ವಾರ್ತಾ ಮಂಜರಿ
Trending Stories, Viral News, Gossips & Everything in Kannada

ತೊಟ್ಟಿಲಲ್ಲಿ ತುಂಟಾಟ ಮಾಡುತ್ತಿರುವ ಅಮೂಲ್ಯ ಮಕ್ಕಳು…ಚಿಂದಿ ವಿಡಿಯೋ

1,343

Amulya baby cute video Latest: ನಟಿ ಅಮೂಲ್ಯ ರವರು ಚೆಲುವಿನ ಚಿತ್ತಾರ ನಾನು ನನ್ನ ಕನಸು ಚೈತ್ರದ ಚಂದ್ರಮ ಶ್ರಾವಣಿ ಸುಬ್ರಮಣ್ಯ ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸಿ ಕನ್ನಡ ಜನತೆಯ ಪ್ರೀತಿಯನ್ನು ಗೆದ್ದು, ಕರ್ನಾಟಕದ ಮನೆ ಮಗಳಂತೆ ಆಗಿದ್ದು ಉದ್ಯಮಿಯಾದ ಜಗದೀಶ್ ಅವರನ್ನು ಕೈ ಹಿಡಿಯುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಮೂಲ್ಯ ಅವರು ನಂತರದಲ್ಲಿ ಯಾವುದೇ ಸಿನಿಮಾಗಳಲ್ಲಿ ಅಭಿನಯಿಸಿಲ್ಲ. ಆದರೆ ಮಾತ್ರ ತಮ್ಮ ವೈಯಕ್ತಿಕ ವಿಚಾರಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡುತ್ತಲೇ ಬಂದಿದ್ದಾರೆ

ಇನ್ನು ಅವಳಿ ಗಂಡು ಮಕ್ಕಳ ತಾಯಿಯಾದ ಅಮೂಲ್ಯ ಅವರ ಮುದ್ದಾದ ಕಂದಮ್ಮಗಳ ಫೋಟೋಗಳನ್ನು ಅಭಿಮಾನಿಗಳಿಗಾಗಿ ಶೇರ್ ಮಾಡುತ್ತಿರುತ್ತಾರೆ. ವೀವ್ಸ್ ಲೈಕ್ಸ್ ಕಮೆಂಟ್ಸ್ ಗಳು ಜೋರಾಗಿಯೇ ಇರುತ್ತಿದ್ದು  ಮಕ್ಕಳು ಜನಸಿ 7 ತಿಂಗಳ ಬಳಿಕ ಗುರೂಜಿಗಳ ಆಶೀರ್ವಾದದೊಂದಿಗೆ ಗುರುಗಳು ಸೂಚಿಸಿದಂತೆ ಮಕ್ಕಳಿಗೆ ನಾಮಕರಣ ಮಾಡಿದ್ದರು. ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ನೆರವೇರಿದ್ದ ನಾಮಕರಣ ಶಾಸ್ತ್ರದ ಅದ್ದೂರಿ ಕಾರ್ಯಕ್ರಮದ ವಿಡಿಯೋಗಳು ಎಲ್ಲೆಡೆ ಹರಿದಾಡುತ್ತಿದೆ.

ಇನ್ನು ನಟಿ ಅಮೂಲ್ಯ ಅವರ ಅವಳಿ ಮಕ್ಕಳ ನಾಮಕರಣ ಶಾಸ್ತ್ರಕ್ಕೆ ಕನ್ನಡ ಚಿತ್ರರಂಗದ ನಟ ನಟಿಯರ ದಂಡೇ ಹರಿದು ಬಂದಿದ್ದು ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪ ದಂಪತಿಗಳು ಅಂದದ ಉಡುಗೆ ಉಟ್ಟು ಬಂದಿದ್ದರು. ಇನ್ನು ತನ್ನ ಮಗಳೊಂದಿಗೆ ಹ್ಯಾಟ್ರಿಕ್ ಹೀರೋ ಶಿವಣ್ಣ ಬಂದಿದ್ದರು.

 

ಕನ್ನಡದ ಡಿ ಬಾಸ್ ದರ್ಶನ್ ಕೂಡ ಉಪಸ್ಥಿತರಿದ್ದು ಅಮೂಲ್ಯ ದಂಪತಿ ಹಾಗೂ ಮಕ್ಕಳೊಂದಿಗೆ ಫೋಟೋವನ್ನು ತೆಗೆಸಿಕೊಂಡಿದ್ದರು. ಮಳೆ ಚಿತ್ರದಲ್ಲಿ ಅಮೂಲ್ಯ ಅವರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದ ಲವ್ಲಿ ಸ್ಟಾರ್ ಪ್ರೇಮ್ ಅವರು ಕಾರ್ಯಕ್ರಮಕ್ಕೆ ಆಗಮಿಸಿದ್ದು ಅದ್ದೂರಿ ಚಿತ್ರದ ಬಹದ್ದೂರ್ ಧ್ರುವ ಸರ್ಜಾ ಅಮೂಲ್ಯ ಅವರ ಅವಳಿ ಮಕ್ಕಳನ್ನು ಮುದ್ದಾಡಿದ್ದಾರೆ.

ನೆರೆದಿದ್ದ ಸಂಬಂಧಿಕರು ಕನ್ನಡ ಕಲಾವಿದರು ಅಮೂಲ್ಯ ಅವರ ಅವಳಿ ಮಕ್ಕಳಿಗೆ ಚಂದದ ಉಡುಗೊರೆಯನ್ನು ನೀಡುತ್ತಾ ಅವರ ಉಜ್ವಲ ಭವಿಷ್ಯಕ್ಕಾಗಿ ಆಶೀರ್ವಾದ ಮಾಡಿ ಹೋಗಿದ್ದಾರೆ. ಚೆಲುವಿನ ಚಿತ್ತಾರ ಶ್ರಾವಣಿ ಸುಬ್ರಮಣ್ಯ ಖುಷಿಖುಷಿಯಾಗಿ ಮುಗುಳುನಗೆ ಚಿತ್ರಗಳಲ್ಲಿ ನಟ ಗಣೇಶ್ ಅವರೊಂದಿಗೆ ಪರದೆಯ ಮೇಲೆ ಕಾಣಿಸಿಕೊಂಡ ನಟಿ ಅಮೂಲ್ಯ ರವರ ಮಕ್ಕಳ ನಾಮಕರಣ ಶಾಸ್ತ್ರಕ್ಕೆ ಆಗಮಿಸಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಅವರ ಪತ್ನಿ ಶಿಲ್ಪ ಅವರು ಸುಂದರವಾಗಿ ಅಲಂಕೃತಗೊಂಡಿದ್ದ ವೇದಿಕೆಯಲ್ಲಿ ಅವಳಿ ಗಂಡು ಮಕ್ಕಳಿಗೆ ಕಾಸ್ಟ್ಲಿ ಉಡುಗೊರೆಯನ್ನು ನೀಡಿದ್ದಾರೆ.

ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಅವರು ಒಂದು ಮಗುವಿನ ಕುತ್ತಿಗೆಗೆ ಗೋಲ್ಡ್ ಚೈನ್ ಅನ್ನು ಉಡುಗೊರೆಯಾಗಿ ಹಾಕಿದ್ದು ಅವರ ಪತ್ನಿ ಶಿಲ್ಪಾ ಅವರು ಇನ್ನೊಂದು ಮಗುವಿನ ಎರಡು ಕೈಗಳಿಗೆ ಗೋಲ್ಡ್ ಬಳೆಗಳನ್ನು ತೊಡಿಸಿದರು.

 

ಹೌದು ಪುಟ್ಟ ಮಕ್ಕಳ ದೇಹದ ಮೇಲೆ ಬಂಗಾರವು ಮತ್ತಷ್ಟು ಪ್ರಕಾಶಮಾನವಾಗಿ ಮಿನುಗುತ್ತಿತ್ತು. ನಾಮಕರಣದ ಫೋಟೋ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಅಭಿಮಾನಿಗಳು ಖುಷಿಯಾಗಿದ್ದಾರು. ಸದ್ಯ ಇದೀಗ ಹೊಸ ವಿಡಿಯೋವೊಂದು ವೈರಲ್ ಆಗಿದ್ದು ಅವಳಿ ಮಕ್ಕಳಲ್ಲಿ ಯಾರು ತುಂಬಾ ತುಂಟಾ ಗೊತ್ತಾ? ಕೆಳಗಿನ ವಿಡಿಯೋ ನೋಡಿ.