ಸಾಮಾನ್ಯವಾಗಿ ಪಕ್ಷಿಗಳನ್ನು ನೋಡುವುದೇ ಕಣ್ಣುಗಳಿಗೆ ಹಬ್ಬ ಕಿವಿಗೆ ಇಂಪು ಮನಸ್ಸಿಗೆ ಆನಂದ. ಹೌದು ಹಕ್ಕಿಗಳ ಕಲರವಕ್ಕೆ ಎಂಥಾ ಮನಸ್ಸುಗಳು ಸಹ ಮುದಗೊಳ್ಳುತ್ತವೆ. ಆದರೆ ಇತ್ತೀಚೆಗೆ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಮಾನವನ ಅನೇಕ ಚಟುವಟಿಕೆಗಳಿಂದ ಪಕ್ಷಿಗಳು ಕಾಣಸಿಗುತ್ತಿಲ್ಲ. ಪಕ್ಷಿಗಳನ್ನು ನೋಡುವುದಕ್ಕೆ ಅರಣ್ಯಕ್ಕೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದ್ದು ಅನೇಕರು ತಮ್ಮ ಮನೆಯಲ್ಲಿ ಪಕ್ಷಿಗಳ ಕಲರವ ಇರಲಿ ಅವುಗಳ ಚಿಲಿಪಿಲಿ ನಿನಾದ ಕಿವಿಗೆ ಕೇಳುತ್ತಿರಲಿ ಅಂತ ಮನೆಯಲ್ಲಿ ಸಾಕುತ್ತಿದ್ದಾರೆ. ಆದರೆ ಈ ರೀತಿ ಮನೆಯಲ್ಲಿ ಪಕ್ಷಿಗಳನ್ನ ಸಾಕಿದವರಿಗೆ ಇದೀಗ ಶಾಕ್ ಎದುರಾಗಿದೆ.
ಹೌರು ವಿವಿಧ ತಳಿಯ ಪಕ್ಷಿಗಳು ಆಮೆಗಳನ್ನು ನೋಡಿದಾಗ ಅನೇಕರಿಗೆ ಮನೆಯಲ್ಲಿ ನಾವು ಕೂಡಾ ಸಾಕಬೇಕು ಎಂಬ ಆಸೆ ಬರುತ್ತದೆ. ಈ ಆಸೆಯಿಂದ ಹಲವರು ತಮ್ಮ ಮನೆಗಳಲ್ಲಿ ಪಂಜರಗಳನ್ನಿಟ್ಟು ಪಕ್ಷಿಗಳನ್ನು ಸಾಕುತ್ತಾರೆ. ಆದರೆ ಹೀಗೆ ಮಾಡುವಂತಿಲ್ಲ. ಅರಣ್ಯ ಇಲಾಖೆಯ ನಿಯಮದ ಪ್ರಕಾರವಾಗಿ ಪಕ್ಷಿಗಳನ್ನು ಮನೆಯಲ್ಲಿ ಅನಧಿಕೃತವಾಗಿ ಸಾಕಲು ಅವಕಾಶವಿಲ್ಲ. ಇತ್ತೀಚೆಗಷ್ಟೇ ಕರ್ನಾಟಕದ ಕಲಬುರಗಿ ಅರಣ್ಯ ಇಲಾಖೆ ಸಿಬ್ಬಂದಿ ಮನೆ ಅಂಗಡಿಗಳ ಮೇಲೆ ದಾಳಿ ನಡೆಸಿ ಪಕ್ಷಿ ಆಮೆಗಳನ್ನ ವಶಕ್ಕೆ ಪಡೆದಿದ್ದರು. ಹೌದು ಕಲಬುರಗಿಯ ಪ್ರಾಣಿ ಕಲ್ಯಾಣಿ ಮಂಡಳಿಯವರು ನೀಡಿದ್ದ ದೂರಿನ ಮೇಲೆ ಅನೇಕ ಕಡೆ ದಾಳಿ ಮಾಡಿದ್ದ ಅರಣ್ಯ ಇಲಾಕೆ ಸಿಬ್ಬಂದಿ ವಿವಿಧ ಬಗೆಯ ಪಕ್ಷಿಗಳನ್ನು ರಕ್ಷಿಸಿದ್ದಾರೆ.
ಮನೆಯಲ್ಲಿ ಭಾರತೀಯ ಮೂಲದ ಪಕ್ಷಿಗಳನ್ನು ಹಾಗೂ ಆಮೆಗಳನ್ನು ಪೆಟ್ ಆಗಿ ಸಾಕಲು ಅವಕಾಶವಿಲ್ಲ. ಹೌದು ಮನೆಯಲ್ಲಿ ಅವುಗಳನ್ನು ಪಂಜರದಲ್ಲಿ ಅಕ್ರಮವಾಗಿ ಬಂಧಿಸಿಡುವಂತಿಲ್ಲ. ಅದರಲ್ಲೂ ಭಾರತೀಯ ಮೂಲದ ಪಕ್ಷಿಗಳಾದ ಅಲಂಕ್ಸಾಂಡರ್ ಇನ್ ಪ್ಯಾರಾ ಕಿಟ್ ರೋಸ್ ರಿಂಗ್ ಪ್ಯಾರಾ ಕಿಟ್ ಪ್ಲ್ಯಾಪ್ ಶೆಲ್ ಆಮೆ ಇವುಗಳು ಶೆಡ್ಯೂಲ್ 1 ರಲ್ಲಿ ಬರುವ ಪಕ್ಷಿಗಳು. ಇವುಗಳನ್ನು ಅನಧಿಕೃತವಾಗಿ ಸಾಕುವುದು ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಪ್ರಕಾರ ಅಪರಾಧವಾಗಿದೆ. ಹೌದು ಅನಧಿಕೃತವಾಗಿ ಸಾಕಿದರೆ ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.
ವಿದೇಶಿ ಪಕ್ಷಿಗಳಾದ ಲವ್ ಬರ್ಡ್ಸ್ ಸೇರಿದಂತೆ ಕೆಲ ಪಕ್ಷಿಗಳನ್ನು ಮನೆಯಲ್ಲಿ ಸಾಕಬಹುದಾಗುದ್ದು ಆದರೆ ಅದಕ್ಕೂ ಕೂಡಾ ಪರವಾನಗಿಯನ್ನು ಪಡೆದಿರಬೇಕು. ಯಾರಾದರು ವಿದೇಶಿ ಪಕ್ಷಿಗಳನ್ನು ಸಾಕುತ್ತಿದ್ದರೆ ಮೊದಲು ಅವರು ಪರಿವೇಶ್ ಪೋರ್ಟಲ್ನಲ್ಲಿ ಪಕ್ಷಿಗಳ ಸಾಕುವ ಬಗ್ಗೆ ತಮ್ಮ ನೋಂದಣಿಯನ್ನು ಮಾಡಿಕೊಳ್ಳಬೇಕು. ತದನಂತರ ಇಲಾಖೆಯಿಂದ ಪರವಾನಗಿಯನ್ನು ಪಡೆಯಬೇಕು. ತಮ್ಮ ಬಳಿ ಇರುವ ಪಕ್ಷಿಗಳ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು. ಇಲ್ಲದಿದ್ದರೆ ಅದು ಕೂಡಾ ಅಪರಾಧವಾಗುತ್ತದೆ.
ಇನ್ನೂ ಸರ್ಕಾರದ ಯಾವುದೇ ರೀತಿಯ ಕಾಯಿದೆಗಳನ್ನು ಜಾರಿಗೆ ತಂದರೂ ಕೂಡ ಹಕ್ಕಿ ಹಿಡಿಯುವುದು ಹಾಗೂ ಸಾಕುವುದನ್ನು ನಮ್ಮ ಜನ ಬಿಡುವುದಿಲ್ಲ ಇದಕ್ಕೆ ಸಾಕ್ಷಿ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಒಂದು ವೀಡಿಯೋ ವೈರಲ್ ಆಗಿದ್ದು ಸಿಂಪಲ್ ಟ್ರಿಕ್ ಬಳಸಿ ಪಕ್ಷಿಗಳನ್ನು ಯುವಕ ಹೇಗೆ ಹಿಡಿದಿದ್ದಾನೆ ನೀವೇ ನೋಡಿ.
Easy Underground Unique Quick Pigeon Trap Using PVC Pipe And Football – Creative Bird Trap