ಕಳೆದ ವರುಷ ಜುಲೈ ತಿಂಗಳಲ್ಲಿ ತಮಿಳು ನಟ (Tamil Actor) ವಿಕ್ರಮ್ (Vikram) ಹೃದಯಾಘಾತದಿಂದ (Heart Attack) ಆಸ್ಪತ್ರೆಗೆ ದಾಖಲಾಗಿದ್ದರು. ಹೌದು ಅವರ ಆರೋಗ್ಯ (Health) ಪರಿಸ್ಥಿತಿ ಕೊಂಚ ಗಂಭೀರವಾಗಿತ್ತು. ಅದ್ಭುತ ನಟ ಎನಿಸಿಕೊಂಡಿರುವ ವಿಕ್ರಮ್ ರವರು ಫಿಟ್ನೆಸ್ (Fitness) ವಿಚಾರದಲ್ಲಿ ಎಲ್ಲರನ್ನೂ ಮೀರಿಸುವಂತಿದ್ದರು. ಅವರ ಲುಕ್ (Look) ಅಭಿಮಾನಿಗಳನ್ನು (Fans) ಒಂದು ಕ್ಷಣ ದಂಗು ಬಡಿಸುವಂತಿರುತ್ತಾರೆ. ಹೌದು ಆದರೆ ಅವರ ಈ ಫಿಟ್ನೆಸ್ ಅವರಿಗೆ ಮುಳುವಾಯ್ತಾ ಎನ್ನುವ ಪ್ರಶ್ನೆ ಹಲವಾರು ಜನರನ್ನು ಕಾಡಿತ್ತು ಎನ್ನಬಹುದು.
2015ರಲ್ಲಿ ಬಿಡುಗಡೆಯಾದ ಐ ಸಿನಿಮಾ (I Movie)ಎಲ್ಲರಿಗೂ ನೆನಪಿಸರಲೇಬೇಕು. ಅದರಲ್ಲಿನ ವಿಕ್ರಮ್ ಲುಕ್(Look) ಅನ್ನು ಯಾರೂ ಮರೆಯಲೂ ಸಾಧ್ಯವಿಲ್ಲ. ಆದರೆ ಆ ಸಮಯದಲ್ಲಿ ಅವರು ಕಷ್ಟಪಟ್ಟು ಮಾಡಿದ್ದ ಫಿಟ್ನೆಸ್ ತಂತ್ರಗಳು ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿತ್ತು ಎಂದು ಹೇಳಲಾಗುತ್ತಿದೆ.
ಹೌದು ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಲ ವರ್ಷದ ಹಿಂದೆ ಸಂದರ್ಶನವೊಂದರಲ್ಲಿ(Interview) ಮಾತನಾಡಿದ್ದ ಅವರು ನಾನು ದಿನಕ್ಕೆ 300 ಗ್ರಾಂ ಕ್ಯಾಲೋರಿ ಬರ್ನ್ ಮಾಡುತ್ತಿದ್ದೆ. ನಾನು ದಿನಕ್ಕೆ ಮೂರು ಬಾರಿ ವರ್ಕ್ ಔಟ್ ಮಾಡುತ್ತಿದ್ದೆ. ನಾನು ತಿನ್ನುವುದಕ್ಕಿಂತ ಹೆಚ್ಚು ಕ್ಯಾಲೋರಿಗಳನ್ನು ಬರ್ನ್ ಮಾಡುತ್ತಿದ್ದೆ. ಅವರು ಎರಡೂವರೆ ವರ್ಷಗಳ ಕಾಲ ಇದೇ ರೀತಿಯ ಆಹಾರಕ್ರಮವನ್ನು ಮುಂದುವರೆಸಿದ್ದೆ ಎಂದು ಹೇಳಿದ್ದರು.
ಅಷ್ಟು ಮಾತ್ರವಲ್ಲದೇ ಅವರು ನನಗೆ ಯಾವಾಗಲೂ ಫಿಟ್ ಇರುವುದು ಬಹಳ ಇಷ್ಟ. ಅದಕ್ಕಾಗಿ ಪ್ರತಿದಿನ ನಾನು ವರ್ಕೌಟ್ ಮಾಡುತ್ತೇನೆ ಎಂದು ಬಹಳ ಉತ್ಸಾಹದಿಂದ ಹೇಳಿದ್ದು ಆದರೆ ಐ ಸಿನಿಮಾ ನಂತರ ಅವರಿಗೆ ಅವರ ಆರೋಗ್ಯದ ಸಮಸ್ಯೆ ಕಾಣಿಸಿಕೊಂಡಿತ್ತು ಎಂಬ ವರದಿಗಳು ಬಂದಿದ್ದವು. ಆದರೆ ಅವರಿಗೆ ಹೃದಯಾಘಾತವಾಗಿರುವುದು ಮತ್ತೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು ಎನ್ನಬಹುದು.
ವಿಕ್ರಮ್ಗೆ ಇನ್ನೂ 56ರ ಹರೆಯ. ಆರೋಗ್ಯದ ಬಗ್ಗೆಹೆಚ್ಚು ಕಾಳಜಿ ಮಾಡುವವರಿಗೆ ಈ ಸಮಸ್ಯೆ ಬಂದಿದ್ದು ನಿಜಕ್ಕೂ ಆತಂಕಕಾರಿ. ಕಾಲಿವುಡ್ನಲ್ಲಿ(Kollywood) ವಿಕ್ರಮ್ ಅವರನ್ನು ಫಿಟ್ ಆ್ಯಂಡ್ ಫೈನ್ ನಟ ಎಂದು ಕರೆಯುತ್ತಿದ್ದರು. ಅವರ ಲುಕ್ ಅವರ ಮಗನನ್ನೇ ಮೀರಿಸುವ ರೀತಿ ಇತ್ತು. ಯಾರಿಗೂ ಅವರ ವಯಸ್ಸಿನ ಬಗ್ಗೆ ಅನುಮಾನವೇ ಬರುತ್ತಿರಲಿಲ್ಲ. ಆ ರೀತಿಯಾಗಿ ಅವರು ತಮ್ಮ ದೇಹದ ಬಗ್ಗೆ ಕಾಳಜಿವಹಿಸಿದ್ದರು. ಆದರೆ ಅವರ ಅತಿಯಾದ ಫಿಟ್ನೆಸ್ ತಂತ್ರ ಅವರಿಗೆ ಮುಳುವಾಗಿದೆ ಎನ್ನಲಾಗುತ್ತಿದೆ. ಸದ್ಯ ಇದೀಗ ಐ ಸಿನಿಮಾದ ಮೇಕಿಂಗ್ ವಿಡಿಯೋ ವೈರಲ್ ಆಗುತ್ತಿದ್ದು ಸಿನಿಮಾಗಾಗಿ ಎಷ್ಟು ಶ್ರಮಿಸಿದ್ದರು ನೀವೆ ನೋಡಿ.