Ayra and Yatharv with Radhika Pandit father:ಕನ್ನಡ ಚಿತ್ರರಂಗದ ಕ್ಯೂಟ್ ಜೋಡಿಯಾದ ಯಶ್ ಹಾಗೂ ರಾಧಿಕಾ ಪಂಡಿತ್ ಸದಾ ಸುದ್ದಿಯಲ್ಲಿರುತ್ತಾರೆ ಎನ್ನಬಹುದು. ಸದ್ಯ ಇದೀಗ ಯಶ್ ರವರು ಹೊಸ ಹೊಸ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದು ಇನ್ನು ರಾಧಿಕಾ ಪಂಡಿತ್ ಅವರ ಅಪ್ಪನ ಜೊತೆಗಿನ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಹೌದು ರಾಧಿಕಾ ಪಂಡಿತ್ ಯಶ್ ಜೊತೆಗೆ ಮದುವೆ ಆದ ಬಳಿಕ ಚಿತ್ರ ರಂಗದಿಂದ ದೂರ ಇದ್ದು ಆದರೂ ಯಶ್ ಜೊತೆಗೆ ಕೆಲವು ಕಾರ್ಯಕ್ರಮಗಳಿಗೆ ಜೋಡಿಯಾಗಿ ಹೋಗಿ ಅಭಿಮಾನಿಗಳಿಗೆ ಖುಷಿ ನೀಡುತ್ತಿದ್ದಾರೆ. ಇನ್ನು ಇದೀಗ ರಾಧಿಕಾ ಪಂಡಿತ್ ತಮ್ಮ ಸಂಸಾರ ಹಾಗೂ ಮಕ್ಕಳ ಆರೈಕೆಯಲ್ಲಿ ಬ್ಯುಸಿ ಆಗಿದ್ದು ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣಗಳ್ಲಲಿ ಸದಾ ಆಕ್ಟಿವ್ ಇರುತ್ತಾರೆ. ಇದೀಗ ರಾಧಿಕಾ ಪಂಡಿತ್ ಅವರು ತಮ್ಮ ತಂದೆಯಾ ಜೊತೆಗಿನ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಸಾಮಾನ್ಯವಾಗಿ ಮಕ್ಕಳಿಗೆ ಅವರ ತಂದೆಯೇ ಹೀರೋ ಆಗಿರುತ್ತಾರೆ. ಅಪ್ಪ ತಪ್ಪ ಬಳಿ ಇದ್ದರೆ ಸೇಫ್ ಫೀಲ್ ಆಗುವುದು ಸಾಮಾನ್ಯ. ಹಾಗೇಯೇ ಇದೀಗ ರಾಧಿಕಾ ಪಂಡಿತ್ ತಮ್ಮ ತಂದೆಯ ಜೊತೆಗಿನ ಫೋಟೋವನ್ನು ಅಪ್ಲೋಡ್ ಮಾಡಿದ್ದು ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ರಾಧಿಕಾ ಪಂಡಿತ್ ತಂದೆಯ ಜೊತೆಗಿನ ಲೇಟೆಸ್ಟ್ ಫೋಟೋವನ್ನು ಹಂಚಿಕೊಂಡಿದ್ದು ತಮ್ಮ ಹಳೆಯ ನೆನಪನ್ನು ಮೆಲಕುಹಾಕಿದ್ದರೆ. ರಾಧಿಕಾ ಪಂಢಿತ್ ತಮ್ಮ ಇಬ್ಬರು ಮಕ್ಕಳೊಂದಿಗೆ ಅಪ್ಪನ ಜೊತೆಗೆ ಸ್ಕೂಟರ್ ನಲ್ಲಿ ಕುಳಿತ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.
ರಾಧಿಕಾ ಪಂಡಿತ್ ರವರು ತಮ್ಮ ಇಬ್ಬರು ಮಕ್ಕಳೊಂದಿಗೆ ಅಪ್ಪನ ಜೊತೆಗೆ ಸ್ಕೂಟರ್ ನಲ್ಲಿ ಕುಳಿತ ಫೋಟೋ ಅನ್ನು ಹಂಚಿಕೊಂಡಿದ್ದು ನನ್ನ ಅಪ್ಪ ಜಗತ್ತಿನಲ್ಲಿಯೇ ಸೇಫ್ ಡ್ರೈವರ್. ಅವರು ಡ್ರೈವ್ ಮಾಡುವಾಗ ನಾನು ನಿಜಕ್ಕೂ ನಿದ್ರಿಸಬಹುದು. ನನ್ನ ಪೂರ್ತಿ ಜೀವನದಲ್ಲಿ ಶಾಲೆ ಮತ್ತು ಕಾಲೇಜು ಲೈಫ್ ನಲ್ಲಿ ಅಪ್ಪ ನನ್ನನ್ನು ಪಿಕಪ್ ಮತ್ತು ಡ್ರಾಪ್ ಮಾಡುತ್ತಿದ್ದರು ಎಂದು ರಾಧಿಕಾ ಪಂಡಿತ್ ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಇನ್ನು ಮಕ್ಕಳ ಜೊತೆಗೆ ಅಪ್ಪನ ಸ್ಕೂಟರ್ ಹತ್ತಿದ ರಾಧಿಕಾ ಪಂಡಿತ್ ಫೋಟೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು ಐರಾ ತನ್ನ ಅಜ್ಜನ ಜೊತೆ ಮುಂದೆ ಕುಳಿತಿದ್ದಾಳೆ ರಾಧಿಕಾ ಪಂಢಿತ್ ತಮ್ಮ ಮಗನನ್ನು ಎತ್ತಿಕೊಂಡು ಹಿಂದೆ ಕುಳಿತಿದ್ದಾರೆ. ಅಪ್ಪನ ಜೊತೆಗಿನ ಇವರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಲೇಖನಿಯ ಕೆಳಗೆ ಈ ವಿಡಿಯೋ ನೋಡಬಹುದು.