ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಗೌಡ್ರ ಹುಡುಗನ ಜೊತೆ ಮದುವೆ ಎಂದ ರಚಿತರಾಮ್…ಚಿಂದಿ ವಿಡಿಯೋ

990
Join WhatsApp
Google News
Join Telegram
Join Instagram

ಕನ್ನಡ ಚಿತ್ರರಂಗದಲ್ಲಿ (Kannada Filim Industry) ಮದುವೆ (Marriage) ಸಂಭ್ರಮ ಜೋರಾಗಿರುವುದರಿಂದ ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ವಿವಾಹದ ಬಗ್ಗೆ ಅಭಿಮಾನಿಗಳಿಗೆ ಸಹಜವಾಗಿ ಕುತೂಹಲ ಇದ್ದೇ ಇದೆ. ಹೌದು ಅದರಲ್ಲೂ ರಚಿತಾ ರಾಮ್ ಈ ಹಿಂದೆ ರಾಜಕಾರಣಿಯೊಬ್ಬರನ್ನು (Politician) ಮದುವೆ ಆಗ್ತಾರಂತೆ ಎಂಬ ಅಂತೆ-ಕಂತೆ ರೆಕ್ಕೆ-ಪುಕ್ಕ ಕಟ್ಟಿಕೊಂಡು ಗಾಂಧಿನಗರದಲ್ಲಿ (Gandhinagar) ಹಾರಾಡಿದ ಮೇಲೆ ಆ ಯುವ ಪೊಲಿಟೀಷಿಯನ್ ಯಾರಿರಬಹುದು ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿತ್ತು. ಇದೇ ಕಾರಣಕ್ಕೆ ರಚಿತಾ ರಾಮ್ ಎಲ್ಲೇ ಸಿಕ್ಕರೂ ಮದುವೆ ಯಾವಾಗ.? ಹುಡುಗ ಯಾರು.? ಎಂಬ ಪ್ರಶ್ನೆ ಪತ್ರಕರ್ತರಿಂದ ತೂರಿ ಬರುತ್ತಲೇ ಇತ್ತು ಸದ್ಯ ಈಗಲೂ ಬರುತ್ತಲೇ ಇದೆ ಎನ್ನಬಹುದು.

ಇನ್ನು ರಚಿತಾ ರಾಮ್ ಹೆಸರು ನಿಖಿಲ್ ಕುಮಾರ ಸ್ವಾಮಿ (Nikhil Kumara Swamy) ಅವರ ಜೊತೆ ಕೇಳಿಬಂದಾಗ ಇದಕ್ಕು ಪುಷ್ಠಿ ಎಂಬಂತೆ ಹಲವು ಘಟನೆಗಳು ನಡೆದಿದ್ದವು. ಅಲ್ಲದೇ ಇಬ್ಬರು ಗುಟ್ಟಾಗಿ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದ್ದು ಸೀತಾರಾಮ ಕಲ್ಯಾಣ (Sita Rama Kalyana) ಚಿತ್ರದ ಪ್ರಚಾರದ ಸಮಯದಲ್ಲಿ ಮಾತನಾಡಿದ್ದ ರಚಿತಾ ರಾಮ್ ನಾನು ಯಾರನ್ನೂ ಲವ್ ಮಾಡ್ತಿಲ್ಲ. ಸದ್ಯಕ್ಕೆ ಸಿನಿಮಾಗಳಲ್ಲಿ ಬಿಜಿ ಇದ್ದೇನೆ ಎಂದು ಈಗಾಗಲೇ ಹಲವು ಬಾರಿ ನಟಿ ರಚಿತಾ ರಾಮ್ ಕಡ್ಡಿತುಂಡು ಮಾಡಿದ ಹಾಗೆ ಹೇಳಿದ್ದರು.

ಆದರೂ ಕೂಡ ಪದೇ ಪದೇ ಮದುವೆ ಬಗ್ಗೆಯೇ ಪ್ರಶ್ನೆ ಕೇಳಿಬರುತ್ತಿರುವುದರಿಂದ ನಾನು ಲವ್ ಮ್ಯಾರೇಜ್ ಗೂ (Love Marriage) ಸೈ ಅರೇಂಜ್ಡ್ ಮ್ಯಾರೇಜ್ ಗೂ (Arrange Marriage) ಸೈ. ನಾವು ಗೌಡ್ರಾಗಿರೋದ್ರಿಂದ ಗೌಡರ ಹುಡುಗನನ್ನೇ ಮದುವೆ ಆಗುವುದು ಅಂತ ರಚಿತಾ ರಾಮ್ ಹೇಳಿದ್ದರು. (ವಿಡಿಯೋ ಲೇಖನಿಯ ಕೆಳಿಗಿದೆ) ಬಹುತೇಕ ಮಂದಿ ರಚ್ಚು ನಿಖಿಲ್ ನ ಮದುವೆಯಾಗುತ್ತಾರೆ ಎಂದಿಕೊಂಡಿದ್ದರು. ಹೌದು ಆದರೆ ನಿಖಿಲ್ ಆರೆಂಜ್ ಮ್ಯಾರೆಜ್ ಆಗುವ ಮೂಲಕ ವಂದತಿಯನ್ನ ಸುಳ್ಳು ಮಾಡಿದರು.

ಸದ್ಯ ರಚಿತಾ ಚಿತ್ರರಂಗದ ಬೇಡಿಕೆಯ ನಟಿಯಾಗಿದ್ದು ಮಾನ್ಸೂನ್ ರಾಗ (Mansoon Raaga) ಚಿತ್ರದಲ್ಲಿ ರಚಿತಾ ರಾಮ್ ಆ ರೀತಿಯ ಕಾರ್ಯಕರ್ತೆಯ ಪಾತ್ರದಲ್ಲಿಯೇ ಅಭಿನಯಿಸಿದ್ದರು. ಡಾಲಿ ಧನಂಜಯ್ (Dhananjay) ಈ ಚಿತ್ರದಲ್ಲಿ ರಚಿತಾ ರಾಮ್ ಗೆ ಜೋಡಿಯಾಗಿ ಅಭಿನಯಿಸಿದ್ದರು. ಇವರ ವಿಭಿನ್ನ ಲವ್ ಸ್ಟೋರಿಗೆ ಜನ ಮೆಚ್ಚಿಕೊಂಡರು. ಇನ್ನು ಮಾನ್ಸೂನ್ ರಾಗದ ರಚಿತಾ ರಾಮ್ ಪಾತ್ರದ ಬೆನ್ನಲ್ಲಿಯೇ ಮತ್ತೊಂದಷ್ಟು ಸಿನಿಮಾಗಳನ್ನೂ ರಚಿತಾ ಒಪ್ಪಿಕೊಂಡಿದ್ದಾರೆ. ಶಬರಿ ಇನ್​ ಸರ್ಚ್ ಆಫ್ ರಾವಣ (Shabari In Search Of Ravana) ಅನ್ನೋ ಸಿನಿಮಾವನ್ನ ಕೂಡ ರಚಿತಾ ಒಪ್ಪಿಕೊಂಡಿದ್ದಾರೆ. ರಚಿತಾ ರಾಮ್ ಇಲ್ಲಿ ಶಬರಿ ಯಾಗಿಯೇ ಕಾಣಿಸಿಕೊಳ್ಳುತ್ತಿದ್ದು ಈ ಚಿತ್ರದ ಪೋಸ್ಟರ್​ ಈಗಾಗಲೇ ರಿಲೀಸ್ ಆಗಿದೆ.