ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಫುಟ್ಬಾಲ್ ಜಗತ್ತು ಊಹಿಸದ ಗೋಲ್ ದಾಖಲು…ನೋಡಿ ಚಿಂದಿ ವಿಡಿಯೋ

3,741

ಸದ್ಯ ಫಿಫಾ ಫುಟ್ಬಾಲ್‌ ವಿಶ್ವಕಪ್‌ 2022ರ ಫೈನಲ್‌ ಪಂದ್ಯಕ್ಕಾಗಿ ಇಡೀ ಜಗತ್ತೇ ಕಾತರದಿಂದ ಕಾಯುತ್ತಿದೆ ಎನ್ನಬಹುದು. ಇದೇ ಭಾನುವಾರ(ಡಿ.18) ಕತಾರ್‌ನ ಲುಸೇಲ್‌ ಕ್ರೀಡಾಂಗಣದಲ್ಲಿ ನಡೆಯಲಿರುವ‌ ಫೈನಲ್‌ ಪಂದ್ಯದಲ್ಲಿ ಅರ್ಜೆಂಟೀನಾ ಹಾಗೂ ಫ್ರಾನ್ಸ್‌ ತಂಡಗಳು ಮುಖಾಮುಖಿಯಾಗಲಿದ್ದು
ಈ ಮಧ್ಯೆ ಫೈನಲ್‌ ಪಂದ್ಯದ ವೇಳೆ ಯಾವುದೇ ಅವಘಢ ಸಂಭವಿಸಿದಂತೆ ನೋಡಿಕೊಳ್ಳಲು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಭಾನುವಾರ(ಡಿ.18) ಫ್ರಾನ್ಸ್‌ನಾದ್ಯಂತ ಸುಮಾರು 14,000 ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲು ಫ್ರಾನ್ಸ್‌ ಸರ್ಕಾರ ತೀರ್ಮಾನಿಸಿರುವುದು ವಿಶೇಷ.

ಹೌದು ರಾಜಧಾನಿ ಪ್ಯಾರಿಸ್‌ ಸೇರಿದಂತೆ ದೇಶಾದ್ಯಂತ ಸರಿ ಸುಮಾರು 14,000 ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲು ನಿರ್ಧರಿಸಲಾಗಿದ್ದು ಪಂದ್ಯದ ಫಲಿತಾಂಶವನ್ನು ಆಧರಿಸಿ ಭುಗಿಲೇಳಬಹುದಾದ ಹಿಂಸಾತ್ಮಕ ಪ್ರತಿಭಟನೆ ಹಿಂಸಾತ್ಮಕ ವಿಜಯೋತ್ಸವವನ್ನು ತಡೆಯುವುದು ಈ ಸಿಬ್ಬಂದಿಯ ಜವಾಬ್ದಾರಿಯಾಗಿದೆ. ಇನ್ನು ಈ ಕುರಿತು ಫ್ರಾನ್ಸ್‌ನ ಆಂತರಿಕ ಸಚಿವ ಜೆರಾಲ್ಡ್ ಡಾರ್ಮಾನಿನ್ ಫಿಫಾ ವಿಶ್ವಕಪ್‌ ಫೈನಲ್‌ ಪಂದ್ಯದ ಫಲಿತಾಂಶ ಬೀರಬಹುದಾದ ಪರಿಣಾಮಗಳನ್ನು ಎದುರಿಸಲು ಪೊಲೀಸ್‌ ಇಲಾಖೆ ಸಜ್ಜಾಗಿದೆ ಎಂದು ಇದೀಗ ಸ್ಪಷ್ಟಪಡಿಸಿದ್ದಾರೆ.

1998 ಹಾಗೂ 2018ರಲ್ಲಿ ಫ್ರಾನ್ಸ್‌ ಫಿಫಾ ವಿಶ್ವಕಪ್‌ನ್ನು ಗೆದ್ದುಕೊಂಡಿದ್ದು ಈ ವೇಳೆ ಪ್ಯಾರಿಸ್‌ನ ಚಾಂಪ್ಸ್-ಎಲಿಸೀಸ್ ಅವೆನ್ಯೂದಲ್ಲೀ ಭಾರೀ ಸಂಭ್ರಮಾಚರಣೆ ಮಾಡಲಾಗಿತ್ತು.ಇನ್ನು ಈ ಸಂಭ್ರಮಾಚರಣೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ, ಭದ್ರತಾ ಸಮಸ್ಯೆ ಎದುರಾಗಿತ್ತು.

ನಾಲ್ಕು ವರ್ಷಗಳ ಹಿಂದೆ ಸುಮಾರು 600,000 ಜನರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು. ಹೌದು ಈ ಹಿನ್ನೆಲೆಯಲ್ಲಿ ಈ ಭಾನುವಾರ ಫೈನಲ್‌ ಪಂದ್ಯದ ವೇಳೆ ಚಾಂಪ್ಸ್-ಎಲಿಸೀಸ್ ಅವೆನ್ಯೂವನ್ನು ಸಂಚಾರಕ್ಕೆ ಮುಚ್ಚಲಾಗುತ್ತಿದ್ದು ಅಲ್ಲದೇ ಈ ಪ್ರದೇಶವೊಂದರಲ್ಲೇ ಸುಮಾರು 2,750 ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಜೆರಾಲ್ಡ್ ಡಾರ್ಮಾನಿನ್ ಮಾಹಿತಿ ನೀಡಿದ್ದಾರೆ.

ಪಸಕ್ತ ಪಂದ್ಯಾವಳಿಯ ಸೆಮಿಫೈನಲ್‌ ಪಂದ್ಯದಲ್ಲಿ ಫ್ರಾನ್ಸ್ ತಂಡವು ಮೊರೊಕ್ಕೊವನ್ನು ಸೋಲಿಸಿದ ನಂತರ ಫ್ರಾನ್ಸ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಈ ಹಿನ್ನೆಲೆಯಲ್ಲಿ ಫೈನಲ್‌ ಪಂದ್ಯದ ವೇಳೆ ಇಂತಹ ಯಾವುದೇ ಅವಘಢ ಸಂಭವಿಸದಂತೆ ನೋಡಿಕೊಳ್ಳಲು ನಾವು ತೀರ್ಮಾನಿಸಿದ್ದೇವೆ.

ಇದೇ ಕಾರಣಕ್ಕೆ ಭಾರೀ ಪ್ರಮಾಣದಲ್ಲಿ ಪೊಲೀಸ್‌ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಿದ್ದೇವೆ ಎಂದು ಜೆರಾಲ್ಡ್ ಡಾರ್ಮಾನಿನ್ ಸ್ಪಷ್ಟಪಡಿಸಿದ್ದಾರೆ. ಇನ್ನು ಮೊರಾಕ್ಕೊ ಮತ್ತು ಕ್ರೊಯೇಷಿಯಾ ನಡುವೆ ಮೂರನೇ ಸ್ಥಾನದ ರನ್-ಆಫ್ ಪಂದ್ಯ ನಡೆಯಲಿದ್ದು ಈ ವೇಳೆಯೂ ಫ್ರಾನ್ಸ್‌ನಾದ್ಯಂತ ಒಟ್ಟು 12,800 ಪೊಲೀಸ್ ಸಿಬ್ಬಂದಿಯನ್ನು ಭದ್ರತಾ ಕರ್ತವ್ಯಕ್ಕೆ ನಿಯೋಜಿಸಲಾಗುವುದು ಎಂದು ಜೆರಾಲ್ಡ್ ಡಾರ್ಮಾನಿನ್‌ ತಿಳಿಸಿದ್ದಾರೆ. ಸದ್ಯ ವಿಶ್ವಕಪ್ ಪ್ರಾರಂಭವಾದ ಬೆನ್ನಲ್ಲೆ ಸಾಮಾಜಿಕ ಜಾಲತಾಣದಲ್ಲಿ ಪುಟ್ಬಾಲ್ ನ ಅನೇಕ ವಿಡಿಯೋಗಳು ವೈರಲ್ ಆಗುತ್ತಿದ್ದು ಕೆಳಗಿನ ವಿಡಿಯೋದಲ್ಲಿ ಫುಟ್‌ಬಾಲ್‌ ನ ಇಂಬಾಸಿಬಲ್ ಮುಮೆಂಟ್ ನೋಡಬಹುದು.