ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಮನೆ ಆಸ್ತಿ ಮಾರಿದ ರವಿಚಂದ್ರನ್ ಗೆ ಸುದೀಪ್ ಮಾಡಿದ ಸಹಾಯ ಏನು ಗೊತ್ತಾ`

60,784
ಪ್ರೇಮಲೋಕ ರಣಧೀರ ಸಿನಿಮಾಗಳ ಬಗ್ಗೆ ಹಾಕಿದಾಗ ನಮ್ಮನ್ನು ಎಲ್ಲೋ ಕರೆದುಕೊಂಡು ಹೋಗುತ್ತವೆ ಹಿಂದಕ್ಕೆ ಕರೆದುಕೊಂಡು ಹೋಗುತ್ತವೆ. ಹೌದು ಇತ್ತೀಚೆಗೆ ನನ್ನ ಸಿನಿಮಾಗಳನ್ನು ಜನರು ನೋಡುತ್ತಿಲ್ಲವೋ ಅಥವಾ ಇಷ್ಟಪಡುತ್ತಿಲ್ಲವೋ ಎಂದಾದಾಗ ನಾನು ಬೇರೆಯವರ ಜೊತೆ ಸ್ಪರ್ಧೆಯಲ್ಲಿಲ್ಲ ಎಂದು ಅನಿಸೋದಿಲ್ಲ.  ನನ್ನ ಜೊತೆಗೆ ನಾನೇ ಕಾಂಪಿಟ್ ಮಾಡೋಕೆ ಆಗ್ತಿಲ್ಲ. ಇದಕ್ಕಿಂತ ಇನ್ನೇನೋ ಮಾಡೋಣ ಎನ್ನುವ ಪ್ರಶ್ನೆ ಬರುತ್ತದೆ ನಾನು 30 ವರ್ಷದ ಹಿಂದೆಯೇ ಇದನ್ನೆಲ್ಲ ಮಾಡಿ ಬಿಟ್ಟಿದ್ದೇನೆ. ಈಗ ನಾನು ಏನೇ ಮಾಡಿದರೂ ಚಿಕ್ಕದಾಗಿ ಕಾಣುತ್ತಿದೆ.
20 ವರ್ಷದಿಂದ ನನ್ನ ಮನಸ್ಸಿಗೆ ಬಂದದ್ದೇ ನಾನು ಮಾಡಿದ್ದು ಈ ಮನಸ್ಸಿಂದ ಮಾಡಿರುವುದು ಹೋಗ್ತ ಹೋಗ್ತ ಪಾತ್ರವಾಗಿ ನಮ್ಮೊಳಗೆ ಸೇರಿಕೊಳ್ಳತ್ತೆ. ಕಳಕಳಿಯಿಂದ ಲವಲವಿಕೆಯಿಂದ ಸಿನಿಮಾ ಮಾಡುವ ವಿಧ ಇರತ್ತದೆ. ಲವಲವಿಕೆಯಿಂದ ಸಿನಿಮಾ ಮಾಡುತ್ತಿದ್ದವನು ನಾನು. ಕಟೌಟ್‌ನಲ್ಲಿ ಹಾರ ಬಿದ್ದರೆ ಇಷ್ಟ ಆಗಲ್ಲ ಥಿಯೇಟರ್‌ನಲ್ಲಿ ಜನ ಇಲ್ಲ ಅಂದರೆ ಕಪಾಳಕ್ಕೆ ಹೊಡೆದಷ್ಟು ಬೇಜಾರಾಗುತ್ತದೆ ಎಂದು ಭಾವುಕರಾಗಿ ರಿಯಾಲಿಟಿ ಶೋ ಒಂದರಲ್ಲಿ  ಮಾತನಾಡಿದ್ದರು  ಕ್ರೇಜಿಸ್ಟಾರ್ ವಿ ರವಿಚಂದ್ರನ್. ಅಲ್ಲದೆ ತಾವು ಮನೆಯನ್ನು ಕಳೆದುಕೊಂಡಿರುವ ವಿಚಾರದ ಬಗ್ಗೆಯೂ ಕೂಡ ಮಾತನಾಡಿ ಬಹಳ ಭಾವುಕರಾಗಿದ್ದರು
ನಾನು ಈ ವೇದಿಕೆಗೆ ಬಂದಿರೋದು ನನ್ನನ್ನು ಬದಲಾಯಿಸಿಕೊಳ್ಳೋಕೆ. ಹೌದು ನಾನು ಇನ್ನು ಏಕಾಂಗಿ ಪಾತ್ರ ಮಾಡೋದಿಲ್ಲ ಒಬ್ಬರೇ ಖುಷಿಯಾಗಿರಿ ಎನ್ನುತ್ತಿದ್ದೆ ಈಗ ಎಲ್ಲರೂ ಖುಷಿಯಾಗಿರೋಣ ಅಂತ ಹೇಳುವೆ. ಒಂದು ತಿಂಗಳ ಹಿಂದೆ ನಾನು ಮನೆ ಖಾಲಿ ಮಾಡಿದಾಗ ದುಡ್ಡು ಕಳೆದುಕೊಂಡ ಮನೆ ಖಾಲಿ ಮಾಡಿದ ಅಂತ ಕೆಲವರು ಹೇಳಿದರು. ನಾನು ಈಗ ದುಡ್ಡು ಕಳೆದುಕೊಂಡಿಲ್ಲ 30 ವರ್ಷದಿಂದ ನಿಮಗೋಸ್ಕರ ನಿಮ್ಮನ್ನು ಮೆಚ್ಚಿಸಲು ದುಡ್ಡು ಕಳೆದುಕೊಂಡೆ. ಇಂದು ಏನೇ ಆದರೂ ರವಿಚಂದ್ರನ್ ರವಿಚಂದ್ರನ್ ಅವರನ್ನು ಗೆಲ್ಲೋಕೆ ಆಗ್ತಿಲ್ಲ. ನಾನು ಯಾರಿಗೂ ಕಾಂಪಿಟೇಟರ್ ಅಲ್ಲ ನನ್ನನ್ನು ನಾನು ಗೆಲ್ಲಬೇಕು. ಎಲ್ಲರೂ ಮೆಚ್ಚುವಂತ ಸಿನಿಮಾವನ್ನು ನಾನು ಮಾಡುತ್ತೇನೆ ಎನ್ನುವ ನಂಬಿಕೆ ನಂಗಿದೆ.
ದುಡ್ಡಿಗಾಗಿ ನಾನು ದುಡಿಯಲಿಲ್ಲ. ನಾನು ಇಂದು ಸಂಪಾದನೆ ಮಾಡುತ್ತಿರುವುದು ಯಾಕೆ ಇಲ್ಲಿಗೆ ಬಂದು ಕೂರುತ್ತೀನಿ ಅಂದರೆ ಹಣ ಬೇಕು ನಾನು ಐಷಾರಾಮಿಯಾಗಿ ಬದುಕಬೇಕು ಅಂತ ಸಂಪಾದನೆ ಮಾಡುತ್ತಿಲ್ಲ ಬದಲಿಗೆ ಅದ್ದೂರಿಯಾಗಿ ಸಿನಿಮಾ ಮಾಡಲು ದುಡಿಯುತ್ತಿದ್ದೇನೆ ಎಂದು ಬಹಳ ಎಮೋಷನಲ್ ಆಗಿ ಮಾತನಾಡಿದ್ದಾರೆ.ನನ್ನ ಜೀವನದಲ್ಲಿ ಭಯ ಅನ್ನೋದು ಇರಲಿಲ್ಲ. ಆದರೆ ನನಗೆ ಮಕ್ಕಳು ಹುಟ್ಟಿದಾಗ ಅವರಿಗೆ ಏನು ಎಂದು ಪ್ರಶ್ನೆಯಾಯ್ತು. ನಾವು ಹೇಗೋ ಬದುಕುಬಿಡ್ತೀವಿ ಮಕ್ಕಳಿಗೋಸ್ಕರ ಏನಾದರೂ ಮಾಡಬೇಕಲ್ಲವಾ ಎಂದು ಅನಿಸುತ್ತದೆ.
ಕಂಠೀರವ ಪಕ್ಕ ಒಂದು ಎಕರೆಗೆ ಆಗ 10000 ರೂಪಾಯಿ. ನಾನು 10000 ಸಾವಿರ ಎಕರೆ ಖರೀದಿ ಮಾಡಿದ್ದರೆ? ಆ ಆಸ್ತಿಗೂ ನಿಮಗೂ ಏನು ಸಂಬಂಧ? ಅದನ್ನು ನೋಡಿ ನೀವು ನನ್ನನ್ನು ಪ್ರೀತಿಸಿದರೆ ಆ ಪ್ರೀತಿ ಬೇಡ ನಂಗೆ ಜೀವನವೂ ಬೇಡ ನಂಗೆ. ನನ್ನ ಮುಖ ನೋಡಿ ಪ್ರೀತಿಸಿದರೆ ಜೀವನ ಪೂರ್ತಿ ನಿಮ್ಮ ಕಾಲಡಿ ಬಿದ್ದಿರ್ತೀನಿ.ಎಂದು ರವಿಚಂದ್ರನ್ ರವರು ಕಿರುತೆರೆಯ ರಿಯಾಲಿಟಿ ಶೋವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದರು.ಸದ್ಯ ಈ ಎಲ್ಲ ಮಾತುಗಳನ್ನು ಕೇಳಿಸಿಕೊಂಡ ಕಿಚ್ಚ ಸುದೀಪ್ ರವರ ಮನಸ್ಸಿಗೆ ಬಹಳ ನೋವಾಗಿದೆಯಂತೆ.
ರವಿ ಸರ್ ಅವರು ನಮ್ಮ ಕನ್ನಡ ಚಿತ್ರರಂಗದ ಕನಸುಗಾರ. ಸಿನಿಮಾ ಮಾಡುವ ಪ್ರತಿಯೊಬ್ಬರಿಗೂ ಕೂಡ ಸ್ಫೂರ್ತಿಯಾಗಿದ್ದಾರೆ ರವಿ ಸರ್.  ಅವರ ಕಷ್ಟ ನಮ್ಮೆಲ್ಲರ ಕಷ್ಟವಿದ್ದಂತೆ. ಕನ್ನಡ ಚಿತ್ರರಂಗ ಸೇರಿದಂತೆ ನಾವೆಲ್ಲರೂ ಕೂಡ ಅವರ ಜೊತೆ ಇರುತ್ತೇವೆ ಎಂದು ಹೇಳಿದ್ದಾರೆ ಕಿಚ್ಚ ಸುದೀಪ್. ಇನ್ನು ರವಿಚಂದ್ರನ್ ರವರು ಕೂಡ ಸುದೀಪ್ ಅವರನ್ನು ಹಿರಿಯ ಮಗ ಎಂದೇ ಕರೆಯುತ್ತಿದ್ದು ಸದ್ಯ ಸುದೀಪ್ ರವರ ಮಾತುಗಳನ್ನು ಕೇಳಿದ ನೆಟ್ಟಿಗರು ಮೆಚ್ಚುಗೆಯನ್ನ ಸೂಚಿಸುತ್ತಿದ್ದಾರೆ.