ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಸರ್ಕಾರೀ ಶಾಲೆಯ ಹುಡುಗನ ಜೊತೆ ಟೀಚರ್ ಡಾನ್ಸ್ ನೋಡಿ…ಚಿಂದಿ ಗುರು ವಿಡಿಯೋ

946

Teacher and student super dance: ಸಾಮಾನ್ಯವಾಗಿ ಮಕ್ಕಳು ಬಾಲ್ಯದಲ್ಲಿ ಹೆಚ್ಚಾಗಿ ಒಳ್ಳೆಯ ವಿಷಯಗಳನ್ನು ಕಲಿಯುವುದೇ ಅಪ್ಪ – ಅಮ್ಮನಿಂದ ಮತ್ತು ಅವರನ್ನು ಹೊರತು ಪಡಿಸಿದರೆ ಅವರ ಶಾಲೆಯಲ್ಲಿ ಅವರಿಗೆ ಅಕ್ಷರ ಕಲಿಸುವ ಶಿಕ್ಷಕರಿಂದ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಹೌದು ಶಾಲೆಯಲ್ಲಿ ಪಾಠ ಹೇಳಿ ಕೊಡುವುದರ ಜೊತೆಗೆ ಶಿಸ್ತನ್ನು ಸಹ ಹೇಳಿಕೊಡುವ ಶಿಕ್ಷಕ ಹಾಗೂ ಶಿಕ್ಷಕಿಯರನ್ನು ನಾವು ನೋಡಬಹುದು ಹಾಗೆಯೇ ಮಕ್ಕಳ ಜೊತೆ ಬೆರೆತು ನಗು ನಗುತಾ ಪಾಠ ಹೇಳಿಕೊಡುತ್ತಾ ತಮ್ಮ ವಿದ್ಯಾರ್ಥಿಗಳ ಜೊತೆಯಲ್ಲಿ ಅವರು ಮಕ್ಕಳಂತೆ ಆಟವಾಡುವ ಕೆಲವು ಶಿಕ್ಷಕರನ್ನು ಕೂಡ ನಾವು ನೋಡುತ್ತವೆ. ನಾವು ಚಿಕ್ಕವರಾಗಿದ್ದಾಗ ಶಾಲೆಯಲ್ಲಿ ನಮ್ಮ ಶಿಕ್ಷಕರೊಂದಿಗೆ ಇದ್ದಂತಹ ಒಡನಾಟ ಸಲುಗೆ ಎಲ್ಲವೂ ಭವಿಷ್ಯದಲ್ಲಿ ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಲ್ಲಿ ತುಂಬಾನೇ ಸಹಾಯಕವಾಗುತ್ತವೆ ಎಂದು ಹೇಳಬಹುದು.

ಇನ್ನು ಶಿಕ್ಷಕರು ಮಕ್ಕಳ ಜೀವನದ ಮೇಲೆ ಅಗಾಧವಾದ ಪ್ರಭಾವವನ್ನು ಬೀರುತ್ತಾರೆ ಮತ್ತು ಇಂದಿನ ಮಕ್ಕಳು ಭವಿಷ್ಯದಲ್ಲಿ ಯಾವ ರೀತಿಯ ಪ್ರಜೆಯಾಗಬೇಕು ಎಂಬುದನ್ನು ಕೂಡ ಮಕ್ಕಳಿಗೆ ತಿಳಿಸಿಕೊಡುತ್ತಾರೆ. ನಾವು ನಮ್ಮ ಶಾಲಾ ದಿನಗಳಲ್ಲಿ ನಮ್ಮ ನೆಚ್ಚಿನ ಶಿಕ್ಷಕರ ಜೊತೆಗೆ ಕಳೆದ ಆ ಸಮಯ ನಮಗೆ ಯಾವಾಗಲೂ ನೆನಪಿನಲ್ಲಿರುತ್ತದೆ.

ಹೌದು ಇಲ್ಲಿಯೂ ಸಹ ಒಬ್ಬ ಶಿಕ್ಷಕಿ ತನ್ನ ವಿದ್ಯಾರ್ಥಿ ಜೊತೆ ಮಾಡುತ್ತಿರುವ ಡ್ಯಾನ್ಸ್ ನೋಡಿಕೊಂಡು ಅವರು ಹೆಜ್ಜೆ ಹಾಕಿರುವ ಒಂದು ಮುದ್ದಾದ ವಿಡಿಯೋ ಒಳ್ಳೆಯ ಕಾರಣಕ್ಕೆ ಸಾಮಾಜಿಕ ಮಾಧ್ಯಮವಾದಲ್ಲಿ ತುಂಬಾನೇ ವೈರಲ್ ಆಗಿದೆ ನೋಡಿ. ಹೌದು ಜೋಗಿ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ್ದು ಶಿಕ್ಷಕಿ ಹಾಗೂ ವಿದ್ಯಾರ್ಥಿಯ ಡ್ಯಾನ್ಸ್ ವಿಡಿಯೋವನ್ನ ಲೇಖನಿಯ ಕೆಳಗೆ ನೋಡಬಹುದು.

ಇನ್ನು ಟ್ವಿಟ್ಟರ್‌ ಬಳಕೆದಾರರೊಬ್ಬರು ಈ ವಿಡಿಯೋ ನೋಡಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಈ ಪರಿಪೂರ್ಣ ಸಂಬಂಧವನ್ನು ನೋಡುವುದು ನಿಜಕ್ಕೂ ಶ್ಲಾಘನೀಯ. ನಿಮ್ಮ ಕರ್ತವ್ಯವನ್ನು ಅಷ್ಟು ಚೆನ್ನಾಗಿ ನಿಭಾಯಿಸುತ್ತಿರುವ ನಿಮಗೆ ಒಳ್ಳೆಯದಾಗಲಿ ಮೇಡಮ್ ಎಂದು ಕಾಮೆಂಟ್ ಮಾಡಿದ್ದು ಇನ್ನೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ನಾನು ಇಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಒಟ್ಟಿಗೆ ನೋಡುತ್ತಿದ್ದೇನೆ. ಇದು ತುಂಬಾನೇ ಮಧುರವಾಗಿದೆ ಮತ್ತು ನೀವು ಹುಡುಗಿಯೊಂದಿಗೆ ಡ್ಯಾನ್ಸ್ ಮಾಡಿದ ರೀತಿ ತುಂಬಾ ಸುಂದರವಾಗಿದೆ ಎಂದು ಬರೆದಿದ್ದಾರೆ.

ಇನ್ನು ಮತ್ತೊಬ್ಬ ಬಳಕೆದಾರರು ವಿಡಿಯೋ ನೋಡಿ ಶಿಕ್ಷಕಿ ತನ್ನ ವಿದ್ಯಾರ್ಥಿಯೊಂದಿಗೆ ಡ್ಯಾನ್ಸ್ ಮಾಡಿದ್ದನ್ನು ನೋಡಲು ತುಂಬಾ ಸುಂದರವಾಗಿದೆ. ತರಗತಿಯಲ್ಲಿ ಹೆಚ್ಚಿನ ಶಿಕ್ಷಕರು ಇದನ್ನು ಮಾಡಬೇಕೆಂದು ನಾನು ಬಯಸುತ್ತೇನೆ ಆಗಲೇ ಶಾಲೆಗಳಲ್ಲಿ ಮಕ್ಕಳು ಹೆಚ್ಚು ಸಂತೋಷದಿಂದ ಇರಲು ಸಾಧ್ಯವಾಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನು ಈ ಹಿಂದೆ ದೆಹಲಿಯ ಶಾಲೆಯಲ್ಲಿ ವಿದ್ಯಾರ್ಥಿನಿ ಜೊತೆ ಶಿಕ್ಷಕಿ ಡ್ಯಾನ್ಸ್ ಮಾಡಿದ ವಿಡಿಯೋ ಕೂಡ ವೈರಲ್ ಆಗಿತ್ತು. ಹೌದು ಆ ವಿಡಿಯೋವನ್ನು ಮನು ಗುಲಾಟಿ ಎಂಬ ಮಹಿಳೆ ಟ್ವಿಟ್ಟರ್‌ನಲ್ಲಿ ಹಂಚಿ ಕೊಂಡಿದ್ದು ನಾನು ದೆಹಲಿ ಸರ್ಕಾರಿ ಶಾಲೆಯ ಹೆಮ್ಮೆಯ ಶಿಕ್ಷಕಿ ಫುಲ್‌ಬ್ರೈಟ್ ಫೆಲೋ ಮತ್ತು ಪಿಎಚ್‌ಡಿ ಸ್ಕಾಲರ್ ಎಂದು ಅವರ ಬಯೋದಲ್ಲಿ ಬರೆಯಲಾಗಿತ್ತು. ಅವರು ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ 19,000 ಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದು ಜನರ ಮುಖದಲ್ಲಿ ನಗುವನ್ನು ತರುವಂತಹ ವಿಡಿಯೋಗಳನ್ನು ಮತ್ತು ಫೋಟೋಗಳನ್ನು ನಿಯಮಿತವಾಗಿ ಪೋಸ್ಟ್ ಮಾಡುತ್ತಾರೆ.

ಇನ್ನು ಡ್ಯಾನ್ಸ್ ಮಾಡಿದ್ದ ವಿಡಿಯೋ ಏಪ್ರಿಲ್ 25 ರಂದು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು ಮತ್ತು ಅಂದಿನಿಂದ ತಮ್ಮ ಸುಂದರವಾದ ಬಂಧವನ್ನು ಮೆಚ್ಚುವುದನ್ನು ನಿಲ್ಲಿಸಲು ಸಾಧ್ಯವಾಗದ ಜನರಿಂದ ಹಲವಾರು ಕಾಮೆಂಟ್‌ಗಳನ್ನು ಇದು ಗಳಿಸಿದೆ. ಇದು ಇಲ್ಲಿಯವರೆಗೆ 63 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದಿದೆ ಮತ್ತು 3,000ಕ್ಕೂ ಹೆಚ್ಚು ಲೈಕ್‌ಗಳನ್ನು ಈ ವಿಡಿಯೋ ಗಳಿಸಿದೆ.