ್ರರಂಗದ ಮೂಲಕವಾದರು ಕೂಡ ಹೆಸರು ಮಾಡುತ್ತಿರುವುದು ಮಾತ್ರ ಟಾಲಿವುಡ್ ಹಾಗೂ ಬಾಲಿವುಡ್ ಚಿತ್ರರಂಗದಲ್ಲಿ. ಇನ್ನು ಕನ್ನಡದಲ್ಲಿ ಬೆರಳೆಣಿಕೆ ಚಿತ್ರಗಳಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ ಟಾಲಿವುಡ್ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದು ದಿನೇ ದಿನೇ ರಶ್ಮಿಕಾ ಅವರಿಗೆ ತೆಲುಗಿನಲ್ಲಿ ಬೇಡಿಕೆಯೂ ಕೂಡ ಹೆಚ್ಚಾಗುತ್ತಿದ್ದು ಟಾಲಿವುಡ್ನ ಸ್ಟಾರ್ ನಟರಾದ ಮಹೇಶ್ ಬಾಬು ನಿತಿನ್ ನಾನಿ ನಾಗಾರ್ಜುನ ಸೇರಿದಂತೆ ಸಾಕಷ್ಟು ಮಂದಿ ಜೊತೆ ಕೂಡ ತೆರೆ ಹಂಚಿಕೊಂಡಿದ್ದಾರೆ.
ಅಷ್ಟೇಅಲ್ಲದೇ ಅಲ್ಲು ಅರ್ಜುನ್ ರವರ ಜೊತೆಗೆ ಕೂಡ ಪುಷ್ಪ ಸಿನಿಮಾದಲ್ಲಿ ಅಭಿನಯಿಸಿದ್ದು ತಮಿಳಿನಲ್ಲಿ ವಿಜಯ್ ಜೊತೆ ಸಹ ನಟಿಸುತ್ತಿದ್ದು ಬಾಲಿವುಡ್ನಿಂದ ಕೂಡ ಅವಕಾಶ ಅರಸಿ ಬಂದಿದ್ದು ಇದೀಗ ಅಲ್ಲಿಯೂ ಕೂಡ ಬ್ಯೂಸಿಯಾಗಿದ್ದಾರೆ. ಇನ್ನು ಇತ್ತೀಚೆಗಷ್ಟೇ ರಶ್ಮಿಕಾ ಹೈದರಾಬಾದಿನಲ್ಲಿ ಮನೆ ತೆಗೆದುಕೊಂಡು ಸೆಟಲ್ ಆಗುವ ನಿರ್ಧಾರ ಮಾಡಿದ್ದು ಈ ಹಿಂದೆ ಈ ಕುರಿತಾಗಿ ಮಾತನಾಡಿದ್ದರು ಕೂಡ.
ಕಳೆದ ವರುಷ ಐಟಿ ದಾಳಿ ನಂತರ ರಶ್ಮಿಕಾ ಮಂದಣ್ಣಗೆ ಅದೃಷ್ಟ ಖುಲಾಯಿಸಿದ್ದು ತಮ್ಮ ಕೆಲಸದಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಸದ್ಯ ಈಗ ಮುಟ್ಟಿದೆಲ್ಲ ಚಿನ್ನವಾಗುತ್ತಿದೆ. ಮಾಡಿದ ಸಿನಿಮಾಗಳೆಲ್ಲ ಬಾಕ್ಸಾಫಿಸ್ನಲ್ಲಿ ಸದ್ದು ಮಾಡುವುದರ ಜೊತೆಗೆ ಅವರಿಗೆ ಹೊಸ ಸಿನಿಮಾಗಳ ಆಫರ್ ಸಹ ಸಾಲು ಸಾಲಾಗಿ ಅರಸಿ ಬರುತ್ತಿದ್ದು ಇದೇ ಕಾರಣದಿಂದಾಗಿ ಕಿರಿಕ್ ಹುಡುಗಿ ಈಗ ಹೊಸ ಆಸ್ತಿ ಖರೀದಿಸಿದ್ದಾರೆ. ಹೌದು ಸಾಲುಸಾಲು ಚಿತ್ರಗಳ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದ ರಶ್ಮಿಕಾ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಮನೆ ಖರೀದಿಸಿ ಹೈದರಾಬಾದಿನಲ್ಲೇ ನೆಲೆಸುವ ಕುರಿತು ಮಾತನಾಡಿದ್ದರು.
ಈಗ ಆ ಮಾತು ನಿಜವಾಗಿದ್ದು ಹೈದರಾಬಾದಿನ ಗಚ್ಚಿಬೌಲಿ ಪ್ರದೇಶದಲ್ಲಿ ಐರಾಷಾಮಿ ಮನೆ ಖರೀದಿಸಿದ್ದಾರೆ. ಇನ್ನು ರಶ್ಮಿಕಾ ಮಂದಣ್ಣರ ತಂದೆ ಮಾಡುವ ಬ್ಯುಸಿನೆಸ್ ಯಾವುವು ಗೊತ್ತಾ?ಸದ್ಯ ರಶ್ಮಿಕಾ ಮಂದಣ್ಣ ರವರು ನಟಿಸಿರುವ ಗುಡ್ ಬೈ ಹಿಂದಿ ಸಿನಿಮಾದ ಪ್ರಚಾರ ಸಂದರ್ಭದಲ್ಲಿ ನೀಡಿರುವ ಸಂದರ್ಶನವೊಂದರಲ್ಲಿ ತಮ್ಮ ತಂದೆಯ ಉದ್ಯಮಗಳ ಬಗ್ಗೆ ಕೂಡ ಮಾತನಾಡಿದ್ದು ತಂದೆಯ ಎಲ್ಲ ಉದ್ಯಮಗಳ ಬಗ್ಗೆ ವಿವರವಾಗಿ ಹೇಳಿಲ್ಲವಾದರೂ ಕೂಡ ತಮ್ಮ ತಂದೆ ಪ್ಲಾಂಟರ್ ಬಿಲ್ಡರ್ ಕೇಟರರ್ ರಿಯಲ್ ಎಸ್ಟೇಟ್ ಇನ್ವೆಸ್ಟರ್ ಇನ್ನಿತರೆಗಳನ್ನು ರಶ್ಮಿಕಾ ಮಂದಣ್ಣ ರವರು ಹೇಳಿದ್ದಾರೆ.
ನಮ್ಮ ತಂದೆ ಹಲವು ಬ್ಯುಸಿನೆಸ್ಗಳನ್ನು ಮಾಡುತ್ತಾರೆ ಎಂದ ರಶ್ಮಿಕಾ ಅವರದ್ದು ಒಂದು ದೊಡ್ಡ ಮ್ಯಾರೇಜ್ ಹಾಲ್ ಇದೆ ಅಲ್ಲಿ ಕೇಟರಿಂಗ್ ಸಹ ಅವರದ್ದೇ ಆಗಿದ್ದು ಅವರು ಪ್ಲಾಂಟರ್ ಸಹ ಹೌದು. ಬಿಲ್ಡರ್ ಹಾಹೂ ಹೋಟೆಲ್ ನಡೆಸುತ್ತಾರೆ. ಕೂರ್ಗಿನ ಜನ ಒಂದು ರೀತಿ ಬಾಸ್ಗಳು ಇದ್ದ ಹಾಗೆ. ನನ್ನ ತಂದೆ ಹಾಗೂ ತಾಯಿ ಅಂತೂ ಈ ಪ್ರಪಂಚಕ್ಕೆ ನಾವೇ ರಾಜ-ರಾಣಿ ಎಂದುಕೊಂಡಿದ್ದು ಆದರೆ ನಾನು ಅಯ್ಯೊ ಅಮ್ಮ ಹೊರಗೆ ಪ್ರಪಂಚ ಹಾಗಿಲ್ಲ. ನಾವಿನ್ನೂ ಸಣ್ಣವರು, ಸಾಮಾನ್ಯರು ಎಂದು ಅರ್ಥ ಮಾಡಿಸಿಕೊಡಬೇಕಾಗುತ್ತದೆ ಎಂದು ನಗುತ್ತಾ ಹೇಳಿದ್ದಾರೆ.
ಇನ್ನು ರಶ್ಮಿಕಾರ ತಂದೆ ಮದನ್ ಮಂದಣ್ಣ ಅವರದ್ದು ವಿರಾಜಪೇಟೆಯಲ್ಲಿ ಸೆರಿನಿಟ್ ಹಾಲ್ ಹೆಸರಿನ ದೊಡ್ಡ ಕಲ್ಯಾಣ ಮಂಟಪ ಕೂಡ ಇದ್ದು ಎರಡು ವರ್ಷದ ಹಿಂದೆ ಈ ಮದುವೆ ಮಂಟಪದ ಬಾಡಿಗೆ ದಿನವೊಂದಕ್ಕೆ 1.50 ಲಕ್ಷ ರುಪಾಯಿ. ಹೌದು ಇಲ್ಲಿ ಕೇಟರಿಂಗ್ ಸಹ ಮದನ್ ಮಂದಣ್ಣ ಅವರದ್ದೇ ಆಗಿದ್ದು ಇದರ ಹೊರತಾಗಿ ಅವರ ಹುಟ್ಟೂರು ಮೈತಾಡಿ ಗ್ರಾಮದಲ್ಲಿ 24 ಎಕರೆ ಕಾಫಿ ಪ್ಲಾಂಟೇಶನ್ ಅನ್ನು ಸಹ ಮದನ್ ಮಂದಣ್ಣ ಹೊಂದಿದ್ದಾರೆ.
ಎರಡು ವರ್ಷದ ಹಿಂದೆ ಬಿಟ್ಟಂಗಾಲ ಎಂಬಲ್ಲಿ 5.50 ಎಕರೆ ಜಮೀನು ಸಹ ಖರೀದಿ ಮಾಡಿದ್ದಾರೆ. ಇನ್ನು ವಿರಾಜಪೇಟೆಯ ಕುಕ್ಲೂರಿನಲ್ಲಿ ಸುಮಾರು ಒಂದು ಕೋಟಿಗೂ ಹೆಚ್ಚು ಬೆಲೆಯ ಐಶಾರಾಮಿ ಮನೆ ಹೊಂದಿದ್ದು ವಿರಾಜಪೇಟೆಯಲ್ಲಿ ಪಟ್ಟಣದಲ್ಲಿಯೂ ಕೂಡ ಒಂದು ಬೃಹತ್ ಮನೆ ಹೊಂದಿದ್ದಾರೆ. ಇತ್ತೀಚೆಗೆ ಇಂಟರ್ನ್ಯಾಷನಲ್ ಶಾಲೆ ನಿರ್ಮಾಣ ಕೂಡ ಮಾಡಲು ಜಾಗ ಖರೀದಿಸಿದ್ದಾರೆ ಎನ್ನಲಾಗುತ್ತಿದ್ದು ಜೊತೆಗೆ ಪೆಟ್ರೋಲ್ ಬಂಕ್ ಕೂಡ ಹೊಂದಿದ್ದಾರೆ ಎನ್ನಲಾಗುತ್ತದೆ. ಇದೆಲ್ಲದರ ಜೊತೆಗೆ ರಾಜಕಾರಣಿಯೂ ಹೌದು. ಅವರು ಪಟ್ಟಣ ಪಂಚಾಯಿತಿ ಸದಸ್ಯರಾಗಿ ಆಯ್ಕೆ ಆಗಿದ್ದು ಕಾಂಗ್ರೆಸ್ನ ಕೆಲವು ಮುಖಂಡರೊಟ್ಟಿಗೆ ಉತ್ತಮ ಬಾಂಧವ್ಯವೂ ಕೂಡ ಅವರಿಗಿದೆ.