ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಗೆಳೆತನಕ್ಕೆ ದರ್ಶನ್ ಕೊಡುವ ಬೆಲೆ ನೋಡಿ…ಚಿಂದಿ ವಿಡಿಯೋ

1,458

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಚಿತಾ ರಾಮ್ ನಾಯಕ ಹಾಗೂ ನಾಯಕಿಯಾಗಿ ನಟಿಸಿರುವ ವಿ ಹರಿಕೃಷ್ಣ ಆಕ್ಷನ್ ಕಟ್ ಹೇಳಿರುವ ಬಹು ನಿರೀಕ್ಷಿತ ಕ್ರಾಂತಿ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು ಮುಂದಿನ ಜನವರಿ 26ಕ್ಕೆ ಗಣರಾಜ್ಯೋತ್ಸವದ ಪ್ರಯುಕ್ತ ಕ್ರಾಂತಿ ಚಿತ್ರ ಬೆಳ್ಳಿತೆರೆಗೆ ಅಪ್ಪಳಿಸಲಿದೆ. ಹೌದು ಬಿಡುಗಡೆ ದಿನಾಂಕ ಸಮೀಪಿಸುತ್ತಿದ್ದಂತೆ ಪ್ರಚಾರದ ಕೆಲಸಗಳನ್ನು ಆರಂಭಿಸಿರುವ ಚಿತ್ರತಂಡ ಚಿತ್ರದ ಹಾಡುಗಳನ್ನು ಒಂದೊಂದಾಗಿ ಬಿಡುಗಡೆಗೊಳಿಸುತ್ತಿದೆ.

ಕಳೆದ ಡಿಸೆಂಬರ್ 10ರಂದು ಮೈಸೂರಿನಲ್ಲಿ ತನ್ನ ಮೊದಲ ಹಾಡು ಧರಣಿಯನ್ನು ಬಿಡುಗಡೆ ಮಾಡಿದ್ದ ಕ್ರಾಂತಿ ಚಿತ್ರತಂಡ ಇದೀಗ ತನ್ನ ಎರಡನೇ ಹಾಡನ್ನು ಕೂಡ ಬಿಡುಗಡೆ ಮಾಡಿದೆ. ಹೌದು ಇದೇ ಡಿಸೆಂಬರ್ 18ರ ಭಾನುವಾರದಂದು ಹೊಸಪೇಟೆಯ ಡ್ಯಾಮ್ ರಸ್ತೆಯಲ್ಲಿರುವ ವಾಲ್ಮೀಕಿ ವೃತ್ತದಲ್ಲಿ ಸಂಜೆ 7 ಗಂಟೆಗೆ ಕ್ರಾಂತಿ ಚಿತ್ರದ ಎರಡನೇ ಹಾಡು ಬೊಂಬೆ ಬೊಂಬೆ ಬಿಡುಗಡೆಯಾಗಿದೆ.

ಇನ್ನು ಹಾಡು ಬಿಡುಗಡೆ ಕಾರ್ಯಕ್ರಮಕ್ಕೆ ಕ್ರಾಂತಿ ಚಿತ್ರತಂಡ ಆಗಮಿಸಿದ್ದು ಮೊದಲ ಹಾಡಿನಂತೆ ಈ ಹಾಡು ಬಿಡುಗಡೆ ಕಾರ್ಯಕ್ರಮಕ್ಕೂ ಸಹ ದರ್ಶನ್ ನಿರೂಪಕನಾಗಿ ನಿರೂಪಣೆ ಮಾಡಿದ್ದಾರೆ. ಇನ್ನು ಇದು ದರ್ಶನ್ ಹಾಗೂ ರಚಿತಾ ರಾಮ್ ನಡುವಿನ ಡ್ಯೂಯೆಟ್ ಹಾಡಾಗಿದ್ದು ಸೋನು ನಿಗಮ್ ದನಿಯಲ್ಲಿ ಮೂಡಿಬಂದಿದೆ.

ಹಾಡಿನ ಸಣ್ಣ ತುಣುಕನ್ನು ಚಿತ್ರತಂಡ ಹಂಚಿಕೊಂಡಿದ್ದು ಹಾಡು ಕಲರ್‌ಫುಲ್ ಆಗಿ ಮೂಡಿಬಂದಿರುವುದನ್ನು ಕಾಣಬಹುದಾಗಿದೆ. ಹೊಂಬಿಸಿಲಲ್ಲಿ.. ನಂಗ್ಯಾಕೆ ಕಂಡಳು… ಒಮ್ಮೆಲೆ ತಿರುಗಿ.. ಹಿಂಗ್ಯಾಕೆ ನಕ್ಕಳು ಎಂಬ ಸಾಹಿತ್ಯದ ಸಣ್ಣ ತುಣುಕು ಬಿಡುಗಡೆಯಾಗಿದ್ದು ಇದೊಂದು ಮೆಲೋಡಿಯಸ್ ಹಿಟ್ ಆಗಲಿದೆ ಎಂದು ಅಭಿಮಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸದ್ಯ ಈ ನಡುವೆ ಮೊದಲ ಬಾರಿಗೆ ಡಿ ಬಾಸ್ ಮರಿ ಟೈಗರ್ ವಿನೋಧ್ ಪ್ರಭಾಕರ್ ರವರಿಗೆ ಎಲ್ಲರ ಮುಂದೆ ಕಣ್ಣಲ್ಲೇ ಗದರಿದ ಘಟನೆ ನಡೆದಿದೆ.

ಕನ್ನಡದಲ್ಲಿ ಧರಣಿ ಹಾಡಿಗೆ ವಿ ನಾಗೇಂದ್ರ ಪ್ರಸಾದ್ ರವರು ಸಾಹಿತ್ಯವನ್ನು ಬರೆದಿದ್ದು ಪಂಚಮ್ ಜೀವ ಸಂತೋಷ್ ವೆಂಕಿ ಅನಿರುದ್ಧಾ ಶಾಸ್ತ್ರಿ ಮಧ್ವೇಶ್ ಭಾರದ್ವಾಜ್ ವಿಹಾನ್ ಕುಶಾಲಾ ಲಕ್ಷ್ಮಿ ವಿಜಯ್ ಮೇಘನಾ ಕುಲಕರ್ಣಿ ಮತ್ತು ಪೂಜಾ ರಾವ್ ಹೀಗೆ ಒಂಬತ್ತು ಗಾಯಕ ಹಾಗೂ ಗಾಯಕಿಯರು ಈ ಹಾಡಿಗೆ ಕಂಠದಾನ ಮಾಡಿದ್ದಾರೆ.

ಇನ್ನು ಈ ಹಾಡಿನ ಬಿಡುಗಡೆಯ ವೇಳೆ ವೇದಿಕೆಯ ಮೇಲೆ ವಿನೋದ್ ಪ್ರಭಾಕರ್ ಅವರು ಎಂಟ್ರಿ ಕೊಟ್ಟಿದ್ದು ಇದನ್ನು ನೋಡಿದ ಡಿ ಬಾಸ್ ಅವರು ವಿನೋದ್ ಪ್ರಭಾಕರ್ ಅವರು ಸರ್ಪ್ರೈಸ್ ನೀಡಿದ್ದಾರೆ ಎಂದಿದ್ದು ಅವರನ್ನು ಪ್ರೀತಿಯಿಂದ ಅಪ್ಪುಕೊಂಡಿದ್ದಾರೆ. ನಂತರ ಇದಕ್ಕಿಂದಂತೆ ಕಣ್ಣಲ್ಲಿ ಗದರಿದ್ದು ಅದು ಯಾಕೆ ಎಂದು ತಿಳಿಯಲು ಲೇಖನಿ ಕೆಳಗಿನ ವಿಡಿಯೋ ನೋಡಿ.

ಸದ್ಯ ಈ ವಿಡಿಯೋ  ತುಣುಕೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಈ ಸಂಬಂಧ ನಟ ದರ್ಶನ್‌ ಮತ್ತು ಚಿತ್ರ ತಂಡ ನಗರದ ಹೊಟೇಲೊಂದರಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡಿದ್ದಾರೆ. ಸಿನಿಮಾ ಬಿಡುಗಡೆಯ ಬಗ್ಗೆ ಮಾತನಾಡಿದ ದರ್ಶನ್ ಸಿನಿಮಾದ ಕಥಾವಸ್ತುವಿನೊಂದಿಗೆ ರಾಜಿಯಾಗದೇ ಮಾಸ್ ವೀಕ್ಷಕರನ್ನು ರಂಜಿಸುವುದೇ ತಮ್ಮ ವೈಶಿಷ್ಟ್ಯವಾಗಿದೆ ಎಂದು ಹೇಳಿದ್ದಾರೆ.