ಸಾಮಾನ್ಯವಾಗಿ ಈ ಚಿತ್ರರಂಗ ಎಂಬುದೇ ಹಾಗೆ. ಇಲ್ಲಿ ಯಾವ ಸಿನಿಮಾ ಗೆಲ್ಲುತ್ತದೆ ಹಾಗೂ ಯಾವ ಸಿನಿಮಾಗಳು ಸೋಲುತ್ತದೆ ಎಂದು ಹೇಳುವುದು ಬಹಳ ಕಷ್ಟ. ಕಠಿಣ ಪರಿಶ್ರಮ ವಹಿಸಿ ನಿರ್ದೇಶಕರು ಕಥೆ ತಯಾರು ಮಾಡಿದರೆ ಅಷ್ಟೇ ಕಠಿಣ ಪರಿಶ್ರಮ ವಹಿಸಿ ನಟರು ಚಿತ್ರಕ್ಕೆ ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಾರೆ.
ಇತ್ತ ಛಾಯಾಗ್ರಾಹಕರು ಕೂಡ ಎಷ್ಟು ವಿಭಿನ್ನವಾಗಿ ದೃಶ್ಯಗಳನ್ನು ತೆಗೆಯಬಹುದು ಎಂದು ಹಗಲು ರಾತ್ರಿ ತಲೆಕೆಡಿಸಿಕೊಳ್ಳುತ್ತಿದ್ದರೆ ಒಂದು ಹೊತ್ತಿನ ಕೂಲಿಗಾಗಿ ಲೈಟ್ ಮ್ಯಾನ್ ಸೇರಿದಂತೆ ಸಾಕಷ್ಟು ತಂತ್ರಜ್ಞರು ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುತ್ತಾರೆ. ಇನ್ನು ಇತ್ತ ಚಿತ್ರ ಚೆನ್ನಾಗಿ ಮೂಡಿ ಬರಲಿ ಎಂದು ನಿರ್ಮಾಪಕರು ಕೋಟಿ ಕೋಟಿ ಹಣವನ್ನು ಸುರಿದಿದ್ದು ಹಗಲು ರಾತ್ರಿ ಹಣ ಹಿಂತಿರುಗಿ ಬರುತ್ತದೆಯೇ ಎಂದು ಯೋಚನೆ ಮಾಡುತ್ತಿರುತ್ತಾರೆ. ಆದರೆ ಕೊನೆಯದಾಗಿ ಇವೆಲ್ಲವೂ ಪ್ರೇಕ್ಷಕರ ಮೇಲೆ ನಿಂತಿರುತ್ತದೆ ಎನ್ನಬಹುದು.
ಹೌದು ಪ್ರೇಕ್ಷಕರು ಯಾವ ಸಿನಿಮಾವನ್ನೂ ತೆಗೆದುಕೊಳ್ಳುತ್ತಾರೆ ಹಾಗೂ ಯಾವ ಸಿನಿಮಾವನ್ನೂ ಕೈಬಿಡುತ್ತಾರೆ ಎಂದು ಹೇಳುವುದು ಕಷ್ಟಸಾಧ್ಯ. ಕೆಲವೊಮ್ಮೆ ನವಿರಾದ ಪ್ರೇಮಕಥೆಗಳುಳ್ಳ ಸಿನಿಮಾಗಳು ಚಿತ್ರ ಹಾಗೂ ಚಿತ್ರದ ಕಥೆ ಬಹಳ ಅಚ್ಚುಕಟ್ಟಾಗಿದ್ದರೂ ಕೂಡ ಸೋಲುಗಳನ್ನು ಅನುಭವಿಸುತ್ತವೆ. ಇದಕ್ಕೆ ನಾನಾ ಕಾರಣಗಳು ಕೂಡ ಇರುತ್ತವೆ. ಉದಾಹರಣೆಗೆ ಪರಭಾಷಾ ಸಿನಿಮಾಗಳ ಹಾವಳಿ ಹೊಸಬರ ಸಿನಿಮಾವಾದರೆ ಚಿತ್ರಮಂದಿರಗಳಲ್ಲಿ ನಿಲ್ಲುವುದು ಕಷ್ಟ.
ಇನ್ನು ನಿಂತರೂ ಕೂಡಾ ಹೊಸಬರ ಸಿನಿಮಾವಾದರೆ ಚಿತ್ರಮಂದಿರಕ್ಕೆ ಪ್ರೇಕ್ಷಕರು ಬರಲು ಹಿಂದೆ ಮುಂದೆ ನೋಡುತ್ತಾರೆ. ಹೀಗೆ ನಾನಾ ಕಾರಣಗಳಿಂದಾಗಿ ಸಿನಿಮಾ ಸೋಲುತ್ತದೆ.ಇನ್ನೂ ಕೆಲವೊಮ್ಮೆ ಚಿತ್ರ ಅಷ್ಟಾಗಿ ಚೆನ್ನಾಗಿ ಇಲ್ಲದೇ ಹೋದರೂ ಸಹ ಸ್ಟಾರ್ ನಟ ಎಂಬ ಕಾರಣಕ್ಕೆ ಕೋಟಿ ಕೋಟಿ ಹಣ ಸಂಪಾದಿಸಿ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ. ಆದರೆ ಸಿನಿಮಾ ಸೋಲಲಿ ಗೆಲ್ಲಲಿ ಸಂಗೀತ ನಿರ್ದೇಶಕರಂತೂ ಸದಾ ಯಶಸ್ಸನ್ನೆ ಕಾಣುತ್ತಾರೆ ಎಂದೇ ಹೇಳಬಹುದು.
ಚಿತ್ರಗಳಿಗೆ ಕತೆ ಎಷ್ಟು ಮುಖ್ಯವಾಗಿರುತ್ತದೆ ಸಂಗೀತ ಸಹ ಅಷ್ಟೇ ಮುಖ್ಯವಾಗಿರುತ್ತದೆ. ಸಿನಿಮಾ ಚೆನ್ನಾಗಿ ಇಲ್ಲದೇ ಹೋದರೂ ಕೂಡ ಹಾಡುಗಳೇನಾದರೂ ಕೇಳುಗರಿಗೆ ಇಷ್ಟವಾದರೆ ಸಿನಿಮಾವನ್ನು ಅವರೇ ಗೆಲ್ಲಿಸಿಬಿಡುತ್ತಾರೆ. ಸಿನಿಮಾ ಬಿಡುಗಡೆಯಾಗುವ ಮುನ್ನವೇ ಹಾಡುಗಳನ್ನು ಬಿಡುಗಡೆ ಮಾಡಲಾಗುತ್ತದೆ. ಹೌದು ಈ ಸಮಯದಲ್ಲಿ ಹಾಡು ಗಳೇನಾದರೂ ಪ್ರೇಕ್ಷಕರಿಗೆ ಇಷ್ಟವಾದರೆ ತಮ್ಮದೇ ಆದ ಶೈಲಿಯಲ್ಲಿ ನೃತ್ಯ ಹಾಗೂ ಟಿಕ್ ಟಾಕ್ ನಂಥ ವೀಡಿಯೊಗಳನ್ನು ಮಾಡಿ ಹಾಡನ್ನು ವೈರಲ್ ಮಾಡಿಸಿ ಬಿಡುತ್ತಾರೆ. ಈಗೇನಾದರೂ ಹಾಡು ವೈರಲ್ ಆದರೆ ಸಿನಿಮಾ ಗೆದ್ದಂತೆಯೇ ಅರ್ಥ ಬಿಡಿ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ 2 ವರುಷಗಳಿಂದ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಹಾಡು ಎಂದರೆ ಮಳಯಾಳಂನ ಜಿಮ್ಕಿ ಕಮಲ್. ಈ ಹಾಡು ಯಾವ ಮಟ್ಟಕ್ಕೆ ವೈರಲ್ ಆಗಿತ್ತು ಎಂಬುದು ತಮಗೆ ತಿಳಿದಿದೆ. ಮೋಹನ್ ಲಾಲ್ ಅಭಿನಯದ ಸಿನಿಮಾದ ಇದಾಗಿದ್ದು ಜಿಮ್ಕಿ ಕಮಲ್ ಹಾಡು ಈಗಲೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದೆ. ಹಲವಾರು ಯುವಕರು ಹಾಗೂ ಯುವತಿಯರು ಈ ಹಾಡಿಗೆ ಹೆಜ್ಜೆ ಹಾಕುತ್ತಿದ್ದು ಇದೀಗ ಯುವತಿಯರ ಗ್ಯಾಂಗ್ ಒಂದು ಎಷ್ಟು ಅದ್ಭುತವಾಗಿ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ ನೀವೇ ನೋಡಿ.