ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಇವರಿಬ್ಬರೂ ಹೀಗೆ ಡ್ಯಾನ್ಸ್ ಮಾಡುತ್ತಾರೆ ಅಂದುಕೊಂಡಿರಲಿಲ್ಲ…ಚಿಂದಿ ವಿಡಿಯೋ

191
Join WhatsApp
Google News
Join Telegram
Join Instagram

ಹಿಂದಿ(Hindi) ಕಿರುತೆರೆ ಲೋಕದಲ್ಲಿ ಸಾಮಾನ್ಯವಾಗಿ ಡಾನ್ಸ್ ರಿಯಾಲಿಟಿ ಶೋಗಳಲ್ಲಿ(Dance Reality Shoe) ನಿರೂಪಕನಾಗಿ (Anchor) ಎಲ್ಲರನ್ನು ನಗೆಗಡಲಲ್ಲಿ ತೇಲಿಸುತ್ತಿರುವ ನಟನೆಂದರೆ ರಾಘವ್ ಜುಯಾಲ್ (Raghav Juyal) ರವರು.

ಹೌದು ಹಲವು ಡಾನ್ಸ್ ರಿಯಾಲಿಟಿ ಶೋಗಳಲ್ಲಿ ಹೋಸ್ಟ್ ಆಗಿ ಕಾರ್ಯನಿರ್ವಹಿಸುತ್ತಿರುವ ರಾಘವ್ ಎಲ್ಲರ ಫೇವರಿಟ್ (Favourite) ಆಗಿದ್ದು ರಾಘವ ಕೇವಲ ಡಾನ್ಸ್ ರಿಯಾಲಿಟಿ ಶೋಗಳ ನಿರೂಪಕನಲ್ಲ ಬದಲಾಗಿ ಅದ್ಭುತ ಡಾನ್ಸರ್ (Dancer). ಹೌದು ಇವರ ಸ್ಲೋ ಮೋಶನ್ ಡಾನ್ಸ್ ನೋಡಿ ವಾವ್ ಎನ್ನದೇ ಇರುವವರಿಲ್ಲ. ಎನ್ನಬಹುದು. ಕಿಂಗ್ ಆಫ್ ಸ್ಲೋ ಮೋಶನ್ (King of Slow Motion) ಪಟ್ಟ ಕೂಡ ರಾಘವ್‌ಗೆ ಸಲ್ಲುತ್ತದೆ.

ಇನ್ನು ಗಂಭೀರವಾಗಿ ನಿರೂಪಣೆ ಮಾಡುತ್ತ ಸಾಗಿದರೆ ಈಗಿನ ಕಾಲದಲ್ಲಿ ಯಾರು ನೋಡುತ್ತಾರೆ.
ಹೇಳಿ? ಕನ್ನಡದಲ್ಲೂ ಕೂಡ ಕಾಮಿಡಿ ಮಾಡುತ್ತ ಕಾಲೆಳೆಯುತ್ತ ಕಾರ್ಯಕ್ರಮ ನಡೆಸಿಕೊಂಡು ಹೋಗುವ ನಿರೂಪಕರಿಗೆ ಹೆಚ್ಚಿನ ಬೇಡಿಕೆಯಿದ್ದು ರಾಘವ್ ಎಲ್ಲಿ ಇರುತ್ತಾರೋ ಅಲ್ಲಿ ನಗು ತುಂಬಿ ತುಳುಕುತ್ತಿರುತ್ತದೆ. ಹಲವು ಡಾನ್ಸ್ ಸಂಬಂಧಿತ ಸಿನಿಮಾಗಳಲ್ಲಿ ರಾಘವ್ ನಟಿಸಿದ್ದು ಇವರ ಡಾನ್ಸ್ ನೋಡಿ ಸಲ್ಮಾನ್ ಖಾನ್ (Salman Khan) ಹೃತಿಕ್ ರೋಷನ್ (Hrithik Roshan) ಮುಂತಾದವರು ತಲೆಬಾಗಿದ್ದಾರೆ. ಬಾಲಿವುಡ್‌ನ ಎಲ್ಲ ಸೆಲೆಬ್ರಿಟಿಗಳಿಗೂ ಇವರ ಪರಿಚಯವಿದೆ.

ರಾಘವ್ ಹೇಗೆ ಒಳ್ಳೆಯ ನಿರೂಪಕರಾಗಿ ಗುರುತಿಸಿಕೊಂಡರು? ಎಂದು ಕೇಳಬಹುದು. ಇನ್ನು ಇದಕ್ಕೆ ಮುಖ್ಯ ಕಾರಣ ಅವರ ಕಾಮಿಡಿ ಟೈಮಿಂಗ್. ಹೌದು ಹಾಸ್ಯ ಹುಟ್ಟಿಸುವುದು ಸುಲಭವಿಲ್ಲ. ಯಾರು ಏನೇ ಮಾತನಾಡಿದರೂ ಅದಕ್ಕೆ ಇನ್ನೊಂದು ಕೌಂಟರ್ ಕೊಟ್ಟು ಎಂತವರ ಮುಖದಲ್ಲೂ ನಗು ತರಿಸುವ ಶಕ್ತಿ ರಾಘವ್‌ಗಿದೆ. ರಾಘವ್ ಕಾಮಿಡಿಗೆ ಈ ನಟ-ನಟಿಯರು ಬಿದ್ದು ಬಿದ್ದು ನಕ್ಕಿರುವ ಉದಾಹರಣೆಗಳು ಸಾಕಷ್ಟಿವೆ. ಪ್ರತಿಯೊಬ್ಬರೂ ರಾಘವ್ ಅವರ ಹಾಸ್ಯವನ್ನು ಮನಸಾರೆ ಮೆಚ್ಚುತ್ತಾರೆ.

ಸದ್ಯ ಒಂದರ ಮೇಲೊಂದರಂತೆ ಯಶಸ್ಸು ಗಳಿಸುತ್ತಿರುವ ರಾಘವ್ ಜುಯಾಲ್ ರವರು ಕಳೆದ ವರುಷ ಅಂತ್ಯದಲ್ಲಿ ಹೊಸ ಅತಿಥಿಯನ್ನು ಬರಮಾಡಿಕೊಂಡಿದ್ದರು. ಹೌದು ರಾಘವ್ ಜುಯಾಲ್ ಹೊಚ್ಚ ಹೊಸ BMW X5 ಕಾರು ಖರೀದಿಸಿದ್ದಾರೆ. ಹೌದು ಕಿಂಗ್ ಆಫ್ ಸ್ಲೋಮೋಶನ್ ಎಂದೇ ಗುರುತಿಸಿಕೊಂಡಿರುವ ರಾಘಲ್ ಜುಯಾಲ್ ರವರು ಬರೋಬ್ವರಿ 1 ಕೋಟಿ ರೂಪಾಯಿ ಮೌಲ್ಯದ BMW X5 ಕಾರು ಖರೀದಿಸಿದ್ದಾರೆ.

ಇನ್ನು ಕಾರು ಶೋರೂಂನಿಂದ ಸಂತಸದಿಂದ ಕಾರು ಡೆಲಿವರಿ ಪಡೆದುಕೊಂಡ ರಾಘವ್ ಜುಯಾಲ್‌ಗೆ ಹೂವಿನ ಗುಚ್ಚ ನೀಡಿ BMW ಕುಟುಂಬಕ್ಕೆ ಸ್ವಾಗತಿಸಲಾಯಿತು. ಇದೀಗ ಸಾಮಾಜಿಕ ಜಾಲತಾಣದಲ್ಲಿ ರಾಘವ ಮೊದಲ ಬಾರಿಗೆ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ನಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ ಹೇಗೆ ಸ್ಲೋ ಮೋಷನ್ ಪರ್ಫಾರ್ಮೆನ್ಸ್ ಕೊಟ್ಟಿದ್ದರು ನೀವೆ ನೋಡಿ.