ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಮಕ್ಕಳು ಹೀಗೆ ಡ್ಯಾನ್ಸ್ ಮಾಡುತ್ತಾರೆ ಎಂದು ಯಾರು ಊಹಿಸಿರಲಿಲ್ಲ…ಚಿಂದಿ ವಿಡಿಯೋ

86,142

ಸಾಮಾನ್ಯವಾಗಿ ಬೋಧನಾ ವೃತ್ತಿ(Teaching Profession)ಎಂಬುದನ್ನು ಅತ್ಯಂತ ಶ್ರೇಷ್ಠವಾದ(The Greatest) ವೃತ್ತಿಗಳಲ್ಲಿ ಒಂದು ಎಂದೇ ನಮ್ಮ ದೇಶದಲ್ಲಿ ಪರಿಗಣಿಸಲಾಗುತ್ತದೆ. ಹೌದು ಮಕ್ಕಳಿಗೆ ಅಕ್ಷರಾಭ್ಯಾಸ (Literacy)ಮಾಡಿಸುವುದು ಅದರ ಜೊತೆಗೆ ಸರಿ ತಪ್ಪುಗಳನ್ನು ತಿದ್ದಿ ಅವರಲ್ಲಿನ ಆಸಕ್ತಿಗಳನ್ನು ವೃದ್ಧಿಸಿ (Develop Interests) ನಂತರ ಅವರ ಬದುಕಿಗೆ ಗುರಿ (Aim for life)ರೂಪಿಸುವುದರಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವದ್ದು. ಮೌಲ್ಯಯುತ ಸಮಾಜ ರೂಪಿಸುವ(Value society) ಶಿಕ್ಷಕರಿಗೆಂದೇ ತಮ್ಮದೇ ಆದ ದಿನವೊಂದನ್ನು ಸಂಭ್ರಮಿಸುವ ಅವಕಾಶವೂ ಕೂಡ ನಮ್ಮ ದೇಶದಲ್ಲಿದೆ.

ಇನ್ನು ಈಗಿನ ಕಾಲಘಟ್ಟದಲ್ಲಿ ಶಿಕ್ಷಕರ ಮೇಲಿನ ಜವಾಬ್ದಾರಿಗಳು ಕೊಂಚ ಜಾಸ್ತಿಯೇ ಇದ್ದು ಅವರನ್ನು ವಿದ್ಯಾರ್ಥಿಗಳು (Students)ಹಾಗೂ ಪೋಷಕರು (Parents)ನೋಡುವ ಬಗೆ ಮತ್ತು ಅವರ ಮೇಲಿನ ಮನೋಭಾವಗಳು ಕೂಡ ಬದಲಾಗಿದೆ. ಇವೆಲ್ಲಾ ಬದಲಾಗಿದ್ದರು ಕೂಡ ಅವರ ಮೇಲೆನ ಹೊಣೆಗಾರಿಕೆಗಳು ಮಾತ್ರ ಬದಲಾಗಿಲ್ಲ. ಇತ್ತೀಚಿನ ದಿನಗಳಲಂತ ಶಿಕ್ಷಕರ ಮೇಲಿನ ಜವಾಬ್ದಾರಿ ಮತ್ತು ಒತ್ತಡಗಳು ಕೂಡ ಇನ್ನಷ್ಟು ಹೆಚ್ಚಾಗಿವೆ. ಇಂತಹ ಅನೇಕ ಕಾರಣಗಳಿಂದಾಗಿ ಶಿಕ್ಷಕರ ದಿನಾಚರಣೆ (Teacher’s Day) ಒಂದು ಮಹತ್ವ ಪಡೆದುಕೊಳ್ಳುತ್ತದೆ.

ಭಾರತದ ಮೊದಲ ಉಪ ರಾಷ್ಟ್ರಪತಿ (First Vice President)ಹಾಗೂ ಎರಡನೆಯ ರಾಷ್ಟ್ರಪತಿಯಾಗಿದ್ದ (Second President) ಡಾ. ಸರ್ವಪಲ್ಲಿ ರಾಧಾಕೃಷ್ಣನ್ (DR.Sarvapalli Radhakrishnan) ಅವರು ಜನಿಸಿದ್ದು 1888ರ ಸೆ. 5ರಂದು. ಅವರ ಗೌರವಾರ್ಥ ಸೆ. 5ರ ದಿನವನ್ನು ಶಿಕ್ಷಕರ ದಿನವೆಂದು (Teacher’s Day) ಆಚರಿಸಲಾಗುತ್ತದೆ. ಈ ದಿನದಂದು ಶಾಲೆಗಳಲ್ಲಿ ಹಾಗೂ ಕಾಲೇಜುಗಳಲ್ಲಿ ವಾತಾವರಣಗಳು ಒಂದಷ್ಟು ಬದಲಾಗುತ್ತದೆ.

ಮಕ್ಕಳೊಂದಿಗೆ ಶಿಕ್ಷಕರೂ ಕೂಡ ಮಕ್ಕಳಾಗುತ್ತಾರೆ. ಶಿಕ್ಷಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ವಿವಿಧ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಈ ವಿಶೇಷ ದಿನದಂದು ಶಿಕ್ಷಕರಿಗಾಗಿ ವಿಧ್ಯಾರ್ಥಿಗಳು ಕೂಡ ನೃತ್ಯ ಮಾಡುತ್ತಾರೆ. ಸದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದ್ದು ಇಲ್ಲಿ ಶಿಕ್ಷಕರು ಅನಿಯುಲ್ ಡೇ(Anul Day)ಗಾಗಿ ಮಕ್ಕಳಿಗೆ ಅದ್ಬುತ ಡ್ಯಾನ್ಸ್ ಹೇಳಿಕೊಟ್ಟಿದ್ದು ವೇದಿಕೆ ಮೇಲೆ ಪಂಚೆ ತೊಟ್ಟು ಪುಟಾಣಿಗಳು ಹೇಗೆ ಕುಣಿದಿದ್ದಾರೆ ನೀವೆ ನೋಡಿ.