ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಶ್ರುತಿ ತಾಯಂದಿರ ಜೊತೆ ಶ್ರೀ ಮುರುಳಿ ಉಗ್ರಂ ಡ್ಯಾನ್ಸ್…ಚಿಂದಿ ವಿಡಿಯೋ

2,476

Srii Murali Dancing With Shruti Mothers Video: ನಮ್ಮ ಕನ್ನಡ ಸಿನಿಮಾರಂಗದಲ್ಲಿ ಅನೇಕರು ಬದುಕು ಕಟ್ಟಿಕೊಂಡಿದ್ದು ಅಂತಹವರ ಸಾಲಿಗೆ ನಟ ಶ್ರೀ ಮುರುಳಿ ಯವರು ಕೂಡ ಸೇರಿಕೊಳ್ಳುತ್ತಾರೆ. ಹೌದು ಕನ್ನಡ ಚಿತ್ರರಂಗದಲ್ಲಿ ರೋರಿಂಗ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ಶ್ರೀಮುರಳಿ ಪ್ರತಿಭಾವಂತ ನಟ.1981 ಡಿಸೆಂಬರ್ 17ರಂದು ಬೆಂಗಳೂರಿನಲ್ಲಿ ಮುರಳಿ ಜನಿಸಿದ್ದು ಇವರ ತಂದೆ ಚಿನ್ನೇಗೌಡರು ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಪಕರು ಹಾಗೂ ಪಾರ್ವತಮ್ಮ ರಾಜಕುಮಾರ್‌ರ ಸಹೋದರರು ಕೂಡ.

ಶ್ರೀಮುರುಳಿಯವರ ಸಹೋದರ ವಿಜಯ ರಾಘವೇಂದ್ರ. ಮನೆಯಲ್ಲಿ ಕಲೆಯ ವಾತಾವರಣವು ಅದಾಗಲೇ ಇದ್ದು ಹೀಗಾಗಿ ಮುರಳಿ ಯವರಿಗೆ ಬಾಲ್ಯದಿಂದಲೂ ಚಿತ್ರರಂಗದ ಒಡನಾಟವಿತ್ತು. 2003 ರಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರು ನಿರ್ಮಾಣದ ಎಸ್.ನಾರಾಯಣ ನಿರ್ದೇಶನದ ಚಂದ್ರ ಚಕೋರಿ ಚಿತ್ರದ ಮೂಲಕವಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಈ ಚಿತ್ರ 500 ದಿನಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡು ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.

ಆದಾದ ನಂತರ ಇವರ ನಟನೆಯ ಕಂಠಿ ಚಿತ್ರವೂ ಹಿಟ್ ಆಗಿದ್ದು 2008 ರಲ್ಲಿ ಸಹೋದರ ವಿಜಯ್ ಜೊತೆ ಮಿಂಚಿನ ಓಟ ಚಿತ್ರದಲ್ಲಿ ಕೂಡ ನಟಿಸಿದರು. ಈ ನಡುವೆ ತಮ್ಮ ಹೋಮ್ ಬ್ಯಾನರ್ ಜವಾಬ್ದಾರಿಯನ್ನು ಅಚ್ಚು ಕಟ್ಟಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದರು.

2014 ರಲ್ಲಿ ತೆರೆಕಂಡ ಉಗ್ರಂ ಚಿತ್ರ ಮುರಳಿ ಸಿನಿಜೀವನಕ್ಕೆ ತಿರುವು ಕೊಟ್ಟಿದ್ದು ಈ ಸಿನಿಮಾದ ಬಳಿಕ ಮುರಳಿ ಸುಮಾರು 67 ಚಿತ್ರದಲ್ಲಿ ನಟಿಸುವ ಅವಕಾಶವನ್ನು ನಿರಾಕರಿಸಿದರು. ಹೌದು ತದನಂತರದಲ್ಲಿ ರಥಾವರ ಮತ್ತು ಮಫ್ತಿ ಚಿತ್ರದಲ್ಲಿ ನಟಿಸಿದರು. ಮಫ್ತಿಯಲ್ಲಿ ಶಿವರಾಜಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಒಂದೆರೆಡು ಮಲಯಾಳಂ ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ. ಈ ಮೂಲಕ ಸಿನಿಮಾರಂಗದಲ್ಲಿ ನೆಲೆ ಕಂಡಿರುವ ನಟ ಶ್ರೀ ಮುರುಳಿಯವರಿಗೆ ಸಾಕಷ್ಟು ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ ಎನ್ನಬಹುದು.

ಇನ್ನು ಆಗಾಗ ಸುದ್ದಿಯಲ್ಲಿರುವ ನಟ ಶ್ರೀ ಮುರುಳಿ ಅಭಿಮಾನಿಗಳ ಜೊತೆಗೆ ಪ್ರೀತಿ ವಿಶ್ವಾಸದಿಂದ ಮಾತನಾಡಿಸುತ್ತಿದ್ದು ಅಂದಹಾಗೆ ಈ ಹಿಂದೆ ಖ್ಯಾತ ನಟಿ ಶ್ರುತಿಯವರ ತಾಯಂದಿರ ಜೊತೆಗೆ ಸ್ಟೆಪ್ ಹಾಕಿದ್ದರು. ಹೌದು ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಈ ವಿಡಿಯೋದಲ್ಲಿ ಶ್ರುತಿಯ ತಾಯಂದಿರಿಗೆ ಸ್ಟೆಪ್ ಹೇಳಿಕೊಟ್ಟಿದ್ದು ಅವರ ಜೊತೆಗೆ ಶ್ರೀ ಮುರುಳಿಯವರು ಡಾನ್ಸ್ ಮಾಡಿದ್ದಾರೆ. ಹೌದು ಶ್ರುತಿಯವರ ತಾಯಂದಿರು ಸ್ಟೆಪ್ ಹಾಕಿದ್ದು ಕಂಡು ಖುಷಿ ಪಟ್ಟಿದ್ದು ಖುಷಿಯಲ್ಲಿ ಇಬ್ಬರನ್ನು ತಬ್ಬಿಕೊಂಡು ಹಣೆಗೆ ಮುತ್ತಿಟ್ಟಿದ್ದಾರೆ.

ಸದ್ಯಕ್ಕೆ ನಟ ಶ್ರೀ ಮುರುಳಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು ಬಘೀರ ಹಾಗೂ ಉಗ್ರಂ ವೀರಂ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಮೇ.20 ರಂದು ಚಿತ್ರಕ್ಕೆ ಮುಹೂರ್ತ ನಡೆದಿತ್ತು. ಹೊಂಬಾಳೆ ಫಿಲ್ಮ್ಸ್ ನ ಬಹುನಿರೀಕ್ಷಿತ ಚಿತ್ರವನ್ನು ಡಾ.ಸೂರಿ ನಿರ್ದೇಶನ ಮಾಡುತ್ತಿದ್ದು ಈ ಸಿನಿಮಾಕ್ಕೆ ನಿರ್ದೇಶಕ ಪ್ರಶಾಂತ್ ನೀಲ್ ಕಥೆ ಬರೆದಿದ್ದು ಈ ಬಘೀರ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ನಲ್ಲಿ ಶ್ರೀಮುರುಳಿ ಟಫ್ ರಗಡ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.

ವೆನ್ ಸೊಸೈಟಿ ಬೀಕಮ್ಸ್ ಎ ಜಂಗಲ್ಎಂಬ ಟ್ಯಾಗ್ ಲೈನ್ ಹೊಂದಿದೆ. ಇನ್ನು ಸಿನಿಮಾದ ಕಥೆಯಲ್ಲಿ ಬದಲಾವಣೆ ಮಾಡಬೇಕಾಗಿದ್ದ ಕಾರಣ ಬಘೀರ ಸಿನಿಮಾದ ಶೂಟಿಂಗ್ ಅರ್ಧಕ್ಕೆ ನಿಂತಿತ್ತು. ಹೀಗಾಗಿ ಉಗ್ರಂ ವೀರಂ ಸಿನಿಮಾದ ಶೂಟಿಂಗ್ ಆರಂಭಿಸಿದೆ ಎನ್ನಲಾಗಿತ್ತು. ಒಟ್ಟಿನಲ್ಲಿ ನಟ ಶ್ರೀ ಮುರುಳಿಯವರ ಬತ್ತಳಿಕೆಯಲ್ಲಿ ಕೆಲವು ಸಿನಿಮಾಗಳಿದ್ದು ಅಭಿಮಾನಿಗಳಿಗೆ ಇವರು ನಟಿಸುತ್ತಿರುವ ಸಿನಿಮಾದ ಬಗ್ಗೆ ಬಾರಿ ನಿರೀಕ್ಷೆಯಿದೆ ಎನ್ನಬಹುದು.