ತಮಗೆ ನೆನಪಿರಬಹುದು ದಶಕದ ಹಿಂದೆ ಅಂದರೆ 2014 ರ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಾಲ್ಕನೇ ಸೀಸನ್ ನ (CCL Season 4) ಪಂದ್ಯಾವಳಿಯ ಆರಂಭಕ್ಕೆ ಇಡೀ ಕರುನಾಡಲ ಸಿನಿ ಅಭಿಮಾನಿಗಳು ಬಹಳಾನೇ ಕಾತುರದಿಂದ ಕಾದಿದ್ದರು.ಆ ಸೀಸನ್ ನ ಮೊದಲನೇ ಪಂದ್ಯ (First Match) ಹಾಲಿ ಚಾಂಪಿಯನ್ ಕರ್ನಾಟಕ ಬುಲ್ಡೋಜರ್ಸ್ (Karnataka Bulldozer’s) ತಂಡ ಬೆಂಗಾಳ್ ಟೈಗರ್ಸ್ (Bengal Tigers) ತಂಡವನ್ನು ಎದುರಿಸುವ ಸಮಯವಾಗಿತ್ತು. ಇನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium Banglore) ಜನವರಿ 26 2014 ರಂದು ಈ ಪಂದ್ಯ ನಡೆದಿದ್ದು ಕರ್ನಾಟಕ ಬುಲ್ಡೋಜರ್ಸ್ ರೋಚಕವಾಗಿ ಜಯವನ್ನ ಸಾಧಿಸಿತ್ತು.
ಇನ್ನು ಸಿಸಿಎಲ್ (CCL) ಟೂರ್ನಿ ಕರ್ನಾಟಕದಲ್ಲಿ(Karnataka) ಅಷ್ಟರಮಟ್ಟಿಗೆ ರಂಗು ಏರಿಸಿಕೊಳ್ಳಲು ಮುಖ್ಯ ಕಾರಣವೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ರವರು ಸೇರ್ಪಡೆಯಾಗಿದ್ದು. ನಟ ದಚ್ಚು ಅವರ ಸೇರ್ಪಡೆ ತಂಡದ ಬಲವನ್ನು ಮತ್ತಷ್ಟು ಹೆಚ್ಚಿಸಿದ್ದು ತಂಡದಲ್ಲಿ ಓಪನಿಂಗ್ ಬ್ಯಾಟ್ಸ್ ಮನ್ (Opening Batsmen) ಆಗಿ ಕಣಕ್ಕಿಳಿಯುತ್ತಾರೆ ಎಂಬ ನಿರೀಕ್ಷೆಯೂ ಸಹ ಎಲ್ಲರಲ್ಲಿಯೂ ಇತ್ತು. ಸ್ವತಃ ಈ ವಿಚಾರವನ್ನು ಸುದೀಪ್ ರವರೇ ಸಿಸಿಎಲ್ ಓಪನಿಂಗ್ ಸೆರೆಮನಿಯಲ್ಲಿ ಕೂಡ ತಿಳಿಸಿದ್ದರು .
ಮೊದಲ ಮೂರು ಸಿಸಿಎಲ್ ಸೀಸನ್ ಗಳಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕ ಮತ್ತು ವಿಕೆಟ್ ಕೀಪರ್ ಆಗಿದ್ದ ಕಿಚ್ಚ ಸುದೀಪ್ ಅವರೇ ಓಪನರ್ ಆಗಿ ಕಣಕ್ಕಿಳಿಯುತ್ತಿದ್ದು ಅಂತೆಯೇ ನಾಲ್ಕನೇ ಸೀಸನ್ ನಲ್ಲಿಯೂ ಸುದೀಪ್ ಓಪನಿಂಗ್ ಮಾಡುತ್ತಿದ್ದು ಆ ಬಾರಿ ತಮ್ಮ ಕುಚಕು ದರ್ಶನ್ ಅವರನ್ನು ಸಹ ಕಣಕ್ಕಿಳಿಸುತ್ತಿರುವುದು ವಿಶೇಷವಾಗಿತ್ತು. ಇನ್ನು ದರ್ಶನ್ ಜೊತೆ ಸುದೀಪ್ ಸಹ ಓಪನರ್ ಆಗಿ ಕ್ರೀಸ್ ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿತ್ತು.
ಈ ವಿಚಾರ ತಿಳಿದ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿ ಪಟ್ಟಿದು ದರ್ಶನ್ ಹಾಗೂ ಸುದೀಪ್ ಇಬ್ಬರನ್ನೂ ಒಂದೇ ಸ್ಕ್ರೀನ್ ನಲ್ಲಿ ನೋಡುವುದಕ್ಕೆ ಕಾದು ಕುಳಿತಿದ್ದರು. ಆದರೆ ಅವರ ನಿರೀಕ್ಷೆ ಹುಸಿಯಾಗಿದ್ದು ಪಿಚ್ ನ ಅನುಸಾರವಾಗಿ ದರ್ಶನ್ ರವರನ್ನು ಆರಂಭಿಕ ಬ್ಯಾಟಿಂಗ್ ಕಳುಹಿಸುವ ಬದಲು ಮಧ್ಯಮ ಕ್ರಮಾಂಕದಲ್ಲಿ ಕಳಿಸಿದ್ದರು. ಹೌದು ಅಂತೆಯೇ ದರ್ಶನ್ ರವರು ಮೊದಲ ಭಾರಿಗೆ ಬ್ಯಾಟ್ ಬೀಸುತ್ತಿರುವುದನ್ನು ನೋಡಿದ ಅಭಿಮಾನಿಗಳ ಸಂತೋಷ ಮುಗಿಲು ಮುಟ್ಟಿತ್ತು. ಆ ಅದ್ಬುತ ಕ್ಷಣವನ್ನು ಲೇಖನಿ ಕೆಳಗಿನ ವಿಡಿಯೋದಲ್ಲಿ ನೋಡಬಹುದು.