ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಬುಲೆಟ್ ಟ್ರೈನ್ ಗೆ ಆಕ್ಸಿಡೆಂಟ್ ಆದರೆ ಏನಾಗುತ್ತೆ ನೋಡಿ…ಚಿಂದಿ ವಿಡಿಯೋ

11,464
Join WhatsApp
Google News
Join Telegram
Join Instagram

ರೈಲಿನಲ್ಲಿ (Train) ಪ್ರಯಾಣಿಸುವುದು ಬಹಳ ಸುಖ ಹಾಗೂ ನೆಮ್ಮದಿಯಾಗಿರುತ್ತದೆ. ಆದರೆ ರೈಲು ಅಪಾಘಾತ ನೋಡಿದರೆ ನಿಜಕ್ಕೂ ಎದೇ ಝಲ್ ಎನಿಸುತ್ತದೆ. ಇಂದು ಸ್ಪೈನ್ ನಲ್ಲಿ (Spain) ನಡೆದ ಬೀಕರ ಅಪಘಾತದ ಬಗ್ಗೆ ತಿಳಿಸುತ್ತೆವೆ ಬನ್ನಿ.ಗಾಲಿಸಿಯಾದ ಉತ್ತರ ಭಾಗದಲ್ಲಿ ಸ್ಯಾಂಡಿಯಾಗೋ ಡಿ ಕಾಂಪೋಸ್ಟೆಲಾ
(Santiago de Compostela in the northern part of Galicia) ಭೀಕರ ರೈಲು ಅಪಘಾತದಲ್ಲಿ 77 ಜನರು ಅಸುನೀಗಿದ್ದು ನೂರಾರು ಜನರು ಗಾಯಗೊಂಡಿದ್ದರು.

ಇನ್ನು 73 ಪ್ರಯಾಣಿಕರು ಸ್ಥಳದಲ್ಲಿಯೇ ಪ್ರಾಣ ಕಳೆದುಕೊಂಡಿದ್ದು ನಾಲ್ವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು ಎಂದು ಗಾಲಿಸಿಯಾ ಸುಪ್ರೀಂ ಕೋರ್ಟ್‌ನ (Supreme Court) ವಕ್ತಾರೆ ತಿಳಿಸಿದ್ದರು. ರೈಲು ಮ್ಯಾಡ್ರಿಡ್ ನಿಂದ(Madrid) ಹೊರಟು ಫೆರೋಲ್ (Ferrol)ನಗರಕ್ಕೆ ಹೊರಟಿತ್ತು.

ಇನ್ನು ವೇಗವಾಗಿ ಸಾಗುತ್ತಿದ್ದ ರೈಲು ಹಳಿ ತಪ್ಪಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಇದು ಭಯೋತ್ಪಾದಕರ ಕೃತ್ಯವಿರಬಹುದು ಎಂಬ ಊಹಾಪೋಹವನ್ನು ಅಧಿಕಾರಿಗಳು ತಳ್ಳಿಹಾಕಿದ್ದರು. ಇನ್ನು 2004ರಲ್ಲಿ ಇದೇ ಮ್ಯಾಡ್ರಿಡ್ ನಲ್ಲಿ ಉಗ್ರರು ರೈಲು ಸ್ಫೋಟಿಸಿದ್ದರಿಂದ 191 ಪ್ರಯಾಣಿಕರು ಅಸುನೀಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಅಪಘಾತ ಎಷ್ಟು ಭೀಕರವಾಗಿತ್ತೆಂದರೆ ಕೆಲ ಬೋಗಿಗಳು ತಲೆಕೆಳಗಾಗಿದ್ದರೆ ಕೆಲವು ಒಂದರ ಮೇಲೆಂದು ಹತ್ತಿವೆ. ರೈಲಿನಲ್ಲಿ 247 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಸಂತ ಜೇಮ್ಸ್ ಉತ್ಸವದ ಹಿಂದಿನ ದಿನವೇ ಈ ದುರ್ಘಟನೆ ಸಂಭವಿಸಿದ್ದು ಹಬ್ಬದ ಮೇಲೆ ಕರಾಳ ಛಾಯೆ ಮೂಡಿತ್ತು. ಈ ಉತ್ಸವದಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಪ್ರಯಾಣಿಕರು ಗಾಲಿಸಿಯಾ ಪಟ್ಟಣಕ್ಕೆ ರೈಲಿನ ಮುಖಾಂತರ ಆಗಮಿಸುತ್ತಿದ್ದರು.

ಇನ್ನು ಎರಡನೇ ಬೋಗಿಗೆ ಬೆಂಕಿ ಹತ್ತಿಕೊಂಡಿತ್ತು. ಬೋಗಿಯ ಕೆಳಗಡೆ ಹಲವಾರು ಜನರು ಸಿಲುಕಿಕೊಂಡಿದ್ದರು. ಕೆಲ ಬೋಗಿಗಳಲ್ಲಿ ಕಪ್ಪು ಹೊಗೆ ಆವರಿಸಿಕೊಂಡಿತ್ತು. ಹಲವು ಪ್ರಯಾಕಣಿಕರ ಗುರುತು ಕೂಡ ಸಿಗದಂತೆ ನಜ್ಜುಗುಜ್ಜಾಗಿದ್ದಾರೆ. ದುರ್ಘಟನೆಗೆ ಸ್ಯಾಂಡಿಯಾಗೋ ಡಿ ಕಾಂಪೋಸ್ಟೆಲಾ ನಗರದವರೇ ಆದ ಸ್ಪೇನ್ ಪ್ರಧಾನಿ ಮರಿಯಾನೋ ರಾಜೋಯ್