ಕಳೆದ ವರುಷ ಬೆಂಗಳೂರಿನ (Banglore) ಜಿಕೆವಿಕೆ (GKVK) ಆವರಣದಲ್ಲಿ ಕೃಷಿ ಮೇಳ ನಡೆದಿದ್ದು ಇಲ್ಲಿ ಒಂದು ಕೋಟಿ ಬೆಲೆ ಬಾಳುವ ಹಳ್ಳಿಕಾರ್ ತಳಿಯ ಹೋರಿ ಪ್ರಮುಖ ಆಕರ್ಷಣೆಯಾಗಿತ್ತು. ಹೌದು 1 ಲಕ್ಷದಿಂದ ಗರಿಷ್ಠ 2 ಲಕ್ಷ ರೂ. ವರೆಗೆ ಹೋರಿಗಳು ಮಾರಾಟ ಆಗುವುದನ್ನು ಕೇಳಿದ್ದಿರಿ ಆದರೆ ಒಂದು ಕೋಟಿ ಬೆಲೆ ಅಂದರೆ ಅದೆಂಥ ಹೋರಿ ಇರಬೇಕು ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು. ಹೀಗಾಗಿ ಮಂಡ್ಯದ(Mandya) ಮಳವಳ್ಳಿಯಿಂದ (Malavalli) ಬಂದಿರುವ ವಿಶೇಷ ತಳಿಯ ಹೋರಿ ನೋಡಲು ಜನ ಮುಗಿ ಬಿದ್ದಿದ್ದರು.
ನಶಿಸಿ ಹೋಗುತ್ತಿರುವ ಹಳ್ಳಿಕಾರ್ ತಳಿ ಅಭಿವೃದ್ಧಿಗಾಗಿಯೇ ವಿಶೇಷವಾಗಿ ಸಾಕಲಾಗಿರುವ ಹೋರಿಯಿದಾಗಿದ್ದು ಸುಮಾರು ಮೂರೂವರೆ ವರ್ಷ ವಯಸ್ಸಿನ ಈ ಹೋರಿಯ ವೀರ್ಯಕ್ಕೆ ಭಾರೀ ಬೇಡಿಕೆಯಿದೆ. ಹೌದು ಹೀಗಾಗಿ ವಾರಕ್ಕೊಮ್ಮೆ ಇದರಿಂದ ವೀರ್ಯಾಣು ತೆಗೆದು ಸಂಗ್ರಹಿಸಿಟ್ಟು ಒಂದು ಡೋಸ್ ವೀರ್ಯಾಣುವನ್ನು ಒಂದು ಸಾವಿರ ರೂ.ನಂತೆ ಮಾರಲಾಗುತ್ತದೆ. ಹೀಗಾಗಿಯೇ ಇದಕ್ಕೆ ದುಬಾರಿ ದರವಾಗಿದ್ದು ರಾಮನಗರ(Ramanagara) ದಾವಣಗೆರೆ(Davanagere) ಮತ್ತು ಚಿಕ್ಕಮಗಳೂರು(Chikkamaglur) ಜಿಲ್ಲೆಗಳಲ್ಲಿ ಇದರ ವೀರ್ಯ ಮಾರಾಟ ಘಟಕಗಳನ್ನು ತೆರೆಯಲಾಗಿದೆ ಎಂದು ಹೋರಿಯ ಮಾಲೀಕ ಮಳವಳ್ಳಿಯ ಬೋರೇಗೌಡ ಹಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಇನ್ನು ಈ ಹೋರಿ ನೋಡಲು ಅತ್ಯಂತ ಆಕರ್ಷಕವಾಗಿದ್ದು ಇದಕ್ಕೆ ಕೃಷ್ಣ ಎಂದು ಹೆಸರಿಡಲಾಗಿದೆ. 6.2 ಅಡಿ ಎತ್ತರ ಸುಮಾರು 8 ಅಡಿಗೂ ಹೆಚ್ಚು ಉದ್ದವಿರುವ ಈ ಹೋರಿ ಬರೋಬ್ಬರಿ 800 ಕೆ.ಜಿ. ತೂಕವಿದ್ದು ಈ ತಳಿಯ ಹಸುವಿನ ಹಾಲಿನಲ್ಲಿ ಎ2 ಪ್ರೊಟೀನ್ ಅಂಶವನ್ನು ಹೊಂದಿದ್ದು ಇದು ಆರೋಗ್ಯಕ್ಕೆ ತುಂಬಾ ಉಪಯುಕ್ತವಾದುದು.
ಈ ಎಲ್ಲಾ ಕಾರಣಗಳಿಂದಾಗಿಯೇ ಈ ಹೋರಿಗೆ ಬೇಡಿಕೆಯಿದ್ದು ಬೆಲೆಯೂ ದುಬಾರಿಯಾಗಿದೆ. ಅಚ್ಚುಕಟ್ಟಾಗಿ ನೋಡಿಕೊಂಡರೆ ಸುಮಾರು 20 ವರ್ಷ ಬದುಕುತ್ತದೆ ಎಂದು ಬೋರೇಗೌಡ ತಮ್ಮ ಹೋರಿಯ ಕುರಿತು ಮಾಹಿತಿಯನ್ನು ಬಿಚ್ಚಿಟ್ಟರು.ಈ ಬೆನ್ನಲ್ಲೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದಯ ವೈರಲ್ ಆಗಿದ್ದು ಪ್ರಪಂಚದ ಅತಿ ದೊಡ್ಡ ಹೋರಿ (ಗೂಳಿ) ನೋಡಿದ್ದೀರ? ಒಮ್ಮೆ ಕೆಳಗಿನ ವಿಡಿಯೋ ನೋಡಿ.