ನಮ್ಮ ಕನ್ನಡ ಚಿತ್ರರಂಗದ (KFI) ಪವರ್‌ಸ್ಟಾರ್ (Power Star) ಅನ್ನುವಂತಹ ಬಿರುದಿಗೆ ತಕ್ಕಂತೆ ಬಾಳಿ ಬದುಕಿದವರು ನಟ ಪುನೀತ್ ರಾಜ್‌ಕುಮಾರ್ (Puneeth Rajkumar) ರವರು. ಹೌದು ಅದೆಷ್ಟೇ ಅದತೆಂಹದ್ದೆ ವರ್ಕ್ ಲೋಡ್ (Work Load) ಇರಲಿ ಪ್ರತಿದಿನ ಕೂಡ ವರ್ಕ್‌ಔಟ್ (Workout) ಮಾಡುವುದನ್ನು ಮಾತ್ರ ಪುನೀತ್ ರಾಜ್‌ಕುಮಾರ್ ನಿಲ್ಲಿಸುತ್ತಿರಲಿಲ್ಲ. ಇನ್ನು ಆ ಮಟ್ಟಿಗೆ ಪುನೀತ್ ರಾಜ್‌ಕುಮಾರ್ ಶಿಸ್ತಿನ ಜೀವನ ನಡೆಸುತ್ತಿದ್ದರು.
ಇನ್ನು ಪವರ್ ಸ್ಟಾರ್ ವರ್ಕ್ ಔಟ್ ಮಾಡುವ ವಿಡಿಯೋ (Video) ನೋಡಿ ಅದೆಷ್ಟೊ ಮಂದಿ ಪ್ರೇರಣೆ ಹೊಂದಿದವರು ಕೂಡ ಇದ್ದಾರೆ. ಜಿಮ್‌ನಲ್ಲಿ (Gym) ಮನೆಯಲ್ಲಿ ಬೀಚ್‌ನಲ್ಲಿ(Beech) ಎಲ್ಲಿ ನೋಡಿದರೂ ಕೂಡ ಪುನೀತ್ ವರ್ಕ್‌ಔಟ್ ಇಲ್ಲವೇ ಸ್ಟಂಟ್ ಮಾಡಿ ಜನರ ಮೆಚ್ಚುಗೆ ಗಳಿಸುತ್ತಿದ್ದರು. ಇನ್ನು ಅವರು ಇದ್ದಕ್ಕಿದ್ದ ಹಾಗೆ ಅಗಲಿದ ಬಳಿಕ ಆ ಪವರ್‌ಫುಲ್ ವಿಡಿಯೋವನ್ನು ಅಪ್ಪು ಅಭಿಮಾನಿಗಳು ಬಹಳ ಮಿಸ್ ಮಾಡಿಕೊಂಡಿದ್ದರು.
ಸದ್ಯ ಇದೀಗ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಹಾದಿಯನ್ನೇ ಮುಂದುವರೆಸಿದ್ದು ಸದ್ಯ ಸಾಮಾಜಿಕ ಜಾಲತಾಣದಲ್ಲಿ (Social Media) ಅಶ್ವಿನಿ ವರ್ಕ್‌ಔಟ್ ಮಾಡುತ್ತಿರುವ ವಿಡಿಯೋ ವೈರಲ್ ಬಹಳಾನೇ ವೈರಲ್ ಆಗುತ್ತಿದೆ.
ಪುನೀತ್ ರಾಜಕುಮಾರ್ ರವರು ಅಗಲಿದ ನಂತರ ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini Pumeeth Rajkumar) ರವರು ಬಹಳ ಆಕ್ಟಿವ್ ಆಗಿದ್ದಾರೆ. ಅಪ್ಪುವಿನ ಜವಾಬ್ದಾರಿಯನ್ನು ಅವರೇ ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಮುಂದೆ ಸಾಗುತ್ತಿದ್ದು ಸಿನಿಮ( Movie) ಕೆಲಸಗಳನ್ನು ಕೂಡ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಆದರೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಪತಿ ಅಪ್ಪುನಂತೆಯೇ ವರ್ಕ್ ಔಟ್ ಮಾಡುವುದನ್ನು ಅಭಿಮಾನಿಗಳು ನಿರೀಕ್ಷೆ ಮಾಡಿರಲಿಲ್ಲ.
ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಆಶ್ವಿನಿ ಪುನೀತ್ ರಾಜ್‌ಕುಮಾರ್ ರವರ ವರ್ಕ್‌ಔಟ್ ನೋಡಿ ಥ್ರಿಲ್ ಆಗಿದ್ದು ಅಪ್ಪು ಅಭಿನಯದ ಯುವರತ್ನ (Yuvarathna) ಸಿನಿಮಾದ ಫೀಲ್ ದಿ ಪವರ್ (Feel The Power) ಸಾಂಗ್ ಬ್ಯಾಕ್‌ಗ್ರೌಂಡ್‌ನಲ್ಲಿ ಪ್ಲೇ ಆಗುತ್ತಿದೆ. ಹೌದು ಈ ಹಾಡನ್ನು ಕೇಳಿದ ಮೇಲಂತೂ ಪವರ್‌ಸ್ಟಾರ್ ಅಭಿಮಾನಿಗಳು ಮತ್ತಷ್ಟು ಸ್ಟ್ರಾಂಗ್ ಆಗಿದ್ದು ಜೊತೆಗೆ ಭಾವುಕ ಕೂಡ ಆಗಿದ್ದಾರೆ.
ಇನ್ನು ಪುನೀತ್ ರಾಜ್‌ಕುಮಾರ್ ರವರು ಸುಮ್ಮನೆ ಕೂರುವ ವ್ಯಕ್ತಿತ್ವದವರೇ ಆಗಿರಲಿಲ್ಲ. ಹೌದು ಶೂಟಿಂಗ್ ಇಲ್ಲದ ವೇಳೆ ದೇಹವನ್ನು ದಂಡಿಸುತ್ತಿದ್ದು ಅಪ್ಪು ಲೈಫೇ ವರ್ಕ್‌ಔಟ್ ಅನ್ನುವ ಹಾಗಿತ್ತು. ಇನ್ನು ಇವರೊಂದಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಹ ಫಿಟ್‌ನೆಸ್ ಕಡೆ ಗಮನ ಹರಿಸುತ್ತಿದ್ದು ಗಂಧದಗುಡಿ (Gandhada Gudi) ಡಾಕ್ಯೂ ಸಿನಿಮಾ ಮೇಕಿಂಗ್ ವೇಳೆ ಅಪ್ಪು ಜೊತೆ ಟ್ರಕ್ಕಿಂಗ್ ಕೂಡ ಹೋಗಿದ್ದರು. ಇದು ಮೇಕಿಂಗ್ ವಿಡಿಯೋದಲ್ಲಿ ಸೆರೆಯಾಗಿದೆ.
ಸದ್ಯ ಅಶ್ವಿನಿ ಪುನೀತ್ ರಾಜ್‌ಕುಮಾರ್ ರವರು ವರ್ಕ್‌ಔಟ್ ವಿಡಿಯೋ ನೋಡಿ ಅಪ್ಪು ಫ್ಯಾನ್ಸ್ ಖುಷಿಯಾಗಿದ್ದು ಕೆಲವರು ಅಶ್ವಿನಿ ಪುನೀತ್ ರಾಜ್‌ಕುಮಾರ್‌ಗೆ ಧೈರ್ಯ ತುಂಬುತ್ತಿದ್ದಾರೆ. ಹೌದು ಮತ್ತೆ ಕೆಲವರು ಒತ್ತಡದಿಂದ ಆಚೆ ಬರಲು ಇದು ಒಳ್ಳೆ ಮಾರ್ಗ ಎಂದು ಸಲಹೆಯನ್ನೂ ನೀಡಿದ್ದುಮತ್ತೆ ಕೆಲವರು ಅಪ್ಪು ವರ್ಕ್‌ಔಟ್ ವಿಡಿಯೋ ಬಗ್ಗೆನೂ ಮಾತಾಡುತ್ತಿದ್ದಾರೆ.