ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಅಪ್ಪುನ ಮಿಸ್ ಮಾಡಿಕೊಳ್ಳುತ್ತಿದ್ದೀರಾ ಎಂದಿದ್ದಕ್ಕೆ ಕಣ್ಣೀರಿಟ್ಟ ಅಶ್ವಿನಿ…ನೋಡಿ ವಿಡಿಯೋ

1,830
Ashwini Puneeth Crying Heart Breaking Moment: ಕಳೆದ ತಿಂಗಳು ಬೆಂಗಳೂರಿನ ಅರಮನೆ ಮೈದಾನದಲ್ಲಿ ಪುನೀತ​ ಪರ್ವ ಕಾರ್ಯಕ್ರಮ ನಡೆದಿತ್ತು. ಕಾರ್ಯಕ್ರಮದಲ್ಲಿ ತಾರೆಯರ ಸಮಾಗಮ ಆಗಿದ್ದು ಪುನೀತ ಪರ್ವ  ಕಾರ್ಯಕ್ರಮಕ್ಕಾಗಿ ಎಲ್ಲ ಭಾಷೆಯ ಚಿತ್ರರಂಗದ  ಗಣ್ಯರು ಆಗಮಿಸಿದ್ದರು. ಬೃಹತ್​ ವೇದಿಕೆಯಲ್ಲಿ ಮನರಂಜನಾ ಕಾರ್ಯಕ್ರಮಗಳ ಜೊತೆಗೆ ಗಂಧದ ಗುಡಿ ಪ್ರೀ-ರಿಲೀಸ್​ ಇವೆಂಟ್​ ಕೂಡ ನಡೆದುತ್ತು.
ಈ ರಾಜಕುಮಾರ ಚಿತ್ರದ ಹಾಡನ್ನು ಗಾಯಕ ವಿಜಯ್​ ಪ್ರಕಾಶ್​ ವೇದಿಕೆ ಮೇಲೆ ಹಾಡಿದ್ದು ಈ ವೇಳೆ ರಾಜ್ಯ ಫ್ಯಾಮಿಲಿ ಸದಸ್ಯರೂ ನೀನೇ ರಾಜಕುಮಾರ ಹಾಡಿಗೆ ಧ್ವನಿಯಾಗಿದ್ದರು.  ಮನೆ ಮಂದಿಯ ಹಾಡು ಕೇಳಿ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್​ ಕುಮಾರ್ ರವರು ತುಂಬಾ ಭಾವುಕರಾಗಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಎಲ್ಲರ ಹೃದಯ ಕಲಕುತ್ತಿದೆ.
ಇನ್ನು ಶಿವಕುಮಾರ್​ ರಾಘವೇಂದ್ರ ರಾಜ್​ ಕುಮಾರ್​ ಗೀತಾ ಶಿವಕುಮಾರ್​ ಅಶ್ವಿನಿ ಪುನೀತ್ ರಾಜ್​ಕುಮಾರ್​ ವಿನಯ್ ರಾಜ್​ ಕುಮಾರ್ ಸೇರಿದಂತೆ ರಾಜ್​ ಕುಟುಂಬದ ಅನೇಕ ಸದಸ್ಯರು ವೇದಿಕೆ ಮೇಲೆ ಬಂದು ನೀನೇ ರಾಜಕುಮಾರ ಎಂದು ಹಾಡಿದ್ದು ಈ ಮೂಲಕ ಮನೆ ಮಂದಿಯೆಲ್ಲಾ ಅಪ್ಪುವಿಗೆ ವಿಶೇಷವಾಗಿ ನಮನ ಸಲ್ಲಿಸಿದ್ದಾರೆ.  ಮನೆ ಮಂದಿಯ ಹಾಡು ಕೇಳಿ ಅಪ್ಪು ನೆನೆದು ಪುನೀತ್ ಪತ್ನಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಕಣ್ಣೀರು ಹಾಕಿದ್ದಾರೆ.
ಎಲ್ಲರೂ ಹಾಡು ಹೇಳಿವಾಗ ಕೈ ಮುಗಿದು ನಿಂತಿದ್ದ ಅಶ್ವಿನಿ ಪುನೀತ್ ರಾಜ್​ಕುಮಾರ್ ಬಿಕ್ಕಿ ಬಿಕ್ಕಿ ಅತ್ತಿದ್ದು  ವಿಜಯ್​ ಪ್ರಕಾಶ್ ವೇದಿಕೆ ಮೇಲೆ ನೀನೇ ರಾಜಕುಮಾರ ಎಂದು ಹಾಡು ಹೇಳಿದರು. ಈ ವೇಳೆ ನೆರೆದಿದ್ದ ಗಣ್ಯರು ಹಾಗೂ ಅಭಿಮಾನಿಗಳು ಮೊಬೈಲ್ ಟಾರ್ಚ್​ ಆನ್​ ಮಾಡಿ ಗೌರವ ಸಲ್ಲಿಸಿದರು.ಇನ್ನು ಪುನೀತ್​ ರಾಜ್​ಕುಮಾರ್​ ಅವರಿಗೆ ಎಲ್ಲರೂ ಸೇರಿ ವಿಶೇಷ ರೀತಿಯಲ್ಲಿ ನಮನ ಸಲ್ಲಿಸಿದ್ದು ಡಾ. ರಾಜ್​ಕುಮಾರ್​ ಕುಟುಂಬದವರು ತುಂಬ ಕಾಳಜಿ ವಹಿಸಿ ಈ ಕಾರ್ಯಕ್ರಮ ಮಾಡಿದ್ದಾರೆ ಅಶ್ವಿನಿ ಪುನೀತ್​ ರಾಜ್​ಕುಮಾರ್  ಶಿವರಾಜ್​ಕುಮಾರ್​ ರಾಘವೇಂದ್ರ ರಾಜ್​ ಕುಮಾರ್​ ಸೇರಿದಂತೆ ರಾಜ್​ ಕುಟುಂಬಸ್ಥರು ಭಾಗಿ ಆಗಿದ್ದರು.
ಇನ್ನು ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಇನ್ಫೋಸಿಸ್ ಸುಧಾ ಮೂರ್ತಿ ಅವರು ಪುನೀತ್​ ಬಗ್ಗೆ ಗುಣಗಾನ ಮಾಡಿದ್ದು ಒಮ್ಮೆ ವಿಮಾನ ನಿಲ್ದಾಣದಲ್ಲಿ ಪುನೀತ್​ ಸಿಕ್ಕಾಗ ಅಲ್ಲೇ ಅವ್ರು ನನ್ನ ಆಶೀರ್ವಾದ ಪಡೆದರು. ಈ ವೇಳೆ ನಾನು ಇಲ್ಲೆಲ್ಲಾ ಬೇಡ ಎಂದೆ. ಅದಕ್ಕೆ ಅವ್ರು ಎಲ್ಲಿದ್ರೂ ದೊಡ್ಡವರು ದೊಡ್ಡವರೇ ಎಂದ್ರು.  ಅವರ ಸರಳತೆಯನ್ನು ಮೆಚ್ಚಲೇಬೇಕು. ನಾನು ಅವ್ರನ್ನು ಲೋಹಿತ್ ಎಂದೇ ಕರೆಯುತ್ತಿದ್ದೆ. ಅವ್ರು ಲೋಹಿತ್​ ಎಂದೇ ನನಗೆ ಪರಿಚಯವಾಗಿದ್ದವರು ಎಂದು ಸುಧಾಮೂರ್ತಿ ಹೇಳಿದರು.