ವಾರ್ತಾ ಮಂಜರಿ
Trending Stories, Viral News, Gossips & Everything in Kannada

ದರ್ಶನ್ ಹೆಂಡತಿಯಿಂದ ದೊಡ್ಡ ಆರೋಪ…ಆಗಿದ್ದೆ ಬೇರೆ

26
Join WhatsApp
Google News
Join Telegram
Join Instagram

ಫೆಬ್ರವರಿ 16 ರಂದು ಕನ್ನಡ (KFI) ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ (Box Office Sulthana) ದರ್ಶನ್ (Darshan) ರವರು 46ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹೌದು ಬಹಳ ಅದ್ಧೂರಿಯಾಗಿ ನಟ ದರ್ಶನ್ ಈ ಬಾರಿ ಅಭಿಮಾನಿಗಳ (Fans) ಜೊತೆ ಹುಟ್ಟುಹಬ್ಬ (Birthday) ಆಚರಿಸಿಕೊಂಡಿದ್ದು ಸಾಮಾಜಿಕ ಜಾಲತಾಣಲ್ಲಿ (Social Media) ಕೂಡ ಅಭಿಮಾನಿಗಳು ಚಿತ್ರರಂಗದ ತಾರೆಯರು ರಾಜಕೀಯ ಮುಖಂಡರು ದರ್ಶನ್‌ ರವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು.ಇನ್ನು ಇದೆಲ್ಲದರ ನಡುವೆ ನಟ ದರ್ಶನ್ ನಟಿಯರಾದ ಮೇಘಾ ಶೆಟ್ಟಿ (Megha Shetty) ಪವಿತ್ರಾ ಗೌಡ (Pavithra Gowda) ಹಾಗೂ ಸೋನಲ್ ಮಂಥೇರೊ (Sonal Manntero) ಜೊತೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಹೌದು ಜೊತೆ ಜೊತೆಯಲಿ (Jote Joteyali) ಧಾರಾವಾಹಿಯಲ್ಲಿ ಅನು ಸಿರಿಮನೆ ಆಗಿ ಅಭಿಮಾನಿಗಳ ಮನಗೆದ್ದ ಮೇಘಾ ಶೆಟ್ಟಿಯವರು ನಟ ದರ್ಶನ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ.

ಇನ್ನು ಮೇಘಾ ಪವಿತ್ರಾ ಸೋನಲ್ ಆತ್ಮೀಯ ಸ್ನೇಹಿತರಾಗಿದ್ದು 3 ಜನ ಸೇರಿ ಬಹಳ ಸ್ಪೆಷಲ್ ಆಗಿ ದರ್ಶನ್ ರವರ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ್ದರು. ಇನ್ನು ಅದಕ್ಕೆ ಸಂಬಂಧಿಸಿದ ಫೋಟೊಗಳು (Photos) ವಿಡಿಯೋಗಳು (Videos) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸ್ವತಃ ಮೇಘಾ ಶೆಟ್ಟಿಯವರೇ ವಿಡಿಯೋವನ್ನು ಶೇರ್ ಮಾಡಿದ್ದು ಈ ಬಗ್ಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijayalakashmi) ಕೆಂಡಾಮಂಡಲವಾಗಿದ್ದರು. ಹೌದು ಅಷ್ಟೇ ಅಲ್ಲ ಬಹಿರಂಗವಾಗಿಯೇ ಮೇಘಾ ಶೆಟ್ಟಿಗೆ ತರಾಟೆಗೆ ಕೂಡ ತೆಗೆದುಕೊಂಡಿದ್ದರು.ಸದ್ಯ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಮೇಘಾ ಶೆಟ್ಟಿ ವಿರುದ್ಧ ವಿಜಯಲಕ್ಷ್ಮಿ ದರ್ಶನ್ ಆಕ್ರೋಶ ವ್ಯಕ್ತಪಡಿಸಿದ್ದು ವಿಜಯಲಕ್ಷ್ಮಿ ದರ್ಶನ್ ರವರ ಬೆಂಬಲಕ್ಕೆ ಅಭಿಮಾನಿಗಳು ನಿಂತಿದ್ದಾರೆ. ಕಾಮೆಂಟ್ ಮಾಡುವ ಮೂಲಕ ಧೈರ್ಯ ತುಂಬಿದ್ದಾರೆ

ಹೌದು ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಪೋಸ್ಟ್ ಮಾಡಿ ನನ್ನ ಕುಟುಂಬಕ್ಕೆ ಹಾನಿಯುಂಟು ಮಾಡುವ ವೀಡಿಯೊಗಳು ಚಿತ್ರಗಳು ಮತ್ತು ಇತರ ವಿಷಯಗಳನ್ನು ಪೋಸ್ಟ್ ಮಾಡುವ ಮತ್ತು ಮರು ಪೋಸ್ಟ್ ಮಾಡುತ್ತಿರುವ ಜನರು ಮತ್ತು ಅಭಿಮಾನಿಗಳಿಗೆ ನನ್ನ ಪ್ರಾಮಾಣಿಕ ವಿನಂತಿ. ತಕ್ಷಣವೇ ಆ ರೀತಿಯಾದ ಪೋಸ್ಟ್‌ಗಳನ್ನು ನಿಲ್ಲಿಸಿ. ಮಹಿಳೆಯಾಗಿ ಈ ವೀಡಿಯೊವನ್ನು ಪೋಸ್ಟ್ ಮಾಡುವ ಮೊದಲು ಒಬ್ಬರು ಎರಡು ಬಾರಿ ಯೋಚಿಸಬೇಕಾಗಿತ್ತು. ಏಕೆಂದರೆ ಇದು ನನಗೆ ಮತ್ತು ನನ್ನ ಮಗನಿಗೆ ಅಪಾರ ನೋವನ್ನು ಉಂಟುಮಾಡಿದೆ. ನಿಮ್ಮ ಈ ಕೃತ್ಯ ನಿಮ್ಮ ನೈತಿಕತೆಯನ್ನು ತೋರಿಸುತ್ತದೆ. ವ್ಯಕ್ತಿತ್ವವನ್ನು ಗಮನಿಸಿ. ನನ್ನ ಮೌನದ ಅರ್ಥ ನಾನು ನಾನ್‌ಸೆನ್ಸ್ ಅನ್ನು ತಡೆದುಕೊಳ್ಳುತ್ತೇನೆ ಎಂದು ಅರ್ಥವಲ್ಲ! ಎಂದು ಬರೆದು ಮೇಘಾಶೆಟ್ಟಿಯನ್ನು ಟ್ಯಾಗ್ ಮಾಡಿದ್ದರು.

ಇನ್ನು ನಟಿ ಮೇಘಾ ಶೆಟ್ಟಿ ಈ ಹಿಂದೆ ಸಹ ನಟ ದರ್ಶನ್‌ ರವರ ಜೊತೆಗೆ ಫೋಟೊಗಳನ್ನು ಕ್ಲಿಕ್ಕಿಸಿಕೊಂಡು ಪೋಸ್ಟ್ ಮಾಡುತ್ತಿದ್ದರು. ಹೌದು ಸಫಾರಿಗೆ (Safari) ಹೋಗಿ ಬಂದ ಫೋಟೊಗಳು ವೈರಲ್ ಆದಾಗಲೂ ಕೂಡ ಸುಮ್ಮನಿದ್ದರು. ಆದರೆ ಯಾಕೋ ಈ ಬಾರಿ ಮಿತಿ ಮೀರಿದೆ ಎನಿಸಿ ವಿಜಯಲಕ್ಷ್ಮಿ ಪ್ರತಿಕ್ರಿಯಿಸಿದ್ದು ಇತ್ತ ದರ್ಶನ್ ಪತ್ನಿ ಕೆಂಡಾಮಂಡಲವಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುತ್ತಿದ್ದಂತೆ ನಟಿ ಮೇಘಾ ಶೆಟ್ಟಿ ರವರು ತಮ್ಮ ಪೋಸ್ಟ್ ಡಿಲೀಟ್ (Delete) ಮಾಡಿದ್ದಾರೆ. ಇನ್ನು ವಿಜಯಲಕ್ಷ್ಮಿ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡದೇ ಸೈಲೆಂಟ್ (Silent) ಆಗಿದ್ದು ಕಿರುತೆರೆ ಧಾರಾವಾಹಿ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ.

ಇನ್ನು ಕೆಲವೇ ನಿಮಿಷಗಳಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮಾಡಿದ್ದ ಪೋಸ್ಟ್ ವೈರಲ್ ಆಗಿದ್ದು ದರ್ಶನ್ ಅಭಿಮಾನಿಗಳಲ್ಲೂ ಕೂಡ ಇದು ಸಾಕಷ್ಟು ಚರ್ಚೆ ಹುಟ್ಟಾಕಿತ್ತು. ಹೌದು ಸಾಕಷ್ಟು ಜನ ಮಹಿಳಾ ಅಭಿಮಾನಿಗಳು ವಿಜಯಲಕ್ಷ್ಮಿ ಪರ ಬ್ಯಾಟ್ ಬೀಸಿದ್ದು ಅವರದ್ದೆಲ್ಲಾ ಅತಿಯಾಯಿತು ಹೆಂಡತಿಯಾಗಿ ನಿಮಗೆ ಎಲ್ಲಾ ಹಕ್ಕು ಇದೆ ಎಂದು ಕಾಮೆಂಟ್ ಮೂಲಕ ತಿಳಿಸಿದ್ದರು. ಇನ್ಮು ತಮ್ಮ ಪೋಸ್ಟ್ ಇಷ್ಟೆಲ್ಲಾ ಸದ್ದು ಮಾಡುತ್ತಿದ್ದಂತೆ ಯಾಕೋ ದಿಢೀರನೇ ವಿಜಯಲಕ್ಷ್ಮಿ ರವರು ಕೂಡ ಅದನ್ನು ಡಿಲೀಟ್ ಮಾಡಿದ್ದಾರೆ.