ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಅಪ್ಪನ ಹಾಗೆ ಕಾಮಿಡಿ ಮಾಡಿದ ಸ್ರಜನ್ ಲೋಕೇಶ್ ಮಗ…ಚಿಂದಿ ವಿಡಿಯೋ

891

Maja talkies Srujan Lokesh Son birthday: ನಟ ಸೃಜನ್​ ಲೋಕೇಶ್ ಅವರು ಕಿರುತೆರೆ ಲೋಕದಲ್ಲಿ ತುಂಬಾನೇ ಫೇಮಸ್​ ಆಗಿದ್ದು ಅವರು ನಡೆಸಿಕೊಡುತ್ತಿದ್ದ ಮಜಾ ಟಾಕೀಸ್​ ಶೋ ಸಾಕಷ್ಟು ಖ್ಯಾತಿ ಗಳಿಸಿಕೊಂಡಿತ್ತು. ಸದ್ಯ ಈಗ ಅವರು ಕಲರ್ಸ್​​ ಕನ್ನಡದ ಶೋಗಳಿಗೆ ಜಡ್ಜ್​​ ಆಗಿ ಬರುತ್ತಿದ್ದು ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ನನ್ನಮ್ಮ ಸೂಪರ್​ ಸ್ಟಾರ್​ ಕಾರ್ಯಕ್ರಮಕ್ಕೆ ನಿರ್ಣಾಯಕರಾಗಿ ಕೆಲಸ ಮಾಡುತ್ತಿದ್ದಾರೆ.

ಹೌದು ಈ ಶೋಗೆ ಅನೇಕ ಸೆಲೆಬ್ರಿಟಿಗಳು ಹಾಗೂ ಅವರ ಮಕ್ಕಳು ಪಾಲ್ಗೊಳ್ಳುತ್ತಿದ್ದಾರೆ. ಈ ಶೋ ಕಿರುತೆರೆ ಪ್ರೇಕ್ಷಕರನ್ನು ಸೆಳೆಯೋಕೆ ಯಶಸ್ವಿಯಾಗಿದೆ. ಇನ್ನು ಈ ವೇದಿಕೆ ಮೇಲೆ ಸೃಜನ್​ ಲೋಕೇಶ್​ ಮಗ ಸುಕೃತ್​ ಆಗಮಿಸಿದ್ದು ಈ ವೇಳೆ ಸುಕೃತ್ ಬಗ್ಗೆ​ ಸೃಜನ್​ ಅವರು ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು

ನನ್ನಮ್ಮ ಸೂಪರ್​ ಸ್ಟಾರ್​ ಕಾರ್ಯಕ್ರಮ ಕಿರುತೆರೆ ವೀಕ್ಷಕರಿಗೆ ಬಹಳ ಇಷ್ಟವಾಗಿದ್ದು ಪ್ರತಿ ಬಾರಿ ನೀಡುವ ನಾನಾ ಟಾಸ್ಕ್​ಗಳು ಗಮನ ಸೆಳೆಯುತ್ತಿವೆ. ಹೌದು ಅದರಲ್ಲೂ ಸೆಲೆಬ್ರಿಟಿ ಮಕ್ಕಳು ಮಾಡುವ ಕೀಟಲೆಗಳು ಒಂದೆರಡಲ್ಲ. ಅವರಾಡುವ ಚೂಟಿ ಮಾತುಗಳು ವೀಕ್ಷಕರಿಗೆ ಇಷ್ಟವಾಗುತ್ತಿದ್ದು ಆದರೆ ಈ ವೇದಿಕೆ ಹಲವು ಭಾವನಾತ್ಮಕ ವಿಚಾರಗಳಿಗೆ ಸಾಕ್ಷಿ ಆಯಿತು.

ಸೃಜನ್​ ಹಾಗೂ ಸುಕೃತ್​ ನಡುವೆ ನಡೆದ ಸಂಭಾಷಣೆ ಕೇಳಿ ಪ್ರೇಕ್ಷಕರು ಖುಷಿಪಟ್ಟಿದ್ದು ಅಪ್ಪ-ಮಗನ ಸಂಬಂಧದ ಬಗ್ಗೆ ಕೇಳಿ ಖುಷಿಪಟ್ಟಿದ್ದಾರೆ. ಹೌದು ನನ್ನಮ್ಮ ಸೂಪರ್​ ಸ್ಟಾರ್​ ವೇದಿಕೆ ಮೇಲೆ ಸುಕೃತ್​ ತೇರಾ ಏರಿ ಅಂಬರದಾಗೆ ಹಾಡಿಗೆ ಹೆಜ್ಜೆ ಹಾಕಿದನು. ಅವನು ಡ್ಯಾನ್ಸ್​ ಮಾಡಿದ ರೀತಿಗೆ ಸೃಜನ್​ ಲೋಕೇಶ್​ ಸಂತೋಷಪಟ್ಟಿದ್ದಾರೆ.

ಇದು ಸುಕೃತ್​ ತಾತ ಲೋಕೇಶ್​ ಡ್ಯಾನ್ಸ್​ ಮಾಡಿದ್ದ ಹಾಡಾಗಿತ್ತು ಅನ್ನೋದು ವಿಶೇಷವಾಗಿದ್ದು ಇದು ವೀಕ್ಷಕರಿಗೆ ಖುಷಿ ನೀಡಿದೆ. ಈ ಡ್ಯಾನ್ಸ್​ ಬಳಿಕ ಮಾತನಾಡಿದ ಸೃಜನ್​ ಅವರು ಇವನು ಡ್ಯಾನ್ಸ್​ ಮಾಡಿದ್ದು ನಿಜಕ್ಕೂ ಸರ್​ಪ್ರೈಸಿಂಗ್​ ಆಗಿತ್ತು ಎಂದರು. ಎಲ್ಲರೂ ಸುಕೃತ್​ ಡ್ಯಾನ್ಸ್​ಅನ್ನು ಕೊಂಡಾಡಿದರು.

 

ಸುಕೃತ್​ ಅಪ್ಪನ ಮಗ. ಇವನು ನನ್ನ ತಂದೆ ರೂಪ ಎಂದು ನಾನು ನಂಬಿದ್ದೇನೆ. ನಾನು ಮನೆಯಲ್ಲಿದ್ದಾಗ ದಿನಕ್ಕೆ ಒಮ್ಮೆ ಆದರೂ ಊಟ ಮಾಡಿಸುತ್ತೇನೆ. ಇಲ್ಲ ಎಂದರೆ ನನಗೆ ಸಮಾಧಾನ ಆಗೋದೆ ಇಲ್ಲ ಎಂದರು ಸೃಜನ್​. ಆ ಬಳಿಕ ಇಬ್ಬರೂ ತೇರಾ ಏರಿ ಅಂಬರದಾಗೆ ಹಾಡಿಗೆ ಹೆಜ್ಜೆ ಹಾಕಿದರು. ಇನ್ನು ಈ ಲೇಖನಿಯ ಕೆಳಗೆ ಅಪ್ಪ ಮಗನ ಕ್ಯೂಟ್ ಮೊಮೆಂಟ್ ನೋಡಬಹುದು.

ಸದ್ಯ ಈಗ ಸೃಜನ್ ಲೋಕೇಶ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. 2018 ರಲ್ಲಿ ಗಿರೀಶ್ಮಾ ಅವರು ಎರಡನೇಯ ಮಗುವಿಗೆ ಜನ್ಮ ಕೊಟ್ಟಿದ್ದಾರೆ. ಈಗ ಗಿರೀಶ್ಮಾ ಅವರು ಶ್ವೇತ ಚೆನ್ನಪ್ಪ ಅವರ ಜೊತೆ ಬ್ಯುಸಿನೆಸ್ ಪಾಟ್ನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಶ್ವೇತಾ ಚೆನ್ನಪ್ಪನವರಿಗೆ ಗಿರೀಶ್ಮಾ ಅವರು ತುಂಬಾ ವರ್ಷಗಳ ಕಾಲ ಪರಿಚಯ.

 

ಹಾಗು ಬೆಸ್ಟ್ ಪ್ರೆಂಡ್ಸ್ ಕೂಡ ಹೌದು.. ಆದ್ದರಿಂದ ಇಬ್ಬರು ಸೇರಿ ಬೆಂಗಳೂರಿನಲ್ಲಿ ಸ್ವಂತ ಸ್ಪಿನ್ ಅನ್ನು ಕೆಂಗೇರಿಯಲ್ಲಿ ಓಪನ್ ಮಾಡಿದ್ದಾರೆ. ಈಗ ಗಿರೀಶ್ಮಾ ಹಾಗು ಸೃಜನ್ ಲೋಕೇಶ್ ಅವರು ತುಂಬಾ ವರ್ಷಗಳ ಕಾಲ ಕಷ್ಟಗಳನ್ನು ಎದುರಿಸಿ ಈಗ ತುಂಬಾ ಅನ್ಯೋನ್ಯತೆಯಿಂದ ಜೀವನ ನಡೆಸುತ್ತಿದ್ದಾರೆ.