ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಅಪ್ಪು ಮದುವೆಯಲ್ಲಿ ಅಶ್ವಿನಿಯನ್ನು ಮಾತಾಡಿಸುತ್ತಿರುವ ರಾಜಣ್ಣ …ಕ್ಯೂಟ್ ವಿಡಿಯೋ

6,395

Power star puneethrajkumar marriage photos: ನಮ್ಮ ಕನ್ನಡ ಚಿತ್ರರಂಗದಲ್ಲ ನೂರಾರು ಬಿರುದುಗಳನ್ನು ಪಡೆದಿರುವ ಡಾ. ರಾಜ್​​​​​​​​​ಕುಮಾರ್ ರವರು ಇಂದಿಗೂ ಕೂಡ ಕೋಟ್ಯಂತರ ಅಭಿಮಾನಿಗಳ ಹಾಗೂ ಕನ್ನಡಿಗರ ಹೃದಯ ಸಿಂಹಾಸನದಲ್ಲಿ ನೆಲೆಸಿದ್ದು
ಆಡು ಮುಟ್ಟದ ಸೊಪ್ಪು ಇಲ್ಲ ಅಣ್ಣಾವ್ರು ಮಾಡದ ಪಾತ್ರಗಳಿಲ್ಲ ಎಂಬ ಮಾತು ಎಷ್ಟು ಅರ್ಥಪೂರ್ಣವಾಗಿದೆ ಮತ್ತು ನಿಜಾ ಆಗಿದೆ ಎಂದರೆ ಇದಕ್ಕೆ ಸಾಕ್ಷಿ ಚಿತ್ರರಂಗಕ್ಕೆ ಅಣ್ಣಾವ್ರ ನೀಡಿರುವ ಕೊಡುಗೆ ಮತ್ತು ಅವರ ಕುಟುಂಬದಿಂದ ಈಗಲೂ ಕೂಡ ನಡೆಯುತ್ತಿರುವ ಸೇವೆಯೆ ಸಾಕ್ಷಿ ಎನ್ನಬಹುದು.

ಡಾ. ರಾಜ್​​​​​​​​​​​​​​​​​​​ಕುಮಾರ್ ಎಂದಾಕ್ಷಣ ಅವರ ಸರಳ ವ್ಯಕ್ತಿತ್ವ ಮತ್ತು ಅವರು ಅಭಿನಯಿಸಿರುವ ಚಿತ್ರಗಳೇ ಕಣ್ಮುಂದೆ ಬರುತ್ತವೆ. ನಟನಾಗಿ ಗಾಯಕನಾಗಿ ಕನ್ನಡ ಪರ ಹೋರಾಟಗಾರನಾಗಿ ಗುರುತಿಸಿಕೊಂಡಿರುವ ಈ ನಟನ ಅಭಿನಯಕ್ಕೆ ಸರಿ ಸಾಟಿ ಯಾರು ಇಲ್ಲ ಎಂದೇ ಹೇಳಬಹುದು. ಅಣ್ಣಾವ್ರ ನಂತರ ಅವರ ಕುಟುಂಬ ಕನ್ನಡ ಚಿತ್ರರಂಗದಲ್ಲಿ ಆಲದ ಮರದಂತೆ ವಿಶಾಲವಾಗಿ ಹಬ್ಬಿದ್ದು ಡಾ. ರಾಜ್​​ಕುಮಾರ್ ರವರ ಕುಟುಂಬವನ್ನು ಅಭಿಮಾನಿಗಳು ದೊಡ್ಮನೆ ಎಂದು ಕರೆಯಲು ಕಾರಣ ಡಾ. ರಾಜ್​ಕುಮಾರ್ ಅವರ ವಂಶವೃಕ್ಷ ಎನ್ನಬಹುದು.

ರಾಜ್ ಕುಮಾರ್ ಅವರಿಗೆ ಬಹಳ ಪ್ರೀತಿಯ ಪುತ್ರ ಎಂದರೆ ಮಾಸ್ಟರ್ ಲೋಹಿತ್ ಅಲಿಯಾಸ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು. ಹೌದು ಬಾಲ್ಯದಿಂದಲೂ ಕೂಡ ತನ್ನ ತಂದೆಯ ಜೊತೆ ಚಿತ್ರರಂಗದಲ್ಲಿ ಸಕ್ರಿಯರಾದ ಈ ನಟ ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟರಾಗಿದ್ದರು. ಇನ್ನು ಅಪ್ಪು ಅವರ ವಿವಾಹವು ಅಶ್ವಿನಿ ಅವರ ಜೊತೆ ಡಿಸೆಂಬರ್ 1 1999ರಲ್ಲಿ ನಡೆದಿದ್ದು ಈ ಅದ್ಭುತ ಕ್ಷಣವನ್ನ ಇಂದಿನ ಅದೇಷ್ಟೋ ಅಭಿಮಾನಿಗಳು ನೋಡಿರಲು ಸಾಧ್ಯವಿಲ್ಲ.

ಹಾಗೇನಾದರು ಒಂದು ವೇಳೆ ಪುನೀತ್ ರವರ ವಿವಾಹವು ಈಗಿನ ಕಾಲದಲ್ಲಿ ನಡೆದಿದ್ದರೇ ಅಭಿಮಾನಿಗಳ ಸಂಭ್ರಮವನ್ನ ಊಹಿಸುವುದು ಸಾಧ್ಯವಾಗುತ್ತಿತ್ತೆ?
ಅಂದ್ಹಾಗೆ ಪುನೀತ್ ರಾಜ್ ಕುಮಾರ್ ಅವರ ವಿವಾಹದಲ್ಲಿ ವರನಟ ಡಾ.ರಾಜ್ ಕುಮಾರ್ ಅವರ ಸಂಭ್ರಮವನ್ನ ನೋಡಲು ಸಾಧ್ಯವಾಗದೇ ಇರುವವರು ಅಂದಿನ ಫೋಟೋವನ್ನ ಇದೀಗ ನೋಡಿದರೇ ಸಾಕು. ಅವರ ಖುಷಿ ಸಂತೋಷದ ಪರಿ ಹೇಗಿತ್ತು ಎಂಬುದು ಗೊತ್ತಾಗುತ್ತಿದೆ.

ಅಣ್ಣಾವ್ರು ಅಪ್ಪು ಮದುವೆ ದಿನ ನವ ಜೋಡಿಗೆ ಆಶೀರ್ವಾದ ಮಾಡುತ್ತಿರುವ ಕ್ಷಣ ನೋಡಲು ಖುಷಿ ನೀಡುತ್ತದೆ. ಸುಮಾರು 21 ವರುಷದ ಹಿಂದೆ ನಡೆದಿದ್ದ ಮದುವೆಯ ಕ್ಷಣಗಳನ್ನ ಈ ಫೋಟೋದಲ್ಲಿ ನೋಡಲು ಅವಕಾಶ ಸಿಕ್ಕಿದ್ದು ಕೆಳಗಿನ ವಿಡಿಯೋದಲ್ಲಿ ಅಶ್ವಿನಿ ಹಾಗೂ ಅಪ್ಪು ಅವರ ವಿವಾಹದ ಸುಮಧುರ ಕ್ಷಣಗಳನ್ನು ನೋಡಬಹುದು.

ದಂಪತಿಗಳು ತಮ್ಮ ವಿವಾಹವನ್ನು ಚಿಕ್ಕಮಗಳೂರಿನಲ್ಲಿ ನಡೆಸಿಕೊಂಡಿದ್ದು ಕಾಮನ್ ಫ್ರೆಂಡ್ ಮೂಲಕ ಪರಿಚಯವಾದ ಈ ಜೋಡಿ ನಂತರ ಹಿರಿಯ ಸಮ್ಮುಖದಲ್ಲಿ ಮದುವೆಯಾದರು.
ಇನ್ನು ಪುನೀತ್ ಮತ್ತು ಅಶ್ವಿನಿ ದಂಪತಿಗೆ ದೃತಿ ಮತ್ತು ವಂದಿತಾ ಎಂಬ ಇಬ್ಬರು ಹೆಣ್ಣ ಮಕ್ಕಳಿದ್ದು ದೃತಿ ನ್ಯೋಯಾರ್ಕ್ ನಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ.

ಸದ್ಯ ಪುನೀತ್ ರಾಜ್‌ಕುಮಾರ್ ಅವರ ಕನಸಿನ ಪ್ರಾಜೆಕ್ಟ್ ಗಂಧದ ಗುಡಿ ಬಿಡುಗಡೆ ಆಗಿ ರಾಜ್ಯದಾದ್ಯಂತ ಅದ್ಭುತ ಪ್ರದರ್ಶನ ಕಂಡಿದೆ. ರಾಜ್ಯ ಸರ್ಕಾರ ತೆರಿಗೆ ವಿನಾಯಿತಿ ನೀಡುವ ಜೊತೆಗೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಹ ಟಿಕೆಟ್ ದರಗಳನ್ನು ಕಡಿಮೆ ಮಾಡಿದ ಕಾರಣ ರಾಜ್ಯದಾದ್ಯಂತ ಸಾವಿರಾರು ಮಂದಿ ವಿದ್ಯಾರ್ಥಿಗಳು ಸಿನಿಮಾ ನೋಡಿದ್ದಾರೆ. ಇನ್ನೂ ನೋಡುತ್ತಿದ್ದಾರೆ ಸಹ. ರಾಜ್ಯದ ಪ್ರಕೃತಿ ಸೌಂದರ್ಯ ಕಲೆ ಸಂಸ್ಕೃತಿಯ ಪರಿಚಯ ಮಾಡಿಸುವ ಜೊತೆಗೆ ನಿಸರ್ಗದ ಮಹತ್ವ ಅದನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇನ್ನಿತರೆ ವಿಷಯಗಳನ್ನು ಅಬ್ಬರವಿಲ್ಲದೆ ಸರಳವಾಗಿ ದಾಟಿಸುವ ಡಾಕ್ಯುಡ್ರಾಮಾ ಗಂಧದ ಗುಡಿ ಆಗಿದೆ.