ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಧ್ರುವನ ಮದುವೆಗೆ ಬಂದು ಅಪ್ಪು ಮಾಡಿದ ಕಾಮಿಡಿ ನೋಡಿ…ಕ್ಯೂಟ್ ವಿಡಿಯೋ

1,504

Puneeth Rajkumar Dhruva Sarja Sweet Memorable Moment: ಸ್ಯಾಂಡಲ್‌ವುಡ್‌ ನಟ ಧ್ರುವ ಸರ್ಜಾ ಮತ್ತು ಪ್ರೇರಣಾ ದಂಪತಿಯ ಮಡಿಲಿಗೆ ಹೆಣ್ಣು ಮಗು ಆಗಮನವಾಗಿದ್ದು ಅಕ್ಟೋಬರ್ ೨ ರಂದು ಪ್ರೇರಣಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ತಾಯಿ ಮತ್ತು ಮಗಳು ಆರೋಗ್ಯವಾಗಿದ್ದಾರೆಂದು ಕುಟುಂಬ ತಿಳಿಸಿದೆ. ಪ್ರೇರಣಾ ಹೆರಿಗೆಗೆ ದಿನಾಂಕ ನಿಗದಿಯಾಗಿದ್ದರಿಂದ ಶೂಟಿಂಗ್‌ ಬದಿಗಿರಿಸಿ ಪತ್ನಿ ಜತೆಗಿದ್ದರು. ಅಕ್ಟೋಬರ್ ೧ ರಂದಯ ಪ್ರೇರಣಾಗೆ ಹೆರಿಗೆ ನೋವು ಕಾಣಿಸಿಕೊಳ್ಳುತ್ತಿದ್ದಂತೆ ಕೆ.ಆರ್‌ ರಸ್ತೆಯಲ್ಲಿರುವ ಅಕ್ಷ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ನಾರ್ಮಲ್‌ ಹೆರಿಗೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಖುಷಿಯ ವಿಚಾರವನ್ನು ನಟ ಧ್ರುವ ಸರ್ಜಾ ಸೋಷಿಯಲ್‌ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದು ಮನೆಗೆ ಮಗಳ ಆಗಮನವಾಗಿದೆ. ನಾರ್ಮಲ್‌ ಡೆಲಿವರಿಯಾಗಿದೆ. ಧನ್ಯವಾದಗಳು ಡಾಕ್ಟರ್‌. ಜೈ ಹನುಮಾನ್ ಎಂದು ಧ್ರುವ ಪೋಸ್ಟ್‌ ಮಾಡಿದ್ದರು. ಇತ್ತ ಅಭಿಮಾನಿ ವಲಯದಲ್ಲಿಯೂ ಕೂಧ ನೆಚ್ಚಿನ ನಟನ ಖುಷಿ ಸುದ್ದಿಗೆ ಸೋಷಿಯಲ್‌ ಮೀಡಿಯಾದಲ್ಲಿ ಶುಭಾಶಯಗಳ ಸುರಿಮಳೆಯೇ ಹರಿಯುತ್ತಿದೆ. 2019ರಲ್ಲಿ ನವೆಂಬರ್‌ 24ರಂದು ಈ ಜೋಡಿಯ ಮದುವೆಯಾಗಿತ್ತು.

ಇತ್ತೀಚೆಗಷ್ಟೇ ಅದ್ದೂರಿಯಾಗಿಯೇ ಸೀಮಂತ ಕಾರ್ಯವನ್ನೂ ಮಾಡಲಾಗಿತ್ತು. ಸದ್ಯ ಇದೀಗ ಧ್ರುವ ಹಾಗೂ ಪ್ರೇರಣಾ ರವರ ಮದುವೆ ವಿಡಿಯೋ ವೈರಲ್ ಆಗುತ್ತಿದ್ದು ಇದಕ್ಕೆ ಕಾರಣ ಪುನೀತ್ ರಾಜ್ ಕುಮಾರ್.ನಾಯಕ ನಟ ಧ್ರುವ ಸರ್ಜಾ ಹಾಗೂ ಬಾಲ್ಯ ಸ್ನೇಹಿತೆ ಪ್ರೇರಣಾ ಅವರ ವಿವಾಹ ಜೆ.ಪಿ.ನಗರದಲ್ಲಿ 2019 ರಲ್ಲಿ ಅದ್ಧೂರಿಯಾಗಿ ನೆರವೇರಿದ್ದು ಸಂಸ್ಕೃತಿ ಬೃಂದಾವನ ಕನ್ವೆಷನ್ ಹಾಲ್‌ನಲ್ಲಿ ನಡೆದ ವಿವಾಹ ಕಾರ್ಯಕ್ರಮಕ್ಕೆ ಚಿತ್ರರಂಗದ ಅನೇಕ ಗಣ್ಯರು ಆಗಮಿಸಿ ನವ ವಧು ವರರನ್ನು ಆಶೀರ್ವದಿಸಿದರು.

ಬಾಲ್ಯದಿಂದಲೂ ಇಬ್ಬರೂ ಸ್ನೇಹಿತರಾಗಿದ್ದು ಸ್ನೇಹ ಮದುವೆಯ ಹಂತಕ್ಕೆ ತಲುಪಿದಾಗ ಇಬ್ಬರ ಮನೆಯವರು ಒಪ್ಪಿ ವಿವಾಹ ನಿಶ್ಚಿತಾರ್ಥ ನಡೆದಿತ್ತು. ಇನ್ನು ವಿವಾಹದಲ್ಲಿ ಶಿವರಾಜ್ ಕುಮಾರ್ ರಾಘವೇಂದ್ರ ರಾಜ್ ಕುಮಾರ್ ಪುನೀತ್ ರಾಜ್ ಕುಮಾರ್ ದಂಪತಿ ರವಿಶಂಕರ್ ಹಿರಿಯ ನಟ ರಾಜೇಶ್ ಅರ್ಜುನ್ ಸರ್ಜಾ ಶರಣ್ ರಮೇಶ್ ಅರವಿಂದ್ ತರುಣ್ ಸುಧೀರ್ ಡಾಲಿ ಧನಂಜಯ್ ಶ್ರೀಮುರಳಿ ಸೃಜನ್ ಲೋಕೇಶ್ ವಿನಯ್ ರಾಜಕುಮಾರ್ ಸುಂದರ್ ರಾಜ್ ಪ್ರಮೀಳಾ ಜೋಷಾಯ್ ತಾರಾ ಹಾಗೂ ಇತರರು ಭಾಗವಹಿಸಿ ನವಜೋಡಿಗೆ ಶುಭಕೋರಿದರು. ಸದ್ಯ ಅಪ್ಪು ದಂಪತಿ ಶುಭ ಕೋರಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು ಧ್ರುವ ಮದುವರಯಲ್ಲಿ ಅಪ್ಪು ರವರ ಸುಂದರ ಕ್ಷಣಗಳನ್ನು ಕೆಳಗಿನ ವಿಡಿಯೋದಲ್ಲಿ ನೋಡಬಹುದು.