ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಸುಮಲತಾ ಮೂಗಿಗೆ ಕೇಕ್ ಅಂಟಿಸಿದ ಅಭಿಷೇಕ್ …ಕ್ಯೂಟ್ ವಿಡಿಯೋ

1,113

ನಮ್ಮ ಕನ್ನಡ ಚಿತ್ರರಂಗದ (Kannada Filim Industry) ಕಲಿಯುಗದ ಕಾರಣ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ (Rebel Star Ambreesh) ರವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗವನ್ನು(Fans Following) ಹೊಂದಿದ್ದರು. ಮಂಡ್ಯದ ಗಂಡು ಎನ್ನುವುದಾಗಿ ಮಂಡ್ಯದ(Mandya) ಜನತೆ ಅಂಬರೀಶ್ ಅವರನ್ನು ಪ್ರೀತಿಯಿಂದ ಕರೆಯುತ್ತಿದ್ದರು. ಹೌದು ಅವರ ಅಗಲಿಕೆ ಎನ್ನುವುದು ಅವರ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ಬೇಸರ ಮತ್ತು ದುಃಖವನ್ನು ಉಂಟು ಮಾಡಿತ್ತು.

ಆದರೆ ಅವರ ನಂತರ ಅವರ ಮಗ ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ (Junior Rebel Star Abhishek Ambreesh) ರವರು ಈಗ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಇನ್ನುವಿದೇಶದಲ್ಲಿ (Foreign) ವಿದ್ಯಾಭ್ಯಾಸವನ್ನು(Educatin) ಪೂರೈಸಿ ಬಂದಂತಹ ಅಭಿಷೇಕ್ ಅಂಬರೀಶ್ ಅವರು ಅಮರ್ (Amar( ಸಿನಿಮಾದ ಮೂಲಕ ನಾಯಕನಟನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಾರೆ.

ಈ ಸಿನಿಮಾದಲ್ಲಿ ಅಭಿಷೇಕ್ ಅಂಬರೀಶ್ ಅವರಿಗೆ ತಾನ್ಯಾ(Taanya) ಅವರು ನಾಯಕಿಯಾಗಿ( Heroine) ಕಾಣಿಸಿಕೊಂಡು ಸಿನಿಮಾ ಕೂಡ ಕೊಂಚಮಟ್ಟಿಗೆ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು.ಇದಾದ ನಂತರ ಸದ್ಯಕ್ಕೆ ಈಗ ಅಭಿಷೇಕ್ ಅಂಬರೀಶ್ (Abhishek Ambreesh) ಅವರು ಸುಕ್ಕ ಸೂರಿ(Suri) ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಬ್ಯಾಡ್ ಮ್ಯಾನರ್ಸ್ (Bad Manners) ಸಿನಿಮಾದಲ್ಲಿ ಖಡಕ್ ಖಾಕಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಜನರ ಮನಸ್ಸನ್ನು ಗೆಲ್ಲಲು ಸಿದ್ಧತೆಯನ್ನು ನಡೆಸಿಕೊಂಡಿದ್ದಾರೆ. ಇನ್ನು ಕಳೆದ ವರುಷ ಅಕ್ಟೋಬರ್ ಮೂರರಂದು ಅಭಿಷೇಕ್ ಅಂಬರೀಶ್ ಅವರು ತಮ್ಮ ಜನ್ಮದಿನವನ್ನು (Birthday) ಆಚರಿಸಿಕೊಂಡ ಸಂದರ್ಭದಲ್ಲಿ ಮಾಧ್ಯಮಗಳ ಎದುರು ಸುಮಲತಾ ಅಂಬರೀಶ್ ಅವರು ಒಂದು ಮಾತನಾಡಿ ಮದುವೆ ವಿಚಾರ ಹಂಚಿಕೊಂಡಿದ್ದರು.

ಅದರಂತೆಯೇ ಡಿಸೆಂಬರ್ ನಲ್ಲಿ ರೆಬೆಲ್ ಸ್ಟಾರ್ ಅಂಬರೀಶ್‌ ಮತ್ತು ಸಂಸದೆ ಸುಮಲತಾ(Sumalatha) ಅವರ ಪುತ್ರ ಅಭಿಷೇಕ್ ಅಂಬರೀಶ್ ಅವರ ನಿಶ್ಚಿತಾರ್ಥ(Engagement) ಅವಿವಾ ಬಿದ್ದಪ್ಪ ( Aviva Biddappa) ಜೊತೆ ಅದ್ಧೂರಿಯಾಗಿ ನೆರವೇರಿತು. ಹೌದು ಬೆಂಗಳೂರಿನ ಐಷಾರಾಮಿ ಹೋಟೆಲ್‌ನಲ್ಲಿ ಅಭಿಷೇಕ್‌ ಮತ್ತು ಅವಿವಾ ಎಂಗೇಜ್ಮೆಂಟ್‌ ಅದ್ಧೂರಿಯಾಗಿ ನಡೆದಿದ್ದು ಕುಟುಂಬಸ್ಥರ ಮಧ್ಯ ಸೈಲೆಂಟ್ ಆಗಿ ನಿಶ್ಚಿತಾರ್ಥ ನೆರವೇರಿದೆ.

ಖ್ಯಾತ ಡಿಸೈನರ್ ಪ್ರಸಾದ್ ಬಿದ್ದಪ್ಪ (Prasadh Bidappa) ಪುತ್ರಿ ಅವಿವಾ ಜೊತೆ ಅಭಿಷೇಕ್ ಮದುವೆ ನಿಶ್ಚಯವಾಗಿದ್ದು ಈ ಕಾರ್ಯಕ್ರಮಕ್ಕೆ ಕೆಲವೇ ಜನರನ್ನು ಆಹ್ವಾನಿಸಲಾಗಿತ್ತು. ಅಂತೆಯೇ ರಾಜಕೀಯ ಗಣ್ಯರ ಚಿತ್ರನಟರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದ್ದು ಇಲ್ಲಿ ಮಗನ ಜೊತೆಗೆ ಸುಮಲತಾ ರವರ ಸುಂದರ ಕ್ಷಣಗಳನ್ನು ನೋಡಬಹುದು.