ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಗಟ್ಟಿಮೇಳ ಸಿದ್ದು ಪ್ರಿಯಾ ಮದುವೆಯಲ್ಲಿ ಪಾರು ನಟ ಶರತ್…ಚಿಂದಿ ವಿಡಿಯೋ

832
Join WhatsApp
Google News
Join Telegram
Join Instagram

ಗಟ್ಟಿಮೇಳ (Gattimela) ಧಾರಾವಾಹಿಯ ಪ್ರಿಯಾ (Priya J Achar) ಮತ್ತು ಪಾರು (Paru) ಧಾರಾವಾಹಿಯ ಸಿದ್ದು (Siddu Mulimane) ಸದ್ಯ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ (Social Media) ಮದುವೆಯ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿದೆ. ಹೌದು ಕನ್ನಡ ಕಿರುತೆರೆ ಸೆಲೆಬ್ರಿಟಿ ಲವ್ ಬರ್ಡ್ಸ್‌ (Love Birds) ಪ್ರಿಯಾ ಆಚಾರ್ ಮತ್ತು ಸಿದ್ದು ಮೂಲಿಮನಿ ಇದೇ ತಿಂಗಳು ಫೆಬ್ರವರಿ 12ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದುಬೆಂಗಳೂರಿನ(Banglore) ಐಷಾರಾಮಿ ರೆಸಾರ್ಟ್‌ನಲ್ಲಿ ಮದುವೆಯಾಗಿರುವ (Marriage) ಈ ಜೋಡಿಗೆ ಆಶೀರ್ವಾದ ಮಾಡಲು ಕಿರುತೆರೆ ಮತ್ತು ಬೆಳ್ಳಿ ತೆರೆ ಸೆಲೆಬ್ರಿಟಿಗಳು ಆಗಮಿಸಿದ್ದರು.

ಇನ್ನು ಸುಮಾರು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಕಳೆದ ವರುಷ ನವೆಂಬರ್ ತಿಂಗಳಿನಲ್ಲಿ ಗುರು ಹಿರಿಯರು ಒಪ್ಪಿಗೆ ಪಡೆದು ನಿಶ್ಚಿತಾರ್ಥ (Engagement) ಮಾಡಿಕೊಂಡರು. ಇದೀಗ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ಪ್ರಿಯಾ ಮೂಲತಃ ದಾವಣಗೆರೆಯವರು (Davangere) ಆಗಿರುವ ಕಾರಣ ಫೆ.12 ಬೆಂಗಳೂರಿನಲ್ಲಿ ಮದುವೆ ಮಾಡಿಕೊಂಡು 14ರಂದು ದಾವಣಗೆರೆ ಹಮ್ಮಿಕೊಂಡಿದ್ದರು.ಇನ್ನು ಮೆಹೇಂದಿ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಿದ್ದು ಡಿಸೈನರ್‌ ವೇರ್‌ ಗ್ರೀನ್ ಡ್ರೆಸ್‌ ಧರಿಸಿ ಪ್ರಿಯಾ ಸ್ನೇಹಿತರ ಜೊತೆ ಮಿಂಚಿದ್ದಾರೆ.

ಇನ್ನು ರೆಸಾರ್ಟ್‌ನಲ್ಲಿ ಎರಡು ಕುಟುಂಬವರು ಸೇರಿಕೊಂಡು ಅರಿಶಿಣ ಶಾಸ್ತ್ರ ಮಾಡಿದ್ದು ಸ್ನೇಹಿತರು ಮತ್ತು ಕುಟುಂಬಸ್ಥರು ಹಳದಿ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಇನ್ನು ತಾಳಿ ಕಟ್ಟಿಸಿಕೊಂಡ ನಂತರ ಪ್ರಿಯಾ ಸಿದ್ದು ಅವರಿಗೆ ಮುತ್ತಿಟ್ಟಿರುವ ಫೋಟೋ ಮತ್ತು ಸಿದ್ದು ಪ್ರಿಯಾ ಅವರಿಗೆ ಮುತ್ತಿಟ್ಟಿರುವ ಫೋಟೋ ಅಪ್ಲೋಡ್ ಮಾಡಿ ಮಿಸ್‌ ಟು ಮಿಸೆಸ್‌ ಎಂದು ಬರೆದುಕೊಂಡಿದ್ದಾರೆ. ಇನ್ನು ಗೋಲ್ಡ್‌ ಬಣ್ಣ ರೇಶ್ಮೆ ಸೀರಿಯಲ್ಲಿ ಪ್ರಿಯಾ ಮಿಂಚಿದ್ದು ಕ್ರೀಮ್ ಬಣ್ಣದ ರೇಶ್ಮೆ ಪಂಚೆ-ಶೆಲ್ಯೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ವಿಡಿಯೋ ವೈರಲ್ ಆಗಿದ್ದು ಪ್ರಿಯಾ ಸಿದ್ದು ಮದುವೆಯಲ್ಲಿ ಪಾರು ನಟ ಶರತ್ (Sharath) ದಂಪತಿ ಹೇಗೆ ಕಾಣಿಸಿಕೊಂಡಿದ್ದಾರೆ ನೋಡಿ.