ರವಿಚಂದ್ರನ್ ಚಂದನವನದ ಕನಸುಗಾರ ಎಂದೇ ಪ್ರಸಿದ್ಧಿ. ಇಂದಿಗೂ ಎವರ್ಗ್ರೀನ್ ಆಗಿರುವ ಚಿತ್ರಗಳನ್ನು ಕೊಟ್ಟ ಹೆಗ್ಗಳಿಕೆ ಅವರದು. ಆದರೆ ಕೆಲವು ವರ್ಷಗಳಿಂದ ಅವರ ಚಿತ್ರಗಳು ಸೋಲುತ್ತಿವೆ. ಕನಸುಗಾರ ಈಗ ನಷ್ಟದಲ್ಲಿದ್ದಾರೆ, ತಮ್ಮ ಮನೆಯನ್ನು ಮಾರಿದ್ದಲ್ಲದೆ, ಅದರ ಬಗ್ಗೆ ಮೊದಲ ಬಾರಿ ಮಾತನಾಡಿದ್ದಾರೆ. ರವಿಚಂದ್ರನ್ ಅವರ ಮಾತು ಕೇಳಿ ನಟ ದರ್ಶನ್ ಅವರೊಂದಿಗೆ ನಾನಿದ್ದೇನೆ ಎಂಬ ಧೈರ್ಯ ತುಂಬಿದ್ದಾರೆ, ದರ್ಶನ್ ಏನು ಹೇಳಿದ್ದಾರೆ ಎಂಬ ಮಾಹಿತಿ ಇಲ್ಲಿದೆ. ರವಿಚಂದ್ರನ್ ಕುಟುಂಬ ಸಾಕಷ್ಟು ವರ್ಷಗಳಿಂದಲೂ ರಾಜಾಜಿನಗರದಲ್ಲಿರುವ ಮನೆಯಲ್ಲಿ ವಾಸವಾಗಿದ್ದರು. ಆದ್ರೀಗ ಏಕಾಏಕಿ ಆ ಮನೆಯನ್ನು ಬಿಟ್ಟು ಹೊಸಕೆರೆ ಹಳ್ಳಿಯಲ್ಲಿರುವ ಮತ್ತೊಂದು ಮನೆಗೆ ಶಿಫ್ಟ್ ಆಗಿದ್ದಾರೆ. ಹೌದು ರವಿಚಂದ್ರನ್ ಅವರು ಇಷ್ಟು ದಿನ ವಾಸವಿದ್ದ ರಾಜಾಜಿನಗರದ ಮನೆಯನ್ನು ಖಾಲಿ ಮಾಡಿದ್ದರು.
ಸಾಮಾನ್ಯವಾಗಿ ಮನೆ ಖಾಲಿ ಮಾಡುತ್ತಿದ್ದಂತೆ ಅವರ ಬಗ್ಗೆ ಒಂದಷ್ಟು ಸುದ್ದಿಯಾಯಿತು.. ಕೆಲವೊಂದು ಕಡೆ ರವಿಚಂದ್ರನ್ ಅವರು ಸಾಲ ತೀರಿಸುವ ಸಲುವಾಗಿ ಮನೆ ಮಾರಿಕೊಂಡಿದ್ದಾರೆ ಎಂದು ಸುದ್ದಿಯಾದರೆ ಮತ್ತಷ್ಟು ಕಡೆ ಮನೆ ರಿನೋವೇಶನ್ ಗಾಗಿ ಮನೆ ಖಾಲಿ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು.. ಆದರೆ ಇದೀಗ ಈ ಎಲ್ಲಾ ಪ್ರಶ್ನೆಗಳಿಗೆ ನೇರವಾಗಿ ರವಿಚಂದ್ರನ್ ಅವರೇ ಉತ್ತರ ನೀಡಿದ್ದಾರೆ.
ಹೌದು ಮನೆಯಿಂದ ಹೊರ ನಡೆದ ವಿಚಾರವಾಗಿ ರವಿಚಂದ್ರನ್ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ಕಾಮಿಡಿ ಕಿಲಾಡಿಗಳು ಶೋ ವೇದಿಕೆಯಲ್ಲಿ ಮಾತನಾಡಿದ ರವಿಚಂದ್ರನ್ , ಒಂದು ತಿಂಗಳ ಹಿಂದೆ ನಾನು ಮನೆ ಖಾಲಿ ಮಾಡಿದೆ. ದುಡ್ಡು ಕಳೆದುಕೊಂಡು ಮನೆ ಮಾರಿದ ಎಂದು ಎಲ್ಲರು ಮಾತನಾಡಿಕೊಂಡರು. ಆದರೆ, ನಾನು ದುಡ್ಡನ್ನು ಇಂದು ಕಳೆದಿದ್ದಲ್ಲ. 30 ವರ್ಷದಿಂದಲೂ ಕಳೆದುಕೊಂಡೆ ಬಂದಿದ್ದೇನೆ. ಕಳೆದುಕೊಂಡೇ ನಗುತ್ತಾ ಬಂದಿದ್ದೇನೆ. ಆದರೆ, ಈವರೆಗೂ ನಿಮಗೆ ಯಾರಿಗೂ ಅರ್ಥವಾಗಿಲ್ಲ. ನಾನು ಕಳೆದುಕೊಂಡಿರುವುದೆಲ್ಲ ನಿಮಗಾಗಿ. ನಿಮ್ಮ ಮನಸ್ಸನ್ನು ಗೆಲ್ಲುವುದಕ್ಕಾಗಿ ಎಲ್ಲವನ್ನು ಕಳೆದುಕೊಂಡು ಬಿಟ್ಟಿದ್ದೇನೆ. ಆದರೆ, ನನಗೆ ಬೇಸರ ಇಲ್ಲ. ಮತ್ತೆ ಗೆಲ್ಲುತ್ತೇನೆ ಎಂಬ ಆವೇಶ ಎಂದಿಗೂ ಕಡಿಮೆ ಆಗುವುದಿಲ್ಲ ಎಂದಿದ್ದರು.
ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಈಗ ಬಹಳ ಕಷ್ಟದಲ್ಲಿದ್ದಾರೆ ಎನ್ನುವ ವಿಷಯ ನಮಗೆಲ್ಲ ಗೊತ್ತಿದೆ. ರವಿಚಂದ್ರನ್ ಅವರು ಇಂದು ತಮ್ಮ ಬಳಿ ಇರುವ ಎಲ್ಲವನ್ನು ಕಳೆದುಕೊಂಡು, ಬಹಳ ಕಷ್ಟಕ್ಕೆ ಸಿಲುಕಿದ್ದಾರೆ. ತಮ್ಮ ನೋವುಗಳ ರವಿಚಂದ್ರನ್ ಅವರು ಜೀಕನ್ನಡ ವಾಹಿನಿಯ ಕಾರ್ಯಕ್ರಮದಲ್ಲಿ, ಬಹಳ ನೋವಿನಿಂದ ಹೇಳಿಕೊಂಡರು. ಅದನ್ನು ನೋಡಿ ಎಲ್ಲರೂ ಕಣ್ಣೀರು ಹಾಕಿದ್ದರು.
ಜನರಿಗಾಗಿ ಸಿನಿಮಾ ಮಾಡುತ್ತಿದ್ದೀನಿ, ಆದರೆ ಜನರು ನನ್ನ ಸಿನಿಮಾವನ್ನು ಇಷ್ಟಪಡುತ್ತಿಲ್ಲ. ಜನರನ್ನ ಮೆಚ್ಚಿಸೋದಕ್ಕೆ ಆಗಲಿಲ್ಲ ಅಂತ ಬೇಸರ ನನಗಿದೆ. ನಾನು ಮತ್ತೆ ಒಳ್ಳೆಯ ಸಿನಿಮಾ ಕೊಡುವ ಮೂಲಕ ವಾಪಸ್ ಬರ್ತೀನಿ. ಜನರು ನನ್ನ ಸಿನಿಮಾ ನೋಡುವ ಹಾಗೆ ಮಾಡ್ತೀನಿ ಎಂದು ಬಹಳ ನೋವಿನಿಂದ ಹೇಳಿಕೊಂಡಿದ್ದರು. ತಿಳಿದುಬಂದಿರುವ ಮಾಹಿತಿ ಪ್ರಕಾರ, ರವಿ ಬೋಪಣ್ಣ ಸಿನಿಮಾ ಸೋಲಿನಿಂದ ರವಿಚಂದ್ರನ್ ಅವರು ತಾವು ಮಾಡಿದ ಸಾಲ ತೀರಿಸಲಾಗದೆ ಕಾರ್ ಮಾರಾಟ ಮಾಡಿದ್ದಾರೆ ಎಂದು ಸಹ ತಿಳಿದುಬಂದಿದೆ
ಇನ್ನು ರವಿಚಂದ್ರನ್ ಅವರು ಈ ರೀತಿಯಾಗಿ ಬೇಸರದಲ್ಲಿದ್ದರೂ ಕೂಡ ಅವರು ನಾನು ಹಣವನ್ನು ಎಷ್ಟೋ ಸಂಪಾದನೆ ಮಾಡಿದ್ದೆ ಆದರೆ ಎಲ್ಲವನ್ನು ಕೂಡ ಮತ್ತೆ ಸಿನಿಮಾಗಾಗಿಯೇ ವಿನಿಯೋಗ ಮಾಡಿದ್ದೆ ಆದರೆ ಜನರು ನನ್ನ ಸಿನಿಮಾವನ್ನು ಯಾಕೆ ಒಪ್ಪುತ್ತಿಲ್ಲ ಎಂದು ನನಗೆ ಇಂದಿಗೂ ಕೂಡ ತಿಳಿಯಲು ಆಗುತ್ತಿಲ್ಲ.
ಹಾಗಾಗಿ ನಾನು ಮುಂದೊಂದು ದಿನ ಮತ್ತೆ ಸಿನಿಮಾಾಗೆ ಬಂದು ಜನರೆಲ್ಲರೂ ಒಪ್ಪುವಂತಹ ಸಿನಿಮಾವನ್ನು ಮತ್ತೆ ಮಾಡುತ್ತೇನೆ ಎಂದು ಹೇಳಿದ್ದಾರೆ ರವಿಚಂದ್ರನ್ ಇಂತಹ ಮಾತುಗಳನ್ನು ಮತ್ತು ರವಿಚಂದ್ರನ್ ಅವರು ಬೇಸರದಲ್ಲಿ ನುಡಿದಂತಹ ವಿಚಾರವನ್ನು ಕೇಳಿದಂತಹ ಡಿ ಬಾಸ್ ಅವರು ನಾವು ಕನ್ನಡ ಚಿತ್ರರಂಗದವರು ಎಲ್ಲರೂ ಒಗ್ಗಟ್ಟಾಗಿ ಇರುತ್ತೇವೆ ಹಾಗಾಗಿ ರವಿಚಂದ್ರನ ಅವರಿಗೆ ಬಂದಂತಹ ಕಷ್ಟ ನಮ್ಮೆಲ್ಲರ ಕಷ್ಟವಾಗಿದೆ ಹಾಗಾಗಿ ನಾವೆಲ್ಲರೂ ಸಹ ಅವರಿಗೆ ಕಷ್ಟದಲ್ಲಿ ಹೆಗಲು ಕೊಡುತ್ತೇವೆ ಎಂಬ ಮಾತನ್ನು ಹೇಳುತ್ತಾರೆ. ಈ ಮಾತುಗಳು ಈದೀಗ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಸದ್ದು ಮಾಡುತ್ತಿದೆ ಮತ್ತು ಬಹಳಷ್ಟು ವೈರಲ್ ಆಗಿರುವಂತಹ ವಿಡಿಯೋಗಳಲ್ಲಿ ಅದು ಕೂಡ ಒಂದಾಗಿದೆ.