ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಬಾವಿಯಲ್ಲಿದ್ದ ಚಿರತೆ ರಕ್ಷಿಸಲು ಹೋದ ಯುವಕ…ಮುಂದಾಗಿದ್ದೆ ಬೇರೆ ವಿಡಿಯೋ

2,555

ಇತ್ತೀಚಿನ ದಿನಗಳಲಂತೂ ಅರಣ್ಯದಲ್ಲಿ ರೆಸಾರ್ಟ್‌( A Resort in the Wilderness) ನಿರ್ಮಿಸಿ ಪ್ರವಾಸೋದ್ಯಮ (Tourism)
ಬೆಳೆಸುವುದೇ ಅಭಿವೃದ್ಧಿ ಎಂಬುದು ಅಧಿಕಾರಿಗಳ ತನಗೆ ಬಂದುಬಿಟ್ಟಿದೆ. ಅರಣ್ಯ ಪ್ರದೇಶ ದಿನೇ ದಿನೆ ಸಂಕುಚಿತವಾಗುತ್ತಿದ್ದು ಕೈಗಾರಿಕೆ(Industry)ನಗರೀಕರಣ ಆರ್ಥಿಕ ಪ್ರಗತಿಯಿಂದ ಅರಣ್ಯಗಳ ಒತ್ತಡಗಳು ಹೆಚ್ಚಾಗಿ ಬಿಟ್ಟಿದೆ.

ಹೌದು ಇದರಿಂದಸಗಿ ಪ್ರಾಣಿಗಳಿಗೆ ಆಹಾರ(Food for animals)ನೀರು ಮತ್ತು ಸಂತಾನ ಅಭಿವೃದ್ಧಿಗೆ ಸ್ಥಳವಿಲ್ಲದಂತಾಗಿದ್ದು ಅರಣ್ಯ ಪ್ರದೇಶ ಸಂಕುಚಿತವಾಗುತ್ತಿರುವುದೇ ದೊಡ್ಡ ಸಮಸ್ಯೆಯಾಗಿದ್ದು ಹೀಗಾಗಿ ಇವುಗಳ ಪರಿಣಾಮವೆಂಬಂತೆ ಪ್ರಾಣಿ ಮತ್ತು ಮಾನವ ಸಂಘರ್ಷ(Animal and Human Conflict)ದಿನೇ ದಿನೇ ಹೆಚ್ಚಾಗುತ್ತಿದೆ ಎಂದೇ ಹೇಳಬಹುದು.ಸುಮಾರು 30 ವರ್ಷಗಳಲ್ಲಿ ಪ್ರಾಣಿ ಹಾಗೂ ಮಾನವ ಸಂಘರ್ಷ ಹೆಚ್ಚಾಗಿದ್ದು ಅರಣ್ಯ ಇಲಾಖೆಯ ದಾಖಲೆಗಳು ಸ್ಪಷ್ಟವಾಗಿ ಇದನ್ನು ನೋಡಬಹುದು.

ಆದರೆ ದಿನದಿಂದ ದಿನಕ್ಕೆ ಈ ಸಂಘರ್ಷ ಹೆಚ್ಚಲು ಕಾರಣವೇನು? ಕಾಡುಪ್ರಾಣಿಗಳು ಕಾಡು ಬಿಟ್ಟು ನಾಡಿಗೆ ಏಕೆ ಬರುತ್ತಿವೆ? ಎಂಬ ಪ್ರಶ್ನೆಗೆ ಸುಲಭವಾಗಿ ಉತ್ತರ ಕೂಡ ಸಿಗುವುದಿಲ್ಲ. ನಾಡಿಗೆ ಬರುವ ಪ್ರಾಣಿಗಳನ್ನು ಕಾಡಿಗೆ ಸ್ಥಳಾಂತರಿಸಬೇಕು ಎನ್ನುವುದೂ ಇದಕ್ಕೆ ಪರಿಹಾರವೂ ಅಲ್ಲ.

ಈ ಸಮಸ್ಯೆಗೆ ಉತ್ತರವನ್ನು ಹುಡುಕುತ್ತಾ ಹೋದರೆ ನೂರಾರು ಕಾರಣಗಳು ಸಿಗುತ್ತವೆ. ಹೌದು ಕಾಡುಪ್ರಾಣಿಗಳು ಸ್ಥಳದಿಂದ ಸ್ಥಳಕ್ಕೆ ಜೀವಿಗಳಿಂದ ಜೀವಿಗಳಿಗೆ ಬಹಳ ಭಿನ್ನವಾಗಿರುತ್ತವೆ. ಇನ್ನು ಮೂಲ ಕಾರಣಗಳನ್ನು ನೋಡುವುದಾದರೆ ಬಹುಶಃ ಗುಣಮಟ್ಟ ಕಳೆದುಕೊಳ್ಳುತ್ತಿರುವ ಕಾಡುಗಳು ಹಾಗೂ ಛಿದ್ರವಾಗುತ್ತಿರುವ ಅವುಗಳ ನೆಲೆ ಜೀವ ಸಂಕುಲದಲ್ಲಿ ಉಂಟಾಗುತ್ತಿರುವ ತಲ್ಲಣಗಳಿಂದ ಈ ಸಂಘರ್ಷಗಳು ಹೆಚ್ಚಾಗುತ್ತಿದೆ ಎಂದೇ ಹೇಳಬಹುದು.

ಅರಣ್ಯವೆಂಬುದು ಮೊದಲಿಗಿಂತಲೂ ಕೂಡ ಬಹಳ ದಟ್ಟವಾಗಿರುವಂತೆ ಕಂಡರೂ ಕೂಡ ಅಲ್ಲಿನ ಜೈವಿಕ ವೈವಿಧ್ಯ ಕದಡಿದೆ ಎಂದೇ ಹೇಳಬಹುದು. ಇದನ್ನು ಕಾಡಿನ ಗುಣಮಟ್ಟ ಎಂದು ಕೂಡ ಹೇಳಲಾಗುತ್ತಿದೆ. ಜಿಂಕೆ ಹುಲ್ಲು ತಿನ್ನುತ್ತದೆ ಎಂಬುದು ಪ್ರತಿಯೊಬ್ಬರಿಗೂ ತಿಳಿದಿದೆ.

ಆದರೆ ಒಂದು ವರ್ಷದಲ್ಲಿ ಅದು ಏನೇನು ತಿನ್ನುತ್ತದೆ ಎಂದು ನೋಡುವುದಾದರೆ ಹುಲ್ಲಿನ ಜತೆಗೆ ಗಿಡ ಅದರ ಚಿಗುರು ಹಣ್ಣು ಕಾಯಿ ಒಣಗಿದ ಎಲೆ ಹೂವು ಎಲ್ಲವನ್ನೂ ಕೂಡ ತಿನ್ನುತ್ತದೆ. ಈ ಆಹಾರ ವೈವಿಧ್ಯತೆಗೆ ಈಗ ಭಂಗ ಬಂದಿದ್ದು ಇಲ್ಲಿ ಜಿಂಕೆ ಕೇವಲ ಉದಾಹರಣೆಯಷ್ಟೇ. ಮನುಷ್ಯ ಪ್ರವೇಶದಿಂದ ವೈವಿಧ್ಯ ನಾಶವಾಗಿ ಬಿಟ್ಟಿದೆ. ಜತೆಗೆ ಪ್ರಾಣಿಗಳ ಸಂಖ್ಯೆ ಹೆಚ್ಚಾಗಿದೆ. ಗುಣಮಟ್ಟವಿಲ್ಲದ ಕಾಡಿನಲ್ಲಿ ಅವು ಬದುಕು ನೂಕುವುದು ಸವಾಲಾಗಿ ಪರಿಣಮಿಸಿದೆ.

ಇದೇ ಕಾರಣದಿಂದಾಗಿ ಮನುಷ್ಯರು ಹೇಗೆ ಕಾಡನ್ನು ನಾಶ ಮಾಡುತ್ತಿದ್ದರು ಅದೇ ರೀತಿ ಕಾಡಿನ ಪ್ರಾಣಿಗಳು ನಾಡಿಗೆ ನುಗ್ಗಿ ನಾಡನ್ನು ನಾಶ ಮಾಡುತ್ತಿದೆ. ಇನ್ನೂ ಪ್ರಾಣಿಗಳು ಅರಣ್ಯ ಬಿಟ್ಟು ಊರಿಗೆ ಬರುತ್ತಿವೆ ಎಂದು ಹೇಳುವುದು ಅಷ್ಟು ಸರಿಯಾದ ವಾಚ್ಯವಲ್ಲ ಯಾಕೆಂದರೆ ಚಿರತೆಯಂತಹ ಪ್ರಾಣಿಗಳು ಈ ಮೊದಲು ನಗರದಿಂದ ಬರೋಬ್ಬರಿ 10 ರಿಂದ 15 ಕಿಲೊ ಮೀಟರ್‌ ವ್ಯಾಪ್ತಿಯಲ್ಲೇ ಇರುತ್ತಿದ್ದವು. ಆದರೆ ಇದೀಗ ನಗರದೊಳಗೇ ನುಗ್ಗುತ್ತಿವೆ. ಆದರೆ ಹೀಗೆ ಬಂದ ಚಿರತೆ ಪಾಳು ಬಾವಿಗೆ ಬಿದ್ದಿದ್ದು ಆದರೆ ಇಲ್ಲಿ ಯುವಕನೊಬ್ಬ ಪ್ರಾಣ ಒತ್ತೆಯಿಟ್ಟು ರಕ್ಷಣಗೆ ಮುಂದಾಗಿದ್ದಾನೆ. ನಂತರ ಏನಾಯ್ತು ಗೊತ್ತಾ? ವಿಡಿಯೋ ನೋಡಿ.