ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಅಭಿಷೇಕ್ ಅಂಬರೀಷ್ ಗೆ ಗದರಿಸಿದ ದರ್ಶನ್…ಆಗಿದ್ದೆ ಬೇರೆ ನೋಡಿ ವಿಡಿಯೋ

12,791

ನ್ನಡ ಚಿತ್ರರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ಎಂದೇ ಬಿರುದಾಂಕಿತರಾಗಿರುವ ದರ್ಶನ್ ಕನ್ನಡ ಚಿತ್ರರಂಗದ ಪ್ರಮುಖ ನಟ ಮತ್ತು ನಿರ್ಮಾಪಕ. ಬಾಕ್ಸ್‌ಆಫೀಸ್ ಸುಲ್ತಾನ,ದಾಸ ಎಂದು ಅಭಿಮಾನಿಗಳಿಂದ ಪ್ರೀತಿಯಿಂದ ಕರೆಯಿಸಿಕೊಳ್ಳುವ ದರ್ಶನ್ ಕನ್ನಡ ಚಿತ್ರರಂಗದ ಹೆಸರಾಂತ ಪ್ರತಿಭೆ ತೂಗುದೀಪ ಶ್ರೀನಿವಾಸ್‌ರ ಹಿರಿಯ ಪುತ್ರ. ಸುಮಾರು ಎರಡು ದಶಕಗಳ ತಮ್ಮ ಸಿನಿಜೀವನದಲ್ಲಿ ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಕನ್ನಡ ಸಿನಿಪ್ರಿಯರ ನೆಚ್ಚಿನ ನಟನಾಗಿ ಗುರುತಿಸಿಕೊಂಡಿದ್ದಾರೆ.

 

2002 ರಲ್ಲಿ ಪಿ.ಎನ್ ಸತ್ಯ ನಿರ್ದೇಶನದ  ಮೆಜೆಸ್ಟಿಕ್ ಚಿತ್ರದ ಮೂಲಕ ದರ್ಶನ್ ನಾಯಕನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಈ ಚಿತ್ರ ಅದ್ಭುತ ಪ್ರತಿಕ್ರಿಯೆ ಪಡೆದು ಕರ್ನಾಟಕದ ಹಲವು ಸಿನಿಮಾ ಮಂದಿರಗಳಲ್ಲಿ ಶತದಿನ ಪೂರೈಸಿತು, 2003 ರಲ್ಲಿ ತೆರೆಕಂಡ ಪ್ರೇಮ್ ನಿರ್ದೇಶನದ ಕರಿಯ ಚಿತ್ರ ಕೂಡ ಉತ್ತಮ ಪ್ರತಿಕ್ರಿಯೆ ಪಡೆದು ಕರ್ನಾಟಕದಲ್ಲಿ ಸುಮಾರು 800 ದಿನಗಳಿಗೂ ಹೆಚ್ಚು ದಿನ ಪ್ರದರ್ಶನ ಕಂಡು ದಾಖಲೆ ಬರೆಯಿತು.

 

ನಂತರ ಬಂದ ಕೆಲ ಚಿತ್ರಗಳು ಯಶಸ್ವಿಯಾಗಲಿಲ್ಲ. ಆ ಸಮಯದಲ್ಲಿ ತೆರೆಗೆ ಬಂದ ಕಲಾಸಿಪಾಳ್ಯ 250 ಕ್ಕೂ ಹೆಚ್ಚು ದಿನಗಳು ಪ್ರದರ್ಶನ ಕಂಡಿತು. ಇಲ್ಲಿಂದ ದರ್ಶನ್ -ರಕ್ಷಿತಾ ಜೋಡಿ ಕನ್ನಡದಲ್ಲಿ ಹಲವು ಯಶಸ್ವಿ ಚಿತ್ರಗಳನ್ನು ನೀಡಿತು.

 

2007 ರಲ್ಲಿ ಉಪೇಂದರ ಜೊತೆ ಅನಾಥರು ಚಿತ್ರದಲ್ಲಿ ನಟಿಸಿದರು. ಅದೇ ವರ್ಷ ಈ ಬಂಧನ  ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಪಾತ್ರದಲ್ಲಿ ನಟಿಸಿದರು. ಕುಚಿಕು ಗೆಳಯರಾದ ಅಂಬಿ-ವಿಷ್ಣುರ ಪುತ್ರನ ಪಾತ್ರದಲ್ಲಿ ನಟಿಸಿದ ಕನ್ನಡದ ಏಕೈಕ ನಾಯಕನಟ ದರ್ಶನ ಎನ್ನಬಹುದು. ಇದೀಗ ಡಿಬಾಸ್ ಅಂಬಿ ಮಗ ಅಂಬರೀಷ್ ಗೆ ಗುರಾಯಿಸಿದ ಕ್ಷಣ ನೋಡಿ.