ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಅಶ್ವಿನಿ ಸೀರೆ ಖರೀದಿಸುವಾಗ ಹಿಂದಿನಿಂದ ರೇಗಿಸಿದ ಅಪ್ಪು…ಕ್ಯೂಟ್ ವಿಡಿಯೋ ನೋಡಿ

16,239

ತಮಗೆಲ್ಲರಿಗೂ ಕೂಡ ತಿಳಿದಿರುವ ಹಾಗೆ ನಮ್ಮ ಸೆಲೆಬ್ರಿಟಿಗಳ ಜೀವನ ಬ್ಯೂಸಿಯಸ್ಟ್ ಜೀವನ ಎನ್ನಬಹುದು. ಒಂದು ಕಡೆ ಬಿಡುವಿಲ್ಲದ ಚಿತ್ರೀಕರಣವಾದರೆ ಮತ್ತೊಂದೆಡೆ ಹೊಸ ಮೂವಿಗಳ ಮುಹೂರ್ತ ಸಮಾರಂಭ ಧ್ವನಿ ಸುರುಳಿ ಬಿಡುಗಡೆ ಹಾಗೂ ಚಿತ್ರದ ಟ್ರೈಲರ್ ಬಿಡುಗಡೆ ಹೀಗೆ ಒಂದಲ್ಲ ಒಂದು ಕಾರ್ಯಕ್ರಮಗಳಿಗೆ ಭಾಗವಹಿಸುತ್ತಲೇ ಇರಬೇಕು.

ಹೌದು ಇದರ ಜೊತೆಗೆ ಸಾಕಷ್ಟು ಆಭರಣದ ಅಂಗಡಿ ಸೀರೆ ಅಂಗಡಿ ಮಾಲ್ ಗಳು ಅಂಗಡಿ ಮುಂಗಟ್ಟುಗಳು ಎಲ್ಲದಕ್ಕೂ ಸಹ ವಿಶೇಷ ಅತಿಥಿಯಾಗಿ ಇವರನ್ನು ಕರೆಸಿ ಟೇಪ್ ಕಟ್ ಮಾಡಿಸುವ ಮುಖಾಂತರ ಹೊಸ ಅಂಗಡಿಯನ್ನು ತೆರೆಯುವುದರ ಜೊತೆಗೆ ಸೆಲೆಬ್ರಿಟಿಗಳು ಬ್ರ್ಯಾಂಡ್ ಅಂಬಾಸಿಡರ್ ಆಗಿ ಕೂಡ ಬಿಡುತ್ತಾರೆ. ಹೀಗೆ ವರ್ಷದ ೩೬೫ ದಿನವೂ ಕೂಡ ಒಂದಲ್ಲ ಒಂದು ವಿಚಾಗಳಲ್ಲಿ ಸದಾ ನಿರತರಾಗುವ ಸೆಲೆಬ್ರೆಟಿಗಳಿಗೆ ಕುಟುಂಬದವರಿಗೆ ಸಮಯ ನೀಡುವುದು ತೀರಾ ಕಡಿಮೆಯಾಗುತ್ತಾ ಬರುತ್ತದೆ.

ಪ್ರತಿಯೊಬ್ಬ ಸೆಲೆಬ್ರಿಟಿಗೂ ಸಹ ಜೀವನದಲ್ಲೂ ಇದು ಸರ್ವೇಸಾಮಾನ್ಯವಾಗಿದ್ದು ಯಾವ ಕಾರ್ಯಕ್ರಮವನ್ನೂ ಕೂಡ ಬಿಟ್ಟು ಕೊಡಲಾಗುವುದಿಲ್ಲ ಇತ್ತ ಕುಟುಂಬದವರನ್ನು ಕೂಡ ಬಿಟ್ಟುಕೊಡಳಲಾಗುವುದಿಲ್ಲ. ಎರಡರನ್ನೂ ಕೂಡ ತಕ್ಕಡಿಯಲ್ಲಿ ಹಾಕಿ ಸಮವಾಗಿ ತೂಗುತ್ತಾ ರೀಲ್ ಲೈಫ್ ನಲ್ಲಿ ಮತ್ತು ರಿಯಲ್ ಲೈಫ್ ಎರಡರಲ್ಲೂ ಕೂಡ ಹೀರೋಗಳಾಗುತ್ತಾರೆ.

ಅಂತೆಯೇ ನಮ್ಮ ಕನ್ನಡ ಚಿತ್ರರಂಗದ ಹೆಮ್ಮೆಯ ನಟ ಡಾಕ್ಟರ್ ರಾಜ್ ಕುಮಾರ್ ರವರ ಕಿರಿಯ ಹಾಗೂ ಪ್ರೀತಿಯ ಪುತ್ರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ಒಂದು ದಿನವೂ ಸಹ ಬಿಡುವಿಲ್ಲದಷ್ಟು ಸಿನಿಮಾ ಕೆಲಸದಲ್ಲಿ ಸಕ್ರಿಯರಾಗಿದ್ದರು. ಒಂದೆಡೆ ತಮ್ಮ ಸಿನಿಮಾದ ಚಿತ್ರೀಕರಣ ವಾದರೆ ಮತ್ತೊಂದೆಡೆ ತಾವೇ ನಿರ್ಮಾಣ ಮಾಡಿರುವ ಪಿ ಆರ್ ಕೆ ಸ್ಟುಡಿಯೋಸ್ ನಲ್ಲಿ ಹೊಸಬರ ಚಿತ್ರಗಳಿಗೆ ಬಂಡವಾಳ ಹೂಡುತ್ತಾ ತಮ್ಮ ಚಾನೆಲ್ ನಲ್ಲಿ ಆಡಿಯೋಗಳನ್ನು ಲಾಂಚ್ ಮಾಡುತ್ತಾ ಚಿತ್ರರಂಗಕ್ಕಾಗಿ ಹೊಸದನ್ನೆನಾದರು ಪರಿಚಯ ಮಾಡಲು ಸದಾ ಹೋರಾಡುತ್ತಲೇ ಇದ್ದರು.

ಕನ್ನಡ ಚಿತ್ರರಂಗದಲ್ಲಿ ಪವರ್ ಹೌಸ್ ಆಗಿದ್ದ ಇವರು ಅವರ ಅಭಿಮಾನಿಗಳಿಗೆ ಯೂತ್ ಐಕಾನ್ ಕೂಡ ಆಗದ್ದರು. ತಮ್ಮ ಸರಳ ವ್ಯಕ್ತಿತ್ವ ನಡವಳಿಕೆ ಸೌಮ್ಯತೆಯಿಂದ ರಾಜ್ಯಾದ್ಯಂತ ಹೆಸರು ಮಾಡಿದ್ದ ಈ ನಟ ತಮ್ಮನ್ನು ಕಾಣಬರುವ ಅಭಿಮಾನಿಗಳನ್ನು ಕೂಡ ಅಷ್ಟೇ ಪ್ರೀತಿಯಿಂದ ಮಾತನಾಡಿಸಿ ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ.

ಇನ್ನೂ ಕನ್ನಡ ಚಿತ್ರರಂಗದಲ್ಲಿ ಕೌಟುಂಬಿಕ ಸಿನಿಮಾವನ್ನು ನೀಡುವ ಇಂದಿನ ಕಾಲದ ನಾಯಕ ನಟ ಎಂದರೆ ಅದು ಪುನೀತ್ ರಾಜ್ ಕುಮಾರ್ ಅವರು ಮಾತ್ರ ಆಗಿದ್ದರು. ತನ್ನ ತಂದೆಯಂತೆಯೇ ಎಲ್ಲಾ ವಿಚಾರದಲ್ಲಿಯೂ ಕೂಡ ಸಕಲವಲ್ಲಭನಾಗಿದ್ದ ಇವರು ರಾಜ್ ಅವರ ಹೆಸರನ್ನು ರಾಜ ರೋಷದಿಂದಲೇ ಚಿತ್ರರಂಗದಲ್ಲಿ ಹೆಮ್ಮೆಯಿಂದ ತೂಗಿದ್ದಾರೆ ಎನ್ನಬಹುದು.

ಇನ್ನೂ ಸಮಯ ಸಿಕ್ಕರೆ ಸಾಕು ಪುನೀತ್ ರಾಜ್ ಕುಮಾರ್ ರವರಿಗೆ ಪತ್ನಿ ಅಶ್ವಿನಿ ಹಾಗೂ ಮಕ್ಕಳಾದ ವಂದಿತಾ ದೃತಿ ಜೊತೆ ಸಮಯ ಕಳೆಯುವುದು ಎಂದರೆ ಬಹಳ ಇಷ್ಟವಿತ್ತು. ಸಾಕಷ್ಟು ಬಾರಿ ಮನೆಯಲ್ಲಿಯೇ ಕುಳಿತು ಸಮಯ ಕಳೆತಿದ್ದ ಅಪ್ಪು ಮಕ್ಕಳಿಗೆ ಶಿಸ್ತಿನ ತಂದೆಯಾಗಿ ಪತ್ನಿಗೆ ಪ್ರೀತಿಯ ಪತಿಯಾಗಿ ಸುಖಸಂಸಾರ ನಡೆಸಿದ್ದರು. ಇನ್ನು ರಾಜ್ಯದಲ್ಲಿ ಯಾವುದೇ ಹೊಸ ಅಂಗಡಿ ಮುಂಗಟ್ಟುಗಳು ತೆರೆದರೆ ಅಪ್ಪು ಅವರನ್ನು ಆಹ್ವಾನಿಸುವುದು ಸಾಮಾನ್ಯವಾಗಿತ್ತು.

ಆದರೆ ಈ ಕಾರ್ಯಕ್ರಮಗಳಿಗೆ ಎಂದೂ ಕೂಡ ಅಪ್ಪು ಒಬ್ಬರೇ ಹೋದವರಲ್ಲ. ತಮ್ಮ ಬಿಡುವಿನ ಸಮಯದಲ್ಲಿ ಯಾವುದೇ ರೀತಿಯಾದಂತಹ ಅವಕಾಶ ಸಿಕ್ಕರೆ ಸಾಕು ತಮ್ಮ ಪತ್ನಿಯ ಜೊತೆ ನೇರವಾಗಿ ಹೋಗಿ ಅಂಗಡಿಯ ಟೇಪ್ ಕತ್ತರಿಸುವ ಮುಖಾಂತರ ವ್ಯವಹಾರಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿ ಬರುತ್ತಿದ್ದರು.

ಸದ್ಯ ಇದೀಗ ಅಂತಹದ್ದೇ ಒಂದು ಸಮಾರಂಭದಲ್ಲಿ ಪುನೀತ್ ರಾಜ್ ಕುಮಾರ್ ದಂಪತಿಗಳು ಕಾಣಿಸಿಕೊಂಡಿದ್ದು ವಿಜಯಲಕ್ಷ್ಮಿ ಸಿಲ್ಕ್&ಸ್ಯಾರೀಸ್ ಇನಾಗ್ರೇಶನ್ ಕಾರ್ಯಕ್ರಮಕ್ಕೆ ಆಗಮಿಸಿ ಟೇಪ್ ಕತ್ತರಿಸುವ ಮುಖಾಂತರ ಅಂಗಡಿಯ ಓಪನಿಂಗ್ ಸೆರೆಮನಿಗೆ ಚಾಲ್ತಿ ನೀಡಿದ್ದರು.ಇನ್ನು ಈ ಸಮಾರಂಭದಲ್ಲೂ ಕೂಡ ಪವರ್ ಸ್ಟಾರ್ ಬಹಳ ಸಿಂಪಲ್ ಆಗಿಯೇ ಕಾಣಿಸಿಕೊಂಡಿದ್ದು ಪತ್ನಿ ಅಶ್ವಿನಿ ಕೂಡ ಅಪ್ಪು ಗೆ ತಕ್ಕಂತೆಯೇ ಸಹಜಸುಂದರವಾಗಿ ಕಾಣಿಸಿಕೊಂಡಿದ್ದರು. ಈ ತುಣುಕನ್ನು ಕೆಳಗಿನ ವಿಡಿಯೋದಲ್ಲಿ ನೋಡಬಹುದು.