ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಬೆಟ್ಟದಿಂದ ಜಂಪ್ ಮಾಡುವಾಗ ಯಡವಟ್ಟು…ಚಿಂದಿ ವಿಡಿಯೋ

17,338

ರಿಷಿಕೇಶವು (Rishikesh)ಭಾರತದ ಉತ್ತರಾಖಂಡ (Uttarakhand, India)ರಾಜ್ಯದ ಡೆಹ್ರಾಡೂನ್ ( Dehradun) ಜಿಲ್ಲೆಯಲ್ಲಿರುವಂತಹ ಒಂದು ಪಟ್ಟಣವಾಗಿದ್ದು ಇಲ್ಲಿ ಪ್ರಸಿದ್ಧವಾದ ಪುಣ್ಯಕ್ಷೇತ್ರವಿದೆ (Shrine). ಹಿಮಾಲಯ ಪರ್ವತಗಳ ಪಾದದಲ್ಲಿ ಗಂಗಾ ನದಿಯ(River Ganga) ದಡದಲ್ಲಿರುವ ರಿಷಿಕೇಶ ದೇವಾಲಯಗಳು (Temples) ಆಶ್ರಮಗಳು(Ashrams)ತಪೋವನಗಳು(Tapovanas)ಮತ್ತು ಯೋಗಾಭ್ಯಾಸ (Yoga practice)ಕೇಂದ್ರಗಳಿಗೆ ಹೆಸರುವಾಸಿಯಾಗಿದ್ದು ನಿಮ್ಮ ಆಧ್ಯಾತ್ಮಿಕತೆಯನ್ನು ಹೆಚ್ಚಿಸುವ ತಾಣ ಇದಾಗಿದೆ.

ಇನ್ನು ಇಲ್ಲಿನ ವಾತಾವರಣದಲ್ಲಿ ಅನೇಕ ಸಾಹಸಮಯ ಮತ್ತು ಶಾಂತಿಯುತ ಚಟುವಟಿಕೆಗಳನ್ನು ನೀವು ಕೈಗೊಳ್ಳಬಹುದಾಗಿದ್ದು ಏಕಾಂತ ಅಥವಾ ವಿಶ್ರಾಂತಿ ಪಡೆಯಲು ಉತ್ತರಾಖಂಡದ ರಿಷಿಕೇಶ ಬೆಸ್ಟ್ ತಾಣ (Best Site)ಎಂದೇ ಹೇಳಬಹುದು.ಪ್ರತಿನಿತ್ಯ ಯೋಗ ಮಾಡಬೇಕು ಹಾಗೂ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ವಿಶ್ವದಾದ್ಯಂತ ಕೂಗು ದಿನನಿತ್ಯ ಕೇಳಿತ್ತಿರುತ್ತೀರಿ. ಹೌದು ಆದರೆ ನಿಮಗೆ ತಿಳಿದಿರಲಿ ರಿಷಿಕೇಶವು ವಿಶ್ವದ ಯೋಗ ರಾಜಧಾನಿಯಾಗಿದ್ದುಈ ಪುಣ್ಯ ಸ್ಥಳವನ್ನು ತಪೋಭೂಮಿ ಎಂದೇ ಕರೆಯಲಾಗುತ್ತದೆ.

ಹೌದುಯಾರು ಶಾಂತಿ ಮತ್ತು ಏಕಾಂತತೆಯ ಅನ್ವೇಷಣೆಯಲ್ಲಿ ಇರುತ್ತಾರೆಯೋ ಅಂತವರು ಇಲ್ಲಿನ ಮನೋಹರವಾದ ವಾತಾವರಣದಲ್ಲಿ ಪ್ರಸಿದ್ಧಿ ಹೊಂದಿರುವ ಆಶ್ರಮಗಳಲ್ಲಿ ಧ್ಯಾನ ಯೋಗಗಳನ್ನು ಅಭ್ಯಾಸ ಮಾಡಬಹುದಾಗಿದ್ದು ರಿಷಿಕೇಶ ಪವಿತ್ರವಾದ ಕ್ಷೇತ್ರವಾಗಿದ್ದು ಇಲ್ಲಿ ಮದ್ಯಪಾನ (Middrink)ಹಾಗೂ ಮಾಂಸಾಹಾರಗಳು(Meat Dishes)ದೊರೆಯುವುದಿಲ್ಲ.ಇದು ದೇಶದ ಪ್ರಮುಖವಾದ ಯಾತ್ರಾ ಕೇಂದ್ರವೆಂದು ಜನಪ್ರಿಯವಾಗಿದ್ದುಹಾಗಾಗಿ ಇಲ್ಲಿ ಮದ್ಯಪಾನ ಹಾಗೂ ಮಾಂಸಾಹಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ನಿಮಗೆ ತಿಳಿಯದೇ ಈ ಸ್ಥಳಕ್ಕೆ ಭೇಟಿ ನೀಡಿದಾಗ ಮದ್ಯಪಾನ ಮರೆತು ಕೊಂಡೊಯ್ಯಬೇಡಿ. ಇನ್ನು ರಿಷಿಕೇಶದಲ್ಲಿ ಸುಮಾರು ೧೩೩ ವರ್ಷಗಳಷ್ಟು ಪುರಾತನವಾದ ಕೈಲಾಸ ಆಶ್ರಮವಿದ್ದುಈ ಆಶ್ರಮವನ್ನು ಬ್ರಹ್ಮವಿದ್ಯಾ ಪೀಠ ಎಂದು ಕರೆಯಲಾಗುತ್ತದೆ. ಹೌದು ಈ ಪವಿತ್ರ ಪೀಠದಲ್ಲಿ ವೇದಾಂತ ಅಧ್ಯಯನಗಳನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಮುಡಿಪಾಗಿಸಲಾಗಿದೆ.ಭಾರತದ ಮಹಾ ನಾಯಕರುಗಳಾದ ಸ್ವಾಮಿ ರಾಣಾ ತೀರ್ಥ ಸ್ವಾಮಿ ವಿವೇಕಾನಂದ ಮತ್ತು ಸ್ವಾಮಿ ಶಿವಾನಂದರನ್ನು(Rana Tirtha Swami Vivekananda and Swami Sivananda)ಈ ಸ್ಥಳವು ಪ್ರೇರೇಪಿಸಿದೆ.ಇನ್ನು ಸಾಹಸವನ್ನು ಇಷ್ಟ ಪಡುವವರು ತಪ್ಪದೇ ಜೀವನದಲ್ಲಿ ಒಮ್ಮೆ ರಿಷಿಕೇಶಕ್ಕೆ ಭೇಟಿ ನೀಡಲೇಬೇಕು.

ಏಕೆಂದರೆ ಆಹ್ಲಾದಕರವಾದ ವಾತಾವರಣದ ಜೊತೆ ಜೊತೆಗೆ ಬಂಗೀ ಜಂಪಿಂಗ್ ನಂತಹ ಚಟುವಟಿಕೆಗಳನ್ನು ನೀವು ಆನಂದಿಸಬಹುದು.ಅಲ್ಲದೆ ಇಲ್ಲಿ ರಿವರ್ ರಾಫ್ಟಿಂಗ್ ಕ್ಯಾಂಪಿಂಗ್ ಟ್ರೆಕ್ಕಿಂಗ್ ಪ್ಯಾರಾಗ್ಲೈಡಿಂಗ್ ಇನ್ನು ಅನೇಕ ಅಂತ್ಯವಿಲ್ಲದ ಚಟುವಟಿಕೆಗಳನ್ನು ನೀವು ಇಲ್ಲಿ ಆನಂದಿಸಬಹುದಾಗಿದ್ದುಭಾರತದಲ್ಲಿ ಬಂಗೀ ಜಂಪಿಂಗ್(Bungee Jumping) ಅನ್ನು ಪರಿಚಯಿಸಿದ ಮೊದಲ ನಗರ ಇದಾಗಿದ್ದು ಭಾರತದಾದ್ಯಂತ ಅನೇಕ ಸಾಹಸಿಗಳು ಈ ತಾಣಕ್ಕೆ ಭೇಟಿ ನೀಡುತ್ತಾರೆ. ಇಲ್ಲಿ ಬಂಗೀ ಜಂಪಿಂಗ್ ಹೇಗಿರುತ್ತೆ ಗೊತ್ತೆ? ನೀವೆ ಕೆಳಗಿನ ವಿಡಿಯೋ ನೋಡಿ.