ವಾರ್ತಾ ಮಂಜರಿ
Trending Stories, Viral News, Gossips & Everything in Kannada

ರಿಯಾಲಿಟಿ ಶೋನಲ್ಲಿ ವಂಶಿಕಾ ಚಿಂದಿ ಡೈಲಾಗ್..ನೋಡಿ ವಿಡಿಯೋ

1,006

ನಟ ಹಾಸ್ಯನಟ(Comedian)ನಿರ್ದೇಶಕ(Director) ನಿರೂಪಕ ರಾಗಿ (Anchor) ಚಿತ್ರರಂಗ ಹಾಗೂ ಕಿರುತೆರೆ ಲೋಕದಲ್ಲಿ ಗುರುತಿಸಿಕೊಂಡು ಛಾಪು ಮೂಡಿಸುತ್ತಿರುವವರು ಮಾಸ್ಟರ್ ಆನಂದ್ ರವರು (Master Anandh). ಬಾಲ ಕಲಾವಿದರಾಗಿ(child artist) ನಟನಾ ಪಯಣ ಪ್ರಾರಂಭಿಸಿದ ಮಾಸ್ಟರ್ ಆನಂದ್ ರವರು ಬಣ್ಣದ ಲೋಕದಲ್ಲಿ ಯಶಸ್ವಿಯಾಗಿ ಈಗಾಗಲೇ ಮೂವತ್ತು ವರ್ಷಗಳನ್ನು (30 Years) ಪೂರೈಸಿದ್ದಾರೆ.

ಕ್ರೇಜಿಸ್ಟಾರ್ ರವಿಚಂದ್ರನ್(Ravichandran) ಅಭಿನಯದ ಕಿಂದರಿಜೋಗಿ(Kindari jogi) ಚಿತ್ರದಲ್ಲಿ ಬಾಲನಟನಾಗಿ ಕಾಣಿಸಿಕೊಳ್ಳುವ ಮೂಲಕ ನಟನಾ ಪಯಣ ಆರಂಭಿಸಿದ ಆನಂದ್ ರವರು ಮುಂದೆ ಗೌರಿ ಗಣೇಶ(Gowri Ganesha) ಸಿನಿಮಾದಲ್ಲಿ ನಟಿಸಿದರು. ಗೌರಿ ಗಣೇಶ ಸಿನಿಮಾದಲ್ಲಿ ಕನ್ನಡದ ಮೇರು ಕಲಾವಿದರುಗಳಾದ ಅನಂತ್ ನಾಗ್ ( Ananthnag) ರಮೇಶ್ ಭಟ್ (Ramesh Bhatt) ಸಿಹಿ ಕಹಿ ಚಂದ್ರು(Sihi Kahi Chandru) ವಿನಯ ಪ್ರಸಾದ್ (Vinaya Prasadh) ವೈಶಾಲಿ ಕಾಸರವಳ್ಳಿ (Vyshali kasaravalli) ಅವರೊಂದಿಗೆ ತೆರೆ ಕಂಡ ಮಾಸ್ಟರ್ ಆನಂದ್ ಮುಂದೆ ಹತ್ತಾರು ಚಿತ್ರಗಳಲ್ಲಿ ಬಾಲ ಕಲಾವಿದರಾಗಿ ನಟಿಸಿ ಸೈ ಎನಿಸಿಕೊಂಡಿದ್ದು ಬಳಿಕ ಫ್ರೆಂಡ್ಸ್ (Friends) ಸಿನಿಮಾದಲ್ಲಿ ನಾಯಕರಾಗಿ ನಟಿಸುವ ಮೂಲಕ ಬಾಲನಟನಿಂದ ನಾಯಕನಾಗಿ ಭಡ್ತಿ ಕೂಡ ಪಡೆದರು. ಆದರೆ ಮಾಸ್ಟರ್ ಎಂಬ ಹೆಸರು ಮಾತ್ರ ಮಿಸ್ಟರ್ (Mister) ಆಗಲಿಲ್ಲ.

ದೇವರು ವರವನು ಕೊಟ್ರೆ (Devaru Varavanu Kotre) ಮಣಿ (Mani) ಪ್ರೀತಿಗಾಗಿ (Preethigagi)ಪ್ರೀತಿ ಬೇಕು (Preethi Beeku) ಜ್ಯೇಷ್ಠ(Jeshta) ಮೀರಾ ಮಾಧವ ರಾಘವ (Meera Madhava Raagava) ಸಜನಿ(Sajani) ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿರುವ ಮಾಸ್ಟರ್ ಆನಂದ್ ರವರು ಎಸ್ ಎಸ್ ಎಲ್ ಸಿ ನನ್ ಮಕ್ಕಳು ಕಿರುತೆರೆಗೆ ಕಾಲಿಟ್ಟಿದ್ದು ನವಿರಾದ ಹಾಸ್ಯದ ಮೂಲಕ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸಿದ್ದ ಆನಂದ್ ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ.

ಹೌದು ಮುಂದೆ ಪಡುವಾರಳ್ಳಿ ಪಡ್ಡೆಗಳು (Padavaralli Paddegalu) ರೋಬೋ ಫ್ಯಾಮಿಲಿಯಂಥಹ (Roboo Family) ಹಾಸ್ಯ ಧಾರಾವಾಹಿಗಳನ್ನು ನಿರ್ದೇಶಿಸುವ ಮೂಲಕ ಕಿರುತೆರೆಯಲ್ಲಿ ಹೊಸ ಅಲೆ ಸೃಷ್ಟಿ ಮಾಡಿದ್ದ ಮಾಸ್ಟರ್ ಆನಂದ್ ರಿಯಾಲಿಟಿ ಶೋವಿನಲ್ಲೂ ಭಾಗವಹಿಸಿದ್ದರು. ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸಿಂಗ್ ಸ್ಟಾರ್ ಸೀಸನ್ 2 ರಲ್ಲಿ ಭಾಗವಹಿಸಿದ್ದ ಮಾಸ್ಟರ್ ಆನಂದ್ ವಿನ್ನರ್ ಪಟ್ಟವನ್ನು ಮುಡಿಗೇರಿಸಿಕೊಂಡರು. ಸದ್ಯ ಇದೀಗ ನಿರೂಪಣೆಯಲ್ಲಿ ಬ್ಯೂಸಿ ಇದ್ದಾರೆ.

ಇನ್ನು ಮಾಸ್ಟರ್ ಆನಂದ್ ಗೆ ಮುದ್ದಾದ ಮಗಳಿದ್ದು ಆಕೆಯ ಪರಿಚಯ ತಮಗೆಲ್ಲರಿಗೂ ಚೆನ್ನಾಗಿಯೆ ಇದೆ. ಈಗಾಗಲೇ ನಮ್ಮಮ್ಮ ಸೂಪರ್‌ ಸ್ಟಾರ್ ಹಾಗೂ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರುವ ವಂಶಿಕಾ(Vanshika) ಸೆನ್ಸೇಷನ್ ಕಿಡ್ ಆಗಿದ್ದಾಳೆ. ಇನ್ನು ವಂಶಿಕಾ ಡೈಲಾಗ್ ಡೆಲಿವರಿ ಕೂಡ ಅದ್ಭುತವಾಗಿದ್ದು ನಮ್ಮಮ್ಮ ಸೂಪರ್ ಸ್ಟಾರ್ ಮೂಲಕ ಚಿರಪರಿಚಿತರಾದ ವಂಶಿಕಾ ಈಗ ಅದೇ ರಿಯಾಲಿಟಿ ಶೋಗೆ ನಿರೂಪಕಿ ಯಾಗಿದ್ದಾರೆ.

ಹೌದು ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್-2 ಅನ್ನು ವಂಶಿಕಾ ಅವರು ಹೋಸ್ಟ್ ಮಾಡುತ್ತಿದ್ದು ಇದು ಹಲವರಿಗೆ ಖುಷಿ ಕೊಟ್ಟಿದೆ. ಸದ್ಯ ಈ ನಡುವೆ ಗುಚ್ಚಿ ಗಿಲಿಗಿಲಿಯ ಒಂದು ಸಂಚಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಇಲ್ಲಿ ವಂಶಿಕಾಳ ನಾನ್ ಸ್ಟಾಪ್ ಕಾಮಿಡಿ ನೋಡಬಹುದು.