ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಚಿರತೆ ಮಲಗಿದೆ ಎಂದು ರಕ್ಷಿಸಲು ಹೋದಾಗ ಏನಾಯ್ತು ನೋಡಿ…ವಿಡಿಯೋ

1,743

ಇತ್ತೀಚಿನ ದಿನಗಳಲಂತೂ ಅರಣ್ಯದಲ್ಲಿ ರೆಸಾರ್ಟ್‌ ನಿರ್ಮಿಸಿ ಪ್ರವಾಸೋದ್ಯಮ ಬೆಳೆಸುವುದೇ ಅಭಿವೃದ್ಧಿ ಎಂಬುದು ಅಧಿಕಾರಿಗಳಿಗೆ ಬಂದುಬಿಟ್ಟಿದೆ. ಅರಣ್ಯ ಪ್ರದೇಶ ದಿನೇ ದಿನೆ ಸಂಕುಚಿತವಾಗುತ್ತಿದ್ದು ಕೈಗಾರಿಕೆ ನಗರೀಕರಣಆರ್ಥಿಕ ಪ್ರಗತಿಯಿಂದ ಅರಣ್ಯಗಳ ಒತ್ತಡಗಳು ಹೆಚ್ಚಾಗಿ ಬಿಟ್ಟಿದೆ. ಹೌದು ಇದರಿಂದಸಗಿ ಪ್ರಾಣಿಗಳಿಗೆ ಆಹಾರ ನೀರು ಮತ್ತು ಸಂತಾನ ಅಭಿವೃದ್ಧಿಗೆ ಸ್ಥಳವಿಲ್ಲದಂತಾಗಿದ್ದು
ಅರಣ್ಯ ಪ್ರದೇಶ ಸಂಕುಚಿತವಾಗುತ್ತಿರುವುದೇ ದೊಡ್ಡ ಸಮಸ್ಯೆಯಾಗಿದೆ.

ಹೀಗಾಗಿ ಇವುಗಳ ಪರಿಣಾಮವೆಂಬಂತೆ ಪ್ರಾಣಿ ಮತ್ತು ಮಾನವ ಸಂಘರ್ಷ ದಿನೇ ದಿನೇ ಹೆಚ್ಚಾಗುತ್ತಿದ್ದು ಸುಮಾರು 30 ವರ್ಷಗಳಲ್ಲಿ ಪ್ರಾಣಿ ಹಾಗೂ ಮಾನವ ಸಂಘರ್ಷ ಹೆಚ್ಚಾಗಿದ್ದು ಅರಣ್ಯ ಇಲಾಖೆಯ ದಾಖಲೆಗಳು ಸ್ಪಷ್ಟವಾಗಿ ಇದನ್ನು ನೋಡಬಹುದು. ಹೌದು ಆದರೆ ದಿನದಿಂದ ದಿನಕ್ಕೆ ಈ ಸಂಘರ್ಷ ಹೆಚ್ಚಲು ಕಾರಣವೇನು? ಕಾಡುಪ್ರಾಣಿಗಳು ಕಾಡು ಬಿಟ್ಟು ನಾಡಿಗೆ ಏಕೆ ಬರುತ್ತಿವೆ? ಎಂಬ ಪ್ರಶ್ನೆಗೆ ಸುಲಭವಾಗಿ ಉತ್ತರ ಕೂಡ ಸಿಗುವುದಿಲ್ಲ. ಇನ್ನು ನಾಡಿಗೆ ಬರುವ ಪ್ರಾಣಿಗಳನ್ನು ಕಾಡಿಗೆ ಸ್ಥಳಾಂತರಿಸಬೇಕು ಎನ್ನುವುದೂ ಇದಕ್ಕೆ ಪರಿಹಾರವೂ ಅಲ್ಲ.

ಈ ಸಮಸ್ಯೆಗೆ ಉತ್ತರವನ್ನು ಹುಡುಕುತ್ತಾ ಹೋದರೆ ನೂರಾರು ಕಾರಣಗಳು ಸಿಗುತ್ತಿದ್ದು ಕಾಡುಪ್ರಾಣಿಗಳು ಸ್ಥಳದಿಂದ ಸ್ಥಳಕ್ಕೆ ಜೀವಿಗಳಿಂದ ಜೀವಿಗಳಿಗೆ ಬಹಳ ಭಿನ್ನವಾಗಿರುತ್ತವೆ. ಹೌದು ಮೂಲ ಕಾರಣಗಳನ್ನು ನೋಡುವುದಾದರೆ ಬಹುಶಃ ಗುಣಮಟ್ಟ ಕಳೆದುಕೊಳ್ಳುತ್ತಿರುವ ಕಾಡುಗಳು ಹಾಗೂ ಛಿದ್ರವಾಗುತ್ತಿರುವ ಅವುಗಳ ನೆಲೆ ಜೀವ ಸಂಕುಲದಲ್ಲಿ ಉಂಟಾಗುತ್ತಿರುವ ತಲ್ಲಣಗಳಿಂದ ಈ ಸಂಘರ್ಷಗಳು ಹೆಚ್ಚಾಗುತ್ತಿದೆ ಎಂದೇ ಹೇಳಬಹುದು. ಹೌದು ಅರಣ್ಯವೆಂಬುದು ಮೊದಲಿಗಿಂತಲೂ ಕೂಡ ಬಹಳ ದಟ್ಟವಾಗಿರುವಂತೆ ಕಂಡರೂ ಕೂಡ ಅಲ್ಲಿನ ಜೈವಿಕ ವೈವಿಧ್ಯ ಕದಡಿದೆ ಎಂದೇ ಹೇಳಬಹುದು.

ಇದನ್ನು ಕಾಡಿನ ಗುಣಮಟ್ಟ ಎಂದು ಕೂಡ ಹೇಳಲಾಗುತ್ತಿದ್ದು ಜಿಂಕೆ ಹುಲ್ಲು ತಿನ್ನುತ್ತದೆ ಎಂಬುದು ಪ್ರತಿಯೊಬ್ಬರಿಗೂ ತಿಳಿದಿದೆ. ಆದರೆ ಒಂದು ವರ್ಷದಲ್ಲಿ ಅದು ಏನೇನು ತಿನ್ನುತ್ತದೆ ಎಂದು ನೋಡುವುದಾದರೆ ಹುಲ್ಲಿನ ಜತೆಗೆ ಗಿಡ ಅದರ ಚಿಗುರು ಹಣ್ಣು ಕಾಯಿ ಒಣಗಿದ ಎಲೆ ಹೂವು ಎಲ್ಲವನ್ನೂ ಕೂಡ ತಿನ್ನುತ್ತದೆ. ಈ ಆಹಾರ ವೈವಿಧ್ಯತೆಗೆ ಈಗ ಭಂಗ ಬಂದಿದ್ದು ಇಲ್ಲಿ ಜಿಂಕೆ ಕೇವಲ ಉದಾಹರಣೆಯಷ್ಟೇ. ಮನುಷ್ಯ ಪ್ರವೇಶದಿಂದ ವೈವಿಧ್ಯ ನಾಶವಾಗಿ ಬಿಟ್ಟಿದೆ. ಜೊತೆಗೆ ಪ್ರಾಣಿಗಳ ಸಂಖ್ಯೆ ಹೆಚ್ಚಾಗಿದೆ. ಗುಣಮಟ್ಟವಿಲ್ಲದ ಕಾಡಿನಲ್ಲಿ ಅವು ಬದುಕು ನೂಕುವುದು ಸವಾಲಾಗಿ ಪರಿಣಮಿಸಿದೆ.

ಇದೇ ಕಾರಣದಿಂದಾಗಿ ಮನುಷ್ಯರು ಹೇಗೆ ಕಾಡನ್ನು ನಾಶ ಮಾಡುತ್ತಿದ್ದರು ಅದೇ ರೀತಿ ಕಾಡಿನ ಪ್ರಾಣಿಗಳು ನಾಡಿಗೆ ನುಗ್ಗಿ ನಾಡನ್ನು ನಾಶ ಮಾಡುತ್ತಿದೆ. ಇನ್ನೂ ಪ್ರಾಣಿಗಳು ಅರಣ್ಯ ಬಿಟ್ಟು ಊರಿಗೆ ಬರುತ್ತಿವೆ ಎಂದು ಹೇಳುವುದು ಅಷ್ಟು ಸರಿಯಾದ ವಾಚ್ಯವಲ್ಲ ಯಾಕೆಂದರೆ ಚಿರತೆಯಂತಹ ಪ್ರಾಣಿಗಳು ಈ ಮೊದಲು ನಗರದಿಂದ ಬರೋಬ್ಬರಿ 10 ರಿಂದ 15 ಕಿಲೊ ಮೀಟರ್‌ ವ್ಯಾಪ್ತಿಯಲ್ಲೇ ಇರುತ್ತಿದ್ದವು. ಆದರೆ ಇದೀಗ ನಗರದೊಳಗೇನೇ ನುಗ್ಗುತ್ತಿವೆ.

ಹೀಗಿರುವಾಗ ಅವು ಯಾವುದೋ ಕಾಡಿನಿಂದ ಊರಿಗೆ ಬಂದವೆಂದು ಹೇಳುವುದು ಹೇಗೆ? ಮಾಧ್ಯಮಗಳ ಸುದ್ದಿ ಸ್ಫೋಟದಿಂದ ಪ್ರಾಣಿಗಳ ಬಗ್ಗೆ ಮಾನವ ಭಯಭೀತನಾಗುವುದರ ಜೊತೆಗೆ ಅವುಗಳ ಬಗ್ಗೆ ದ್ವೇಷದ ಮನೋಭಾವವನ್ನೂ ಬೆಳೆಸಿಕೊಂಡಿದ್ದು ವನ್ಯಜೀವಿಗಳ ಸಂರಕ್ಷಣಾ ಕಾರ್ಯಕ್ಕೆ ತೊಡಕಾಗುವ ಸಾಧ್ಯತೆಗಳೇ ಹೆಚ್ಚು. ಹೌದು ಹೀಗಾಗಿ ಇಂತಹ ಸಂದರ್ಭಗಳಲ್ಲಿ ಮಾಧ್ಯಮಗಳು ಹೆಚ್ಚು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕಿದ್ದು ಚಿರತೆ ತಾನೇ ತಾನಾಗಿ ಎಂದಿಗೂ ಕೂಡ ದಾಳಿ ಮಾಡಿರುವುದಿಲ್ಲ. ಆದರೆ ಪ್ರಕಟವಾಗುವ ಸುದ್ದಿ ಮಾತ್ರ ಚಿರತೆ ದಾಳಿ ಎಂದೇ ಉಲ್ಲೇಖಿಸಲಾಗುತ್ತದೆ.

ಇತ್ತೀಚಿಗಷ್ಟೆ ಶಾಲೆಗೆ ನುಗ್ಗಿದ ಚಿರತೆಯೂ ತಾನಾಗೇಯೇ ಎಂದೂ ದಾಳಿ ಮಾಡಲಿಲ್ಲ. ಅದನ್ನು ಹಿಡಿಯಲು ಹೂಡಿದ ತಂತ್ರ ಕೈಕೊಟ್ಟಿದ್ದರಿಂದ ಅವಾಂತರಕ್ಕೆ ಅವಕಾಶವಾಯಿತು. ಬಹುತೇಕ ಆಕಸ್ಮಿಕವಾಗಿ ಜರುಗುವ ಘಟನೆಗಳಿಗೆ ದಾಳಿ ಹಣೆಪಟ್ಟಿ ಕಟ್ಟುವ ಕೆಲಸ ಆಗುತ್ತಲೇ ಇದೆ. ಸದ್ಯ ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನಾಡಿಗೆ ನುಗ್ಗಿರುವ ಚಿರತೆ ಹಿಡಿದ ಅರಣ್ಯಾಧಿಕಾರಿಗಳು ಸುರಕ್ಷಿತವಾಗಿ ಕಾಡಿಗೆ ಮತ್ತೆ ಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು ನೀವು ಕೂಡ ಈ ಒಮ್ಮೆ ಈ ವಿಡಿಯೋ ವೀಕ್ಷಿಸಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ.