ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಸತ್ಯ ಸೀರಿಯಲ್ ಕಾರ್ತಿಕ್ ನಿಶ್ಚಿತಾರ್ಥದ ಕಂಪ್ಲೀಟ್ ವಿಡಿಯೋ ನೋಡಿ…ಚಿಂದಿ ಕ್ಷಣ

8,610

ಜೀ ವಾಹಿನಿಯ ಸತ್ಯ ಎಂಬ ಧಾರಾವಾಹಿಯಲ್ಲಿನ ಎಲ್ಲಾ ಪಾತ್ರಗಳನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದು ಕಿರುತೆರೆಯಲ್ಲಿ ಸಣ್ಣ ಸಣ್ಣ ಪಾತ್ರಗಳ ಮೂಲಕ ಬಣ್ಣ ಹಚ್ಚಿದ ನಟ ಸಾಗರ್ ಬಿಳಿ ಗೌಡ ಅವರಿಗೆ ಸತ್ಯ ಧಾರಾವಾಹಿ ದೊಡ್ಡ ಬ್ರೇಕ್ ಕೊಟ್ಟಿದೆ ಎನ್ನಬಹುದು. ಸಾಗರ್ ಬಿಳಿ ಗೌಡ ಅವರು ಕಾರ್ತಿಕ್ ಅಂದರೆ ಅಮುಲ್ ಬೇಬಿ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದು ಸಾಗರ್ ಬಿಳಿ ಗೌಡ ರವರಿಗೆ ನಟಿಸುವುದು ಎಂದರೆ ತುಂಬಾನೇ ಇಷ್ಟ.

ಹೌದು ನಟನಾಗುವ ಆಸೆಯಿಂದ ಕೆಲ ತರಬೇರಿಗಳನ್ನು ಕೂಡ ವಿದೇಶದಲ್ಲಿ ಪಡೆದವರಾಗಿದ್ದು ಇನ್ನು ಸಾಗರ್ ಅವರು ಲಂಡನ್ ನಲ್ಲಿ ಎಂಬಿಎ ಓದಿ ಭಾರತದಲ್ಲಿ ಮಾಸ್ಟರ್ ಇನ್ ಬಿಸಿನೆಸ್ ಲಾ ಮಾಡಿಕೊಂಡಿದ್ದಾರೆ. ಇನ್ನು ಇಷ್ಟೆಲ್ಲಾ ಓದಿದ ಮೇಲೂ ಮನಸೆಲ್ಲಾ ಇದ್ದದ್ದು ಮಾತ್ರ ಅಭಿನಯರಂಗದಲ್ಲಿ. ಹೌದಿ ಹಾಗಾಗಿ ಸಾಗರ್ ಅವರು ಅಭಿನಯ ತರಬೇತಿ ಕೇಂದ್ರಕ್ಕೆ ಸೇರಿಕೊಂಡರು. ನಟನಾ ಶಾಲೆಗೆ ಸೇರಿಕೊಂಡಿದ್ದು ಬಳಿಕ ವಿದೇಶಕ್ಕೆ ತೆರಳಿ ಆರು ತಿಂಗಳ ಕಾಲ ಅಡ್ವಾನ್ಸ್ ಆಕ್ಟಿಂಗ್ ಕೋರ್ಸ್ ಮಾಡಿದ್ದಾರೆ.

ಆಕ್ಟಿಂಗ್ ಕೋರ್ಸ್ ಎಲ್ಲಾ ಮುಗಿದ ಬಳಿಕ ಸಾಗರ್ ಅವರು ಕಿರುತೆರೆಗೂ ಎಂಟ್ರಿ ಕೊಟ್ಟಿದ್ದು ಕಿನ್ನರಿ ಧಾರಾವಾಹಿ ಮೂಲಕ ಕಿರುತೆರೆ ಲೋಕಕ್ಕೆ ಪಾದಾರ್ಪಣೆ ಮಾಡಿದರು.ಹೌದು ಇದರಲ್ಲಿ ಮನೆ ಕೆಲಸದವನ ಪಾತ್ರ ಮಾಡಿದ್ದರು. ತದನಂತರ ಸಾಗರ್ ಅವರಿಗೆ ಉದಯ ಟಿವಿಯಲ್ಲಿ ಮೂಡಿ ಬಂದ ಮನಸಾರೆ ಧಾರಾವಾಹಿಯಲ್ಲಿ ಅವಕಾಶ ಸಿಕ್ಕಿದ್ದು ಇದರಲ್ಲಿ ಸಾಗರ್ ತಲೆಹರಟೆ ತುಂಟಾಟ ತಮಾಷೆ ಮಾಡಿಕೊಂಡು ನಟಿಸಿದ್ದರು.

ಬಳಿಕ ಸತ್ಯ ಧಾರಾವಾಹಿಯಲ್ಲಿ ನಾಯಕ ನಟನ ಪಾತ್ರವನ್ನು ನಿಭಾಯಿಸುತ್ತಿದ್ದು ಈಗಾಗಲೇ ಸುಮಾರು ಎರಡು ವರ್ಷಗಳಿಂದ ಮೂಡಿ ಬರುತ್ತಿರುವ ಸತ್ಯ ಧಾರಾವಾಹಿಯಲ್ಲಿ ಸಾಗರ್ ಅವರ ಪಾತ್ರವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.

ಇನ್ನು ಸಾಗರ್ ಬಿಳಿ ಗೌಡ ಅವರು ತಮ್ಮ ಜೀವನದ ಮುಖ್ಯ ಹಂತವನ್ನು ತಲುಪಿದ್ದು ಅದೇನೆಂದರೆ ಕಿರುತೆರೆಯ ಜೋಡಿಗಳ ಸಾಲಿಗೆ ಸಾಗರ್ ಕೂಡ ಸೇರಲಿದ್ದಾರೆ. ಹೌದು ಕಳೆದ ವರ್ಷ ನಡೆದ ಸಂದರ್ಶನ ಒಂದರಲ್ಲಿ ಮಾತನಾಡಿದ್ದ ಸಾಗರ್ ಅವರು ತಮಗೆ ಬೈಕ್ ಕಾರುಗಳೆಂದರೆ ಪ್ರೀತಿ. ಅದು ಬಿಟ್ಟು ಯಾವುದೇ ಹುಡುಗಿಯ ಮೇಲೂ ಲವ್ ಇಲ್ಲ ಎಂದಿದ್ದರು. ಆದರೆ ಇದೀಗ ಕಿರುತೆರೆ ನಟಿಯೊಂದಿಗೆ ಉಂಗುರ ಬದಲಾಯಿಸಿಕೊಂಡಿದ್ದಾರೆ. ತಮ್ಮ ಪ್ರೇಯಸಿಯನ್ನು ಅಭಿಮಾನಿಗಳಿಗೆ ಪರಿಚಯಿಸಿ ಶಾಕ್ ಕೊಟ್ಟಿದ್ದು ಅದು ಬೇರೆ ಯಾರೂ ಅಲ್ಲ. ಎಲ್ಲರಿಗೂ ಗೊತ್ತಿರುವ ನಟಿ ಸಿರಿ ರಾಜು ಅವರು.

ಮಾಡೆಲ್ ಕಮ್ ಕಿರುತೆರೆ ನಟಿಯಾಗಿರುವ ಸಿರಿ ರಾಜು ಅವರು ಕೂಡ ಬಣ್ಣದ ಲೋಕದವರೇ. ಹೌದು ಈಗಾಗಲೇ ಕೆಲ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದು ವಿಜಯ್ ರಾಘವೇಂದ್ರ ಅವರೊಂದಿಗೆ ಎಫ್ಐಆರ್ 6ಟು6 ಎಂಬ ಸಿನಿಮಾದಲ್ಲಿ ನಟಿಸಿದ್ದರೆ. ಇನ್ನು ನಾಲ್ಕು ವರ್ಷಗಳ ಹಿಂದೆಯೇ ಇದಂ ಪ್ರೇಮಂ ಜೀವನಂ ಎಂಬ ಸಿನಿಮಾದಲ್ಲೂ ನಟಿಸಿದ್ದರು.

ಇನ್ನು ಕೆಲ ಧಾರಾವಾಹಿ ಹಾಗೂ ವೆಬ್ ಸೀರೀಸ್ ಗಳಲ್ಲಿ ಸಿರಿ ರಾಜು ಅವರು ನಟಿಸಿದ್ದಾರೆ.ಸಾಕಷ್ಟು ಸಮಯದಿಂದ ಸಾಗರ್ ಮತ್ತು ಸಿರಿ ರಾಜು ಒಬ್ಬರನೊಬ್ಬರು ಪ್ರೀತಿಸುತ್ತಿದ್ದು ಇದೀಗ ಸೂಕ್ತ ಸಮಯ ಎಂದೇನಿಸಿ ರೊಮ್ಯಾಂಟಿಕ್ ಶೇರ್ ಮಾಡುವ ಮೂಲಕ ತಾವು ದಾಂಪತ್ಯ ಜೀವನಕ್ಕೆ ಕಾಲಿಡುವ ಸುದ್ದಿಯನ್ನ ಇತ್ತೀಚೆಗಷ್ಟೇ ತಿಳಿಸಿದ್ದರು. ಕುಟುಂಬಸ್ಥರು ಆಪ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಏಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಈ ಸಂಭ್ರಮಕ್ಕೆ ಸತ್ಯ ಧಾರಾವಾಹಿ ತಂಡ ಕೂಡ ಸಾಕ್ಷಿಯಾಗಿದ್ದು ಇನ್ನು ಯರ್ಯಾರು ಬಂದಿದ್ದರು ಎಂದು ತಿಳಿಯಲು ಕೆಳಗಿನ ವಿಡಿಯೋ ನೋಡಿ..