ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಹಳ್ಳಿಮೇಷ್ಟ್ರೆ ಹಾಡು ಹಾಡಿದ ಲವ್ ಮಾಕ್ಟೇಲ್ ಖ್ಯಾತಿಯ ರಚನಾ..ಚಿಂದಿ ವಿಡಿಯೋ

31,212

ಲವ್ ಮಾಕ್‌ಟೇಲ್ ಸಿನಿಮಾದ ಮೂಲಕವಾಗಿ ಸ್ಯಾಂಡಲ್‌ವುಡ್ ಪ್ರವೇಶಿಸಿದ ನಟಿ ರಚನಾ ಇಂದರ್ ರವರು ಲವ್ ಮಾಕ್‌ಟೇಲ್ 2 ನಲ್ಲೂ ನಟಿಸಿದ್ದರು. 2022ರಲ್ಲಿ ನಿರ್ದೇಶಕ ನಟ ರಿಷಬ್ ಶೆಟ್ಟಿ ಅಭಿನಯದ ಹರಿಕಥೆ ಅಲ್ಲ ಗಿರಿಕಥೆ ಸಿನಿಮಾದಲ್ಲಿ ಕೂಡ ಕಾಣಿಸಿಕೊಂಡು ಮೆಚ್ಚುಗೆಗೆ ಪಾತ್ರರಾಗಿದ್ದು ಅದಾದ ಬಳಿಕ ಶಶಾಂಕ್ ನಿರ್ದೇಶನದ ಲವ್ 360 ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು.

ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್‌ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಚಿತ್ರದಲ್ಲಿ ನಟಿಯರಾದ ಅದಿತಿ ಪ್ರಭುದೇವ ಹಾಗೂ ಮೇಘಾ ಶೆಟ್ಟಿ ಕೂಡ ಇದ್ದಾರೆ. ಇನ್ನು ಎಂಬಿಎ ವ್ಯಾಸಂಗ ಮಾಡುತ್ತಿರುವ ರಚನಾ ರವರು ಅಸೈನ್‌ಮೆಂಟ್‌ಗಳನ್ನು ಸಲ್ಲಿಸುವುದರಲ್ಲಿ ಬ್ಯುಸಿಯಾಗಿದ್ದಾರೆ. ನಟನೆಯನ್ನು ವೃತ್ತಿಯಾಗಿ ತೆಗೆದುಕೊಳ್ಳುತ್ತಿರುವಾಗ ನಾನು ನನ್ನ ವ್ಯಾಸಂಗವನ್ನು ಪೂರ್ಣಗೊಳಿಸಬೇಕು ಎಂದು ನನ್ನ ಹೆತ್ತವರು ಷರತ್ತು ವಿಧಿಸಿದರು.

ನಾನು ಚಲನಚಿತ್ರೇತರ ಹಿನ್ನೆಲೆಯಿಂದ ಬಂದಿರುವ ಕಾರಣದಿಂದ ಅವರು ನನ್ನ ವಿದ್ಯಾಭ್ಯಾಸವನ್ನು ಬಿಟ್ಟುಕೊಡಲು ಬಯಸಲಿಲ್ಲ. ಹೀಗಾಗಿ ನಾನು ನನ್ನ ಅಧ್ಯಯನ ಮತ್ತು ಚಲನಚಿತ್ರಗಳಲ್ಲಿ ನನ್ನ ಶೇ 100 ರಷ್ಟು ಶ್ರಮವನ್ನು ನೀಡುತ್ತಿದ್ದೇನೆ ಎನ್ನುತ್ತಾರೆ.

ನಾನು ಶೂನ್ಯ ನಿರೀಕ್ಷೆಯೊಂದಿಗೆ ಚಿತ್ರರಂಗಕ್ಕೆ ಪ್ರವೇಶಿಸಿದ್ದು ಆದರೆ ನನ್ನ ವೃತ್ತಿಜೀವನವನ್ನು ಪ್ರಾರಂಭಿಸಲು ನನಗೆ ಅವಕಾಶ ಸಿಕ್ಕಿರುವುದಕ್ಕೆ ನನಗೆ ಖುಷಿಯಾಗಿದೆ. ಕೃಷ್ಣ ಮತ್ತು ರಿಷಬ್‌ ಶೆಟ್ಟಿ ಅವರಂತಹ ನಟರ ಜೊತೆಯಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿದ್ದು ಬಹಳ ಸಂತೋಷವಾಗಿದೆ.

ಶಶಾಂಕ್ ಅವರಂತಹ ಹೆಸರಾಂತ ನಿರ್ದೇಶಕರ ಜೊತೆಗೆ ಸೋಲೋ ಹೀರೋಯಿನ್ ಆಗಿ ಕೂಡ ಕೆಲಸ ಮಾಡುವ ಅವಕಾಶ ಸಿಕ್ಕಿತು. ಸದ್ಯ ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ಸಿನಿಮಾದ ಮೂಲಕ ಕಾಣಿಸಿಕೊಳ್ಳುತ್ತಿದ್ದೇನೆ ಎನ್ನುತ್ತಾರೆ ರಚನಾ.

ಇನ್ನು ತ್ರಿಬಲ್ ರೈಡಿಂಗ್ ಸಿನಿಮಾದ ಚಿತ್ರೀಕರಣದಲ್ಲಿ ಲವ್ ಮಾಕ್‌ಟೇಲ್‌ ನಂತರ ಪಾಲ್ಗೊಂಡಿದ್ದು ಯಾವುದೇ ಅಭ್ಯಾಸವಿಲ್ಲದೆ ಕ್ಷೇತ್ರಕ್ಕೆ ಬಂದಿದ್ದರಿಂದ ಆರಂಭದಲ್ಲಿ ಅವರು ಸ್ಥಳದಲ್ಲೇ ಡೈಲಾಗ್‌ಗಳನ್ನು ನೀಡುತ್ತಿದ್ದರಿಂದ ಭಯಭೀತಗೊಂಡಿದ್ದೆ.

ಹೌದು ಗಣೇಶ್ ಮತ್ತು ರಂಗಾಯಣ ರಘು ಅವರೊಂದಿಗೆ ನಟಿಸುತ್ತಿರುವುದು ಇದೇ ಮೊದಲಾಗಿದ್ದು ನನಗಿನ್ನು ಸ್ಟೇಜ್ ಫಿಯರ್ ಇರುವುದರಿಂದ ನನ್ನ ಸುತ್ತಲೂ ಜನರಿದ್ದಾಗ ನಾನು ಕಾನ್ಶಿಯಸ್ ಆಗುತ್ತೇನೆ. ಎಲ್ಲರೂ ನನ್ನನ್ನೇ ಗಮನಿಸುತ್ತಿದ್ದಾರೆ ಎಂದು ನಾನು ಭಾವಿಸಿದೆ ಮತ್ತು ನಾನು ಒಂದು ನಿಮಿಷ ಬ್ಲಾಂಕ್ ಆಗುತ್ತಿದ್ದೆ. ಆದರೆ ದಿನಕಳೆದಂತೆ ನಾನು ಕಂಫರ್ಟ್ ಆಗಿದ್ದೇನೆ ಎಂದು ಚಿತ್ರದಲ್ಲಿ ರಾಧಿಕಾ ಎಂಬ ಧೈರ್ಯಶಾಲಿ ಯುವತಿಯ ಪಾತ್ರದಲ್ಲಿ ನಟಿಸಿರುವ ರಚನಾ ಹೇಳಿದ್ದಾರೆ.

ಇನ್ನು ಲವ್ 360 ಹೊರತುಪಡಿಸಿ ಇತರೆ ಸಿನಿಮಾಗಳಲ್ಲಿ ಮಲ್ಟಿಸ್ಟಾರ್‌ಗಳ ಜೊತೆ ನಟಿಸಿರುವ ರಚನಾ ತ್ರಿಬಲ್ ರೈಡಿಂಗ್‌ನಲ್ಲಿ ದೊಡ್ಡ ತಾರಾಗಣವಿದ್ದರೂ ಕೂಡ ನಾನು ಬಹಳ ಮಹತ್ವದ ಪಾತ್ರವನ್ನು ನಿರ್ವಹಿಸುತ್ತೇನೆ. ನನ್ನ ಎಲ್ಲಾ ದೃಶ್ಯಗಳು ಗೋಲ್ಡನ್ ಸ್ಟಾರ್ ಜೊತೆಯಲ್ಲಿವೆ.

ಗಣೇಶ್ ಅವರು ಯಾವಾಗಲೂ ನಗುಮುಖದಲ್ಲಿರುತ್ತಾರೆ ಎಂದು ಹೇಳುತ್ತಾರೆ. ಈ ನಡುವ ರಚನಾರ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹೌದು ಸ್ಟಾರ್ ಸುವರ್ಣ ವಾಹಿನಿಯ ಗಾನಬಜಾನ ಕಾರ್ಯಕ್ರಮಕ್ಕೆ ಲವ್ ಮಾಕ್ಟೇಲ್ 2 ಚಿತ್ರತಂಡದೊಂದಿಗೆ ರಚನಾ ಭಾಗವಹಿಸಿದ್ದು ಈ ವೇಳೆ ಯಾವ ರೀತಿ ಮಸ್ತಿ ಮಾಡಿದ್ದಾರೆ ನೀವೆ ನೋಡಿ.