ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಸುದೀಪ್ ಗೆ ಅಭಿನಯ ಹೇಳಿಕೊಟ್ಟ ರಾಜಮೌಳಿ..ಚಿಂದಿ ವಿಡಿಯೋ

215
Join WhatsApp
Google News
Join Telegram
Join Instagram

ನಟ ಕಿಚ್ಚ ಸುದೀಪ್ (Kiccha Sudeep) ಎಂಥ ಪ್ರತಿಭಾವಂತ ನಟ ಎಂಬುದು ತಮಗೆಲ್ಲರಿಗೂ ಗೊತ್ತು. ಹೀರೋ (Hero) ವಿಲನ್ (Vilan) ಪಾತ್ರ ಯಾವುದೇ ಆಗಿರಲಿ ತೆರೆಮೇಲೆ ಆ ಪಾತ್ರವನ್ನು ಅದ್ಭುತವಾಗಿ ನಿಭಾಯಿಸುವ ಕಲೆ ಸುದೀಪ್‌ಗೆ ಸಿದ್ಧಿಸಿದೆ. ಇನ್ನು ಅಂದಹಾಗೆ ಸುದೀಪ್‌ ಕರಿಯರ್‌ಗೆ ತಿರುವು ಕೊಟ್ಟ ಸಿನಿಮಾಗಳಲ್ಲಿ ರಾಜಮೌಳಿ (Rajamouli) ನಿರ್ದೇಶನದ ಈಗ(Eega) ಕೂಡ ಒಂದು. ಅದರಲ್ಲಿ ಸುದೀಪ್ ವಿಲನ್ ಪಾತ್ರ ಮಾಡಿದ್ದರು. ಸುದೀಪ್‌ ಅವರ ನಟನಾಕೌಶಲ್ಯದ ಬಗ್ಗೆ ಇಡೀ ಪ್ರಪಂಚವೇ ಹಾಡಿ ಹೋಗಳಿತ್ತು.

ಕಳೆದ ನವೆಂಬರ್ ನಲ್ಲಿ ಅಮೆರಿಕ (America) ಪ್ರವಾಸದಲ್ಲಿದ್ದ ರಾಜಮೌಳಿ ಅಲ್ಲಿ ಒಂದು ಸಂವಾದದಲ್ಲಿ ಭಾಗಿಯಾಗಿದ್ದರು. ಹೌದು ಆಗ ರಾಜಮೌಳಿ ಅವರನ್ನು ಸಂದರ್ಶನ (Interview) ಮಾಡುತ್ತಿದ್ದ ವ್ಯಕ್ತಿ ಈಗ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಸುದೀಪ್ ಅವರ ನಟನೆ ಬಗ್ಗೆ ಅದ್ಭುತ ಮಾತುಗಳನ್ನಾಡುತ್ತಾರೆ. ಅಲ್ಲಿ ವಿಲನ್ ಪಾತ್ರ ಮಾಡಿರುವ ಸುದೀಪ್ ಎದುರು ಹೀರೋ ಕೂಡ ಇರುವುದಿಲ್ಲ. ಆದರೂ ಅವರು ತಮ್ಮ ಪಾತ್ರವನ್ನು ಬಹಳ ಉತ್ತಮವಾಗಿ ನಿಭಾಯಿಸಿದ್ದು ಅದೊಂದು ಅದ್ಭುತ ಪ್ರದರ್ಶನ ಎಂದೆಲ್ಲ ಹೊಗಳಿದ್ದಾರೆ.

ನೀವು ಕಲ್ಪಿಸಿಕೊಳ್ಳಿ ನಿಮ್ಮ ಸುತ್ತ ಒಂದು ನೋಣ ತೊಂದರೆ ಮಾಡುತ್ತಿದೆ. ಆದರೆ ನಿಮಗೆ ಅದು ಕಾಣಿಸೋಲ್ಲ. ಆದರೂ ನೀವು ನಟಿಸಬೇಕು ಮತ್ತು ಆ ನೋಣ ನೀವು ಊಹಿಸಿದಂತೆ ಇರುವುದಿಲ್ಲ. ಬದಲಿಗೆ ನಾನು ಊಹಿಸಿದಂತೆ ಇರುತ್ತದೆ. ಅದು ಮತ್ತಷ್ಟು ಕಠಿಣವಾದ ಟಾಸ್ಕ್ ಆಗಿರುತ್ತದೆ. ಇಂತಹ ಒಂದು ಪಾತ್ರವನ್ನು ಸುದೀಪ್ ಅದ್ಭುತವಾಗಿ ನಿಭಾಯಿಸಿದರು. ಬಹುಶಃ ನಿರ್ದೇಶಕರ ತಲೆಯಲ್ಲಿ ಏನಿದೆ ಎಂಬುದನ್ನು ಅರ್ಥ ಮಾಡಿಕೊಂಡು ಆ ರೀತಿ ಕೆಲಸ ಮಾಡುವ ಶಕ್ತಿಯನ್ನು ಸುದೀಪ್ ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಇನ್ನು 10 ವರ್ಷಗಳ ಹಿಂದೆ ತೆರೆಕಂಡ ಈಗ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಸಂಚಲನವನ್ನೇ ಮಾಡಿತ್ತು. ಹೌದು ಆ ಸಿನಿಮಾವನ್ನುಬ ಕೇವಲ 1 ಕೋಟಿ ಬಜೆಟ್‌ನಲ್ಲಿ ಮಾಡಬೇಕು ಎಂದು ರಾಜಮೌಳಿ ನಿರ್ಧಾರ ಮಾಡಿದ್ದರಂತೆ. ಕೊನೆಗೆ ಅದು 30 ಕೋಟಿ ರೂ. ದಾಟಿತ್ತು.

ಆದರೆ ಅದರ ಕಲೆಕ್ಷನ್‌ ನೂರಾರು ಕೋಟಿ ಆಗಿತ್ತು. ಸುದೀಪ್ ವಿಲನ್ ಆಗಿ ಕಾಣಿಸಿಕೊಂಡರೆ ನಾಯಕಿಯಾಗಿ ಸಮಂತಾ (Samanta) ಇದ್ದರು. ಚಿತ್ರದಲ್ಲಿ ನಾನಿ (Nanni) ಹೀರೋ ಆಗಿದ್ದರೂ ಅವರು ತೆರೆಮೇಲೆ ಕಾಣಿಸಿಕೊಳ್ಳುವುದು 20 ನಿಮಿಷ ಮಾತ್ರ. ಸದ್ಯ ಈ ಸಿನಿಮಾ ಮೇಕಿಂಗ್ ವಿಡಿಯೋ ಬಿಡುಗಡೆ ಆಗಿದ್ದು ಸುದೀಪ್ ಹೇಗೆ ಅದ್ಬುತವಾಗಿ ನಟನೆ ಮಾಡಿದ್ದರು ನೀವೆ ನೋಡಿ.