ನಮ್ಮ ಚಿತ್ರರಂಗದಲ್ಲಿ (KFI) ಬಹಳ ವೇಗವಾಗಿ ಹಾಗೂ ಅತೀ ಹೆಚ್ಚು ಹೆಸರು ಹಾಗೂ ಜನಪ್ರಿಯತೆಯನ್ನು (Name & Fame) ಕೇವಲ ಅಲ್ಪಾವಧಿಯಲ್ಲಿ ಪಡೆದುಕೊಂಡ ನಟಿ ಎಂದರೆ ಅದು ಪ್ರೇಮಾ (Prema) ಎಂದು ಹೇಳಿದರೆ ಖಂಡಿತವಾಗಿಯೂ ತಪ್ಪಾಗಲಾರದು.
ಹೌದು ನಟಿ ಪ್ರೇಮಾ ಅವರು ನಮ್ಮ ಕನ್ನಡ ಚಿತ್ರರಂಗಲ್ಲಿ ಟರ್ನಿಂಗ್ ಪಾಯಿಂಟ್ (Turning Point) ಮತ್ತು ಅತೀ ಹೆಚ್ಚು ಯಶಸ್ವಿಗಳಿಸಿದ್ದು ಅಂದರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shivraj kumar) ಅವರ ನಟನೆಯ ಓಂ (OM) ಸಿನಿಮಾದ ಮೂಲಕ. ರಿಯಲ್ ಸ್ಟಾರ್ ಉಪೇಂದ್ರ (Upendra) ಅವರು ನಿರ್ದೇಶಿಸಿದ ಈ ಸಿನಿಮಾದಲ್ಲಿ ಪ್ರೇಮ ಅವರು ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಹೊಸ ಯಶಸ್ವಿ ನಟಿಯಾಗಿ ಹೊರಹೊಮ್ಮುತ್ತಾರೆ.
ಪ್ರೇಮ ಅವರು ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಬಂದ ನಂತರ ಒಂದರ ಹಿಂದೆ ಒಂದು ಎಂಬಂತೆ ಬ್ಯಾಕ್ ಟು ಬ್ಯಾಕ್ (Back to Back) ಹಿಟ್ ಸಿನಿಮಾಗಳನ್ನು (Hit Movies) ನೀಡುವ ಮೂಲಕವಾಗಿ ಕನ್ನಡ ಚಿತ್ರರಸಿಕರ ಮನದಲ್ಲಿ ಬಹಳ ಆಳವಾಗಿ ನೆಲೆಯೂರಿದ್ದು ಇದಾದ ನಂತರ ನಟಿ ಪ್ರೇಮ ಅವರ ಕಲಾಸೇವೆ ಕನ್ನಡ ಚಿತ್ರರಂಗಕ್ಕೆ ಅತ್ಯಗತ್ಯವಾಗಿ ಹೋಗಿತ್ತು ಎನ್ನಬಹುದು. ಇನ್ನು ಪ್ರೇಮಾ ಅವರು ನಿರಂತರವಾಗಿ ೨೦ರ ದಶಕದಲ್ಲಿ ಮೇರು ನಟ ಸಾಹಸಸಿಂಹ ಡಾ ವಿಷ್ಣುವರ್ಧನ್ (Vishnuvardhan) ರವರೊಂದಿಗೆ ಅತೀ ಹೆಚ್ಚು ಕೌಟುಂಬಿಕ ಸಿನಿಮಾಗಳಲ್ಲಿ ಮಿಂಚಿ ಅನೇಕ ಹಿರಿಯರ ಹೃದಯದಲ್ಲೂ ಕೂಡ ಸ್ಥಾನವನ್ನು ಪಡೆದುಕೊಂಡಿದ್ದು ಕೂಡ ಅಷ್ಟೆ ಸತ್ಯ.
ಇನ್ನು ಕ್ರೇಜಿ ಸ್ಟಾರ್ ವಿ ರವಿಚಂದ್ರನ್ (Ravichandran) ರಿಯಲ್ ಸ್ಟಾರ್ ಉಪೇಂದ್ರ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ರಮೇಶ್ ಅರವಿಂದ್ (Ramesh Arvind) ಸೇರಿದಂತೆ ಸಾಕಷ್ಟು ಸ್ಟಾರ್ ನಟರ ಜೊತೆ ಒಳ್ಳೊಳ್ಳೆ ಚಿತ್ರಗಳನ್ನು ತಮ್ಮ ಅಭಿಮಾನಿಗಳಿಗೆ ಮತ್ತು ಕನ್ನಡ ಚಿತ್ರರಂಗಕ್ಕೆ ಉತ್ತಮ ಕಲಾವಿದೆಯಾಗಿ ಕೊಡುಗೆಯಾಗಿ ನೀಡಿದ್ದು ಆ ಬಳಿಕ ಕೊಡಗಿನ ಈ ಸುಂದರ ನಟಿ ಪ್ರೇಮಾ ಅವರು ತಮ್ಮ ದಾಂಪತ್ಯ ಜೀವನದ ಬಗ್ಗೆ ಮಾತ್ರ ಯೋಚನೆ ಮಾಡುತ್ತಾ ಮನೆಯವರ ನಿಶ್ಚಯದಂತೆ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ಜೀವನ್ ಅಪ್ಪಚ್ಚು ಎಂಬುವರನ್ನು ಮದುವೆಯಾಗುತ್ತಾರೆ.
ಅದಾಗಲೇ ಕನ್ನಡ ಚಿತ್ರರಂಗದಲ್ಲಿ ಅವರದ್ದೇ ಹೆಸರು ಸೃಷ್ಟಿಯಾಗಿದ್ದು ನಿರಂತರವಾಗಿ ಅವರಿಗೆ ಸಾಲು ಸಾಲು ಸಿನಿಮಾಗಳ ಅವಕಾಶಗಳು ಕೂಡ ಮನೆ ಬಾಗಿಲಿನಲ್ಲಿತ್ತು. ಆದರೂ ಕೂಡ ಪ್ರೇಮಾ ಅವರು ಅದನ್ನು ಕೈಬಿಟ್ಟು ವೈವಾಹಿಕ ಜೀವನದ ಕಡೆ ಮುಖ ಮಾಡುತ್ತಾರೆ.
ನಂತರ ಇವರ ದಾಂಪತ್ಯ ಹಲಸಿದ್ದು ಚಿತ್ರರಂಗದಿಂದ ದೂರ ಉಳಿದರು. ಸದ್ಯ ಇದೀಗ ಕೆಲ ಕಾರ್ಯಕ್ರಮಗಳಿಗೆ ವಿಶೇಷ ಅತಿಥಿಯಾಗಿ ಬರುತ್ತಿದ್ದಾರೆ ಪ್ರೇಮಾ. ಅಂತೆಯೇ ತೆಲುಗಿನ ಶ್ರೀದೇವಿ ಡ್ರಾಮಾ ಕಂಪನಿಗೆ ಪ್ರೇಮಾ ಬಂದಿದ್ದು ಇಲ್ಲಿ ಹೇಗೆ ಅದ್ಬುತವಾಗಿ ಡ್ಯಾನ್ಸ್ ಪರ್ಫಾರ್ಮೆನ್ಸ್ ಕೊಟ್ಟಿದ್ದಾರೆ ನೀವೆ ನೋಡಿ.