ಕನ್ನಡದಲ್ಲಿ ಲಕ್ಷ್ಮಿ ಬಾರಮ್ಮ ಧಾರಾವಾಹಿ ಮೂಲಕ ಗೊಂಬೆ ಎಂದೇ ಜನಪ್ರಿಯತೆ ಪಡೆದಿರುವ ನೇಹಾ ಗೌಡ, ತೆಲುಗು ಹಾಗೂ ತಮಿಳಿನ ಧಾರಾವಾಹಿಗಳಲ್ಲಿ ಫೇಮಸ್ ಆಗಿದ್ದಾರೆ. ಧಾರಾವಾಹಿ ಅಷ್ಟೇ ಅಲ್ಲದೇ, ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡಿದ್ದಾರೆ. ತಮ್ಮ ನಟನೆಗೆ ನೇಹಾ ಗೌಡ ಅವರು ಹಲವು ಅವಾರ್ಡ್ ಗಳನ್ನು ಕೂಡ ಪಡೆದುಕೊಂಡಿದ್ದಾರೆ.ನೇಹಾ ಗೌಡ ಅವರ ಮೊದಲ ಸೀರಿಯಲ್ ತೆಲುಗಿನ ‘ಸ್ವಾತಿ ಚುನುಕುಲು’. ಈ ಧಾರಾವಾಹಿ ನೇಹಾ ಗೌಡ ಅವರಿಗೆ ಅಷ್ಟೇನು ಹೆಸರು ಕೊಡದಿದ್ದರೂ, ಇವರ ನಟನೆಗೆ ಮನ ಸೋಲದವರಿಲ್ಲ.
ಇದಾದ ಬಳಿಕ ದೀಪವೂ ನಿನ್ನದೇ, ಗಾಳಿಯೂ ನಿನ್ನದೇ, ಕಲ್ಯಾಣ ಪರಿಸು ಎಂಬ ಧಾರಾವಾಹಿಯಲ್ಲಿ ನಟಿಸಿದ್ದರು. ಇದಾದ ಮೇಲೆ ಕಿರುತೆರೆಯಲ್ಲಿ ಮುಂದುವರೆಯುವ ಆಸೆ ಏನೂ ಇರಲಿಲ್ಲ. ಓದು, ಕೆರಿಯರ್ ಎಂದು ನೇಹಾ ತಮ್ಮ ಲೈಫ್ ನಲ್ಲಿ ಬ್ಯುಸಿಯಾಗಿದ್ದರು.ಬಿಕಾಂ ಓದುತ್ತಿರುವಾಗ ನೇಹಾ ಗೌಡ ಅವರು ಫ್ಯಾಷನ್ ಡಿಸೈನರ್ ಆಗಬೇಕು ಎಂದು ಆಸೆ ಪಟ್ಟಿದ್ದರಂತೆ. ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ ಗೊಂಬೆ ಪಾತ್ರ ಚೆನ್ನಾಗಿದೆ ಎಂದು ನಟಿಸಲು ಮುಂದಾದರಂತೆ. ಆದರೆ ಈ ಧಾರಾವಾಹಿ ಮಾಡುವಾಗ ಕಿರುತೆರೆಯಲ್ಲೇ ಮುಂದುವರೆಯಬೇಕು ಎಂಬ ಆಲೋಚನೆ ನೇಹಾ ಗೌಡ ಅವರಿಗೆ ಇರಲಿಲ್ಲ.
ಲಕ್ಷ್ಮೀ ಬಾರಮ್ಮ ಧಾರಾವಾಹಿ ಸರಿ ಸುಮಾರು 6 ವರ್ಷಗಳ ಕಾಲ ಪ್ರಸಾರವಾಗಿತ್ತು. ಇದರಲ್ಲಿನ ನೇಹಾ ಅವರ ಗೊಂಬೆಯ ಪಾತ್ರವನ್ನು ಎಲ್ಲರೂ ಮೆಚ್ಚಿಕೊಂಡಿದ್ದರು. ನೇಹಾ ಅವರ ಅಭಿನಯವನ್ನು ಇಷ್ಟಪಟ್ಟವರು ಸೋಶಿಯಲ್ ಮೀಡಿಯಾದಲ್ಲಿ ನೇಹಾ ಹೆಸರಲ್ಲಿ ಫ್ಯಾನ್ಸ್ ಪೇಜ್ ಗಳನ್ನು ಕೂಡ ತೆರೆದಿದ್ದಾರೆ.ನೇಹಾ ಗೌಡ ಅವರು ಕೇವಲ ಸೀರಿಯಲ್ ಅಷ್ಟೇ ಅಲ್ಲದೇ, ಕಿರುಚಿತ್ರ ಹಾಗೂ ರಿಯಾಲಿಟಿ ಶೋನಲ್ಲೂ ಭಾಗಿಯಾಗಿದ್ದಾರೆ. ಟೇಕ್ ಆಫ್ ಎಂಬ ಶಾರ್ಟ್ ಮೂವಿಯಲ್ಲಿ ನೇಹಾ ನಟಿಸಿದ್ದು, ಇದರಲ್ಲಿ ಅವರ ಪಾತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಕನ್ನಡದ ಜೊತೆಗೆ ತೆಲುಗು, ತಮಿಳು ಭಾಷೆಗಳಲ್ಲೂ ಕೂಡ ನೇಹಾ ಗೌಡ ಕೆಲಸ ಮಾಡಿದ್ದಾರೆ.
ಇನ್ನು ಕನ್ನಡದ ರಿಯಾಲಿಟಿ ಶೋನಲ್ಲೂ ನೇಹಾ ಗೌಡ ಭಾಗವಹಿಸಿದ್ದರು. ಕಳೆದ ವರ್ಷ ಪ್ರಸಾರವಾಗಿದ್ದ ರಾಜಾ-ರಾಣಿ ರಿಯಾಲಿಟಿ ಶೋನಲ್ಲಿ ನೇಹಾ ಗೌಡ ಹಾಗೂ ಅವರ ಪತಿ ಚಂದನ್ ಭಾಗವಹಿಸಿದ್ದರು.ನೇಹಾ ಗೌಡ ಡ್ಯಾನ್ಸ್ ಮಾಡುವುದ್ರಲ್ಲೂ ಫೇಮಸ್ಸು..ಇವರ ಡ್ಯಾನ್ಸಗೆ ಪಡ್ಡೆ ಹುಡುಗರು ಕಾಯುತ್ತಿರುತ್ತಾರೆ.ನೇಹಾ ಗೌಡ ಮತ್ತು ಅವರ ಡ್ಯಾನ್ಸ್ ಪರ್ಟನರ್ ಮಾಡಿರುವ ರೊಮ್ಯಾಂಟಿಕ್ ಡ್ಯಾನ್ಸ್ ಮತ್ತೆ ವೈರಲ್ ಆಗುತ್ತಿದೆ.
ಫೆಬ್ರವರಿ 18, 2018ರಂದು ನೇಹಾ ಗೌಡ ಮದುವೆಯಾದರು. ಬೆಂಗಳೂರಿನಲ್ಲಿ ಚಂದನ್ ಜೊತೆ ಸಪ್ತಪದಿ ತುಳಿದ ನೇಹಾ ಗೌಡ ಅವರ ಮದುವೆಗೆ ಕನ್ನಡ ಚಿತ್ರರಂಗದ ಹಲವು ಗಣ್ಯರು ಆಗಮಿಸಿದ್ದರು. ಚಂದನ್ ಹಾಗೂ ನೇಹಾ ಬಾಲ್ಯದ ಸ್ನೇಹಿತರು. ಇಬ್ಬರು ಪ್ರೀತಿಸಿ, ಲವ್ ಕಮ್ ಅರೇಂಜ್ ಮ್ಯಾರೇಜ್ ಆಗಿದ್ದಾರೆ. ಪ್ರಿಕೆಜಿಯಲ್ಲಿದ್ದಾಗ ಚಂದನ್ ನನ್ನ ಶತ್ರು ಆಗಿದ್ದ ಎಂದು ಅವರೇ ಹೇಳಿಕೊಂಡಿದ್ದರು, ಆಮೇಲೆ ಗೆಳೆಯನಾಗಿ ಕ್ರಶ್ ಆಗಿ, ಲವ್ವರ್ ಆಗಿ ಈಗ ಗಂಡನಾಗಿದ್ದಾನೆ ಎಂದು ಹೇಳಿದ್ದಾರೆ. ಇನ್ನು ಚಂದನ್ ಸದ್ಯ ಡ್ಯಾನ್ಸಿಂಗ್ ಚಾಂಪಿಯನ್ ಶೋ ನಲ್ಲಿ ಸ್ಫರ್ಧಿಯಾಗಿದ್ದು, ಮೇಕಪ್ ಹಾಗೂ ಡ್ರೆಸ್ಸಿಂಗ್ ವಿಚಾರದಲ್ಲಿ ತುಂಬಾನೇ ಪರ್ಫೆಕ್ಟ್ ಅಂತೆ.
ಸದ್ಯ ನೇಹಾ ಗೌಡ ಪಾವಂ ಗಣೇಶನ್ ಧಾರಾವಾಹಿಯ ನಾಯಕಿಯಾಗಿ ಬಣ್ಣಹಚ್ಚಿದ್ದಾರೆ. ಮದುವೆಯಾದ ಮೇಲೆ ಫಾರಿನ್ ನಲ್ಲಿ ನೆಲೆಸಿದ್ದ ನೇಹಾ ಗೌಡ ಬೇಗ ಮತ್ತೆ ವಾಪಸ್ ಬಂದಿದ್ದು, ರಾಜಾ ರಾಣಿ ಶೋ ಮೂಲಕ ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ್ದರು. ಸದ್ಯ ಅವರು ದೊಡ್ಡ ಗ್ಯಾಪ್ ಬಳಿಕ ಪಾವಂ ಗಣೇಶನ್ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ನೇಹಾರದ್ದು ಸರಳವಾಗಿ ಇರುವ ಹುಡುಗಿ ಪಾತ್ರ. ಇನ್ನು ನೇಹಾ ಗೌಡ ಮತ್ತೆ ಕನ್ನಡದ ಧಾರಾವಾಹಿಗಳಲ್ಲಿ ಯಾವಾಗ ನಟಿಸುತ್ತಾರೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.ಕೆಂಪು ಬಣ್ಣದ ಸ್ಯಾರಿಯಲ್ಲಿ ನೇಹಾ ಗೌಡ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ.ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗುತ್ತಿದೆ.