ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಪ್ರಪಂಚದ ಮೊದಲ ಹಾರುವ ಹಾವು ಪತ್ತೆ…ನೋಡಿ ಚಿಂದಿ ವಿಡಿಯೋ

44,263

The Amazing Paradise Flying Snake | Wildest Islands Of Indonesia: ಈ ಅಂತರ್ಜಾಲ ಎಂಬುದು ಮೋಜಿನ ಜಗತ್ತು. ನಾವು ಪ್ರತಿದಿನ ಇಲ್ಲಿ ಹಲವಾರು ವಿಭಿನ್ನ ವಿಡಿಯೋಗಳನ್ನು ನೋಡುತ್ತೇವೆ. ಹೌದು ಈ ಇಂಟರ್‌ನೆಟ್‌ ಲೋಕದಲ್ಲಿ ಅನೇಕ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಕೆಲವು ನಮ್ಮ ಗಮನ ಸೆಳೆದರೆ ಇನ್ನು ಕೆಲವು ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತವೆ.

 

ಸಾಮಾನ್ಯವಾಗಿ ನೀವು ಹಾವುಗಳ ವಿಡಿಯೋಗಳನ್ನು ನೋಡೇ ಇರ್ತಿರಿ. ಕೆಲವು ಹಾವುಗಳ ವಿಡಿಯೋಗಳು ನೋಡಲು ತುಂಬಾ ಭಯಾನಕವಾಗಿರುತ್ತವೆ. ಈ ವಿಡಿಯೋಗಳನ್ನು ಲಕ್ಷಾಂತರ ಜನರು ಇಷ್ಟಪಟ್ಟು ನೋಡುತ್ತಾರೆ. ಹೌದು ಹೀಗಾಗಿ ಇಂತಹ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆದ ಕೆಲವೇ ಗಂಟೆಗಳಲ್ಲಿ ಸಖತ್ ವೈರಲ್ ಆಗಿಬಿಡುತ್ತದೆ.

ಹಾವುಗಳು ತುಂಬಾ ಅಪಾಯಕಾರಿ ಜೀವಿ. ನೀವು ಅವುಗಳಿಗೆ ತೊಂದರೆ ನೀಡದಿದ್ದರೆ ಅವು ನಿಮಗೆ ಏನೂ ಮಾಡುವುದಿಲ್ಲ. ಹೌದು ಒಂದು ವೇಳೆ ನೀವು ಅವುಗಳ ತಂಟೆಗೆ ಹೋದರೆ ನಿಮ್ಮ ಜೀವಕ್ಕೆ ಕುತ್ತು ತರುತ್ತವೆ. ಹೀಗಾಗಿ ಹಾವುಗಳೆಂದರೆ ಪ್ರತಿಯೊಬ್ಬರೂ ಹೆದರಿ ದೂರ ಸರಿಯುತ್ತಾರೆ.

 

ಪ್ರಪಂಚದಲ್ಲಿ 2,000ಕ್ಕೂ ಹೆಚ್ಚು ಜಾತಿಯ ಹಾವುಗಳಿದ್ದರೂ ಕೆಲವು ಮಾತ್ರ ಅಪಾಯಕಾರಿ. ಈ ಹಾವುಗಳಿಂದ ದೂರವಿರುವುದು ಉತ್ತಮ. ಆಶ್ಚರ್ಯವೆಂದರೆ ಹಾವುಗಳು ಕೂಡ ಮನುಷ್ಯರಿಗೆ ಹೆದರಿ ಓಡಿ ಹೋಗುತ್ತವೆ. ಆದರೆ ಕೆಲವೊಮ್ಮೆ ಅವು ತಮ್ಮ ಪ್ರಾಣ ಉಳಿಸಿಕೊಳ್ಳಲು ಮನುಷ್ಯರ ಮೇಲೆ ಅಟ್ಯಾಕ್ ಮಾಡುತ್ತವೆ.

ಸದ್ಯ ಇತ್ತೀಚೆಗಷ್ಟೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಾರುವ ಹಾವು ಕಾಣಸಿಕ್ಕಿದೆ. ಸ್ನೇಕ್‌ ಕೆಂಪರಾಜು ಅವರು ಈ ಹಾವನ್ನು ಸಂರಕ್ಷಿಸಿದ್ದು ಆರ್‌ಬಿಐ ವಸತಿ ಗೃಹದಲ್ಲಿ ಕಂಡು ಬಂದ ಈ ಹಾವನ್ನು ಕಂಡು ಜನರು ಭೀತಿಗೊಳಗಾಗಿದ್ದರು. ಅಲ್ಲದೇ ಇದೇ ಹಾವು ವಾರದ ಹಿಂದೆ ಇದೇ ಜಾಗದಲ್ಲಿ ಕಾಣಿಸಿಕೊಂಡಿತ್ತು.

 

ಮರದಿಂದ ಮರಕ್ಕೆ ಹಾರುವ ಹಾವು ಇದಾಗಿದ್ದು ಪಶ್ಚಿಮ ಘಟ್ಟಗಳಲ್ಲಿ ಹೆಚ್ಚಾಗಿ ಕಾಣ ಸಿಗುತ್ತದೆ. ಇನ್ನು ಈ ಹಾವನ್ನು ರಕ್ಷಣೆ ಮಾಡಿದ ಉರಗ ಸಂರಕ್ಷಕ ಕೆಂಪರಾಜು ಈ ಹಾವಿನ ಬಗ್ಗೆ ಮಾಹಿತಿ ನೀಡಿದರು. ಇದು ಮೂರು ಅಡಿ ಉದ್ದದ ಹಾವಾಗಿದ್ದು ಹಸಿರು ಮಿಶ್ರಿತ ಕೆಂಪು ಬಣ್ಣದಿಂದ ಕೂಡಿದೆ. ಇದೊಂದು ಅಪರೂಪದ ಹಾವಾಗಿದ್ದು ಮೈಸೂರು ಮೃಗಾಲಯಕ್ಕೆ ಹಾವನ್ನು ಹಸ್ತಾಂತರ ಮಾಡೋದಾಗಿ ಕೆಂಪರಾಜು ಮಾಹಿತಿ ನೀಡಿದರು.

ಕನ್ನಡದಲ್ಲಿ ಹಾರುವ ಹಾವು ಬಟ್ಟೆ ಬಣಜಿಗ ಹಾವು ಎಂದೆಲ್ಲ ಇದನ್ನು ಕರೆಯುತ್ತಾರೆ. ಸಾಮಾನ್ಯವಾಗಿ ಹಗಲು ಸಂಚಾರಿಯಾದ ಈ ಹಾವುಗಳು ಮರಗಳಲ್ಲಿ ವಾಸಿಸುತ್ತವೆ. ಈ ಹಾವು ತನ್ನ ಬೇಟೆಯನ್ನು ಹಿಡಿಯಲು ಶತ್ರುಗಳಿಂದ ರಕ್ಷಣೆ ಪಡೆಯಲು ಮರದಿಂದ ಮರಕ್ಕೆ ಕೆಳಮುಖವಾಗಿ ನೆಗೆಯುತ್ತವೆ.

 

ಇನ್ನು ಹಾರುವ ಸಂದರ್ಭದಲ್ಲಿ ಈ ಹಾವು ತನ್ನ ಶರೀರದ ಪಕ್ಕೆಲುಬುಗಳನ್ನು ಅಗಲಗೊಳಿಸಿ ಒಳಗಿನ ಗಾಳಿಯನ್ನು ಹೊರದೂಡಿ ಪ್ಯಾರಾಚೂಟ್‌ನಂತೆ ಹಾರುತ್ತವೆ. ಹೀಗಾಗಿ ದೂರದಲ್ಲಿ ಕಂಡಾಗ ಈ ಹಾವು ಹಾರಿದಂತೆ ಕಂಡರೂ ತನ್ನ ಶರೀರವನ್ನೇ ಬಾಣದಂತೆ ಹದಗೊಳಿಸಿ ನೆಗೆಯುವ ಕಲೆ ಹೊಂದಿದೆ. ಈ ಹಾವಿನ ಪ್ರಬೇಧದಲ್ಲಿ ಹೆಣ್ಣು ಹಾವು ಗಂಡು ಹಾವಿಗಿಂತ ದೊಡ್ಡದಾಗಿರುತ್ತದೆ. ಒಮ್ಮೆ ಈ ವಿಡಿಯೋ ನೋಡಿ ಹಾರುವ ಹಾವಿನ ಬಗ್ಗೆ ಹೆಚ್ಚಿನ ಮಾಹಿತಿ ಸಿಗುತ್ತದೆ.